ರಾಯಚೂರು: ರೋಗಿಗಳ ತುರ್ತು ಸೇವೆಗೆ ಬಳಸಬೇಕಿದ್ದ ಆ್ಯಂಬುಲೆನ್ಸ್ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯ ಮಹಾ ಎಡವಟ್ಟು ಬಯಲಾಗಿದೆ. ರೋಗಿಗಳಿಗಲ್ಲ, ಗಣಿ ಕಾರ್ಮಿಕರ ಪ್ರಯಾಣಕ್ಕೆ ಆ್ಯಂಬುಲೆನ್ಸ್ ಬಳಕೆ ಮಾಡಿಕೊಳ್ಳಲಾಗಿದೆ.
ಹಟ್ಟಿ ಚಿನ್ನದ ಗಣಿಯಿಂದ ಊಟಿ ಚಿನ್ನದ ಗಣಿಗೆ ಪ್ರತಿನಿತ್ಯ ಸೈರನ್ ಹಾಕಿಕೊಂಡು ಆ್ಯಂಬುಲೆನ್ಸ್‌ನಲ್ಲಿಯೇ ಗಣಿ ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಅನುಮಾನ ಬಂದು ವಂದಲಿ ಗ್ರಾಮಸ್ಥರು ಆ್ಯಂಬುಲೆನ್ಸ್ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಹಟ್ಟಿ ಚಿನ್ನದ ಗಣಿ ಕಂಪನಿಯ ಮಹಾ ಎಡವಟ್ಟು ಬಯಲಾಗಿದೆ.
ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಆರೋಗ್ಯ ಹದಹೆಟ್ಟರೆ ಬೇಗ ಅಂಬುಲೆನ್ಸ್ ಕಳಿಸಲ್ಲ. ಅಂತಹದರಲ್ಲಿ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಬಳಕೆಯಾಗಬೇಕಿದ್ದ ಆ್ಯಂಬುಲೆನ್ಸ್ ಬೇಕಾ ಬಿಟ್ಟಿ ದುರ್ಬಳಕೆಯಾಗುತ್ತಿದೆ. ಈ ರೀತಿ ಆ್ಯಂಬುಲೆನ್ಸ್ನಲ್ಲಿ ಕಾರ್ಮಿಕರನ್ನ ಸಾಗಿಸಲು ಅನುಮತಿ ಕೊಟ್ಟವಾರರು. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾರ್ಮಿಕರು ಆಗ್ರಹಿಸಿದ್ದಾರೆ.