AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RR ನಗರಕ್ಕೆ BJP ಅಭ್ಯರ್ಥಿ ನಾನೇ: ಚುನಾವಣೆ ಹೊಸ್ತಿಲಲ್ಲಿ ಹೀಗಂದಿದ್ದು ಯಾರು?

ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ! ಇಲ್ಲಿ ಯಾವ ಬಂಡೆ, ಕಲ್ಲು ಇಲ್ಲ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಆರ್.ಅಶೋಕ್, ಪಕ್ಷದ ಅಧಿಕೃತ ಅಭ್ಯರ್ಥಿ ಮುನಿರತ್ನಗೆ ಶಕ್ತಿ ತುಂಬಲು ಹೀಗೆ ಹೇಳಿರುವುದಾಗಿ ತಿಳಿದುಬಂದಿದೆ. ಜೊತೆಗೆ ತನ್ಮೂಲಕ ಪ್ರತಿಪಕ್ಷದ ಪಾಳಯಕ್ಕೆ ಖಡಕ್ ಸಂದೇಶವನ್ನೂ ರವಾನಿಸಿರುವುದಾಗಿ ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಮುನಿರತ್ನ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಕಂದಾಯ ಸಚಿವ ಅಶೋಕ್ ಅವರು ಬಂಡೆ, ಕಲ್ಲು ಏನೇ ಇದ್ದರು ಅದು […]

RR ನಗರಕ್ಕೆ BJP ಅಭ್ಯರ್ಥಿ ನಾನೇ: ಚುನಾವಣೆ ಹೊಸ್ತಿಲಲ್ಲಿ ಹೀಗಂದಿದ್ದು ಯಾರು?
ಸಾಧು ಶ್ರೀನಾಥ್​
| Edited By: |

Updated on:Oct 14, 2020 | 12:29 PM

Share

ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ! ಇಲ್ಲಿ ಯಾವ ಬಂಡೆ, ಕಲ್ಲು ಇಲ್ಲ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಆರ್.ಅಶೋಕ್, ಪಕ್ಷದ ಅಧಿಕೃತ ಅಭ್ಯರ್ಥಿ ಮುನಿರತ್ನಗೆ ಶಕ್ತಿ ತುಂಬಲು ಹೀಗೆ ಹೇಳಿರುವುದಾಗಿ ತಿಳಿದುಬಂದಿದೆ. ಜೊತೆಗೆ ತನ್ಮೂಲಕ ಪ್ರತಿಪಕ್ಷದ ಪಾಳಯಕ್ಕೆ ಖಡಕ್ ಸಂದೇಶವನ್ನೂ ರವಾನಿಸಿರುವುದಾಗಿ ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಮುನಿರತ್ನ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಕಂದಾಯ ಸಚಿವ ಅಶೋಕ್ ಅವರು ಬಂಡೆ, ಕಲ್ಲು ಏನೇ ಇದ್ದರು ಅದು ಕನಕಪುರದಲ್ಲಿ ಮಾತ್ರ. ಇಲ್ಲಿ ಅವರ ಆಟ ನಡೆಯುವುದಿಲ್ಲ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರಿಗೆ ಟಾಂಗ್​ ನೀಡಿದರು.

Published On - 12:27 pm, Wed, 14 October 20