‘ಆನಂದ’ದ ಪಯಣ.. ಹೆಲಿಕಾಪ್ಟರ್ ಹತ್ತಿಸಿ ಅಭಿಮಾನಿಗಳ ಆಸೆ ಈಡೇರಿಸಿದ ಸಚಿವ ಆನಂದ್ ಸಿಂಗ್!

ಬಳ್ಳಾರಿ: ಹೆಲಿಕಾಪ್ಟರ್​ನಲ್ಲಿ ತನ್ನ ಅಭಿಮಾನಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ಮೂಲಕ ಸಚಿವ ಆನಂದ್ ಸಿಂಗ್ ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ. ಹಂಪಿ ವಿವಿ ಹೆಲಿಪ್ಯಾಡ್​ನಿಂದ ಬೆಂಗಳೂರಿಗೆ ಸಚಿವರ ಆನಂದ್ ಸಿಂಗ್ ತಮ್ಮ ಅಭಿಮಾನಿಗಳ ಜೊತೆ ಕುಳಿತು ಮಾತನಾಡುತ್ತಾ ಆನಂದದಿಂದ ಪ್ರಯಾಣ ಮಾಡಿದ್ದಾರೆ. ‘ಆನಂದ’ದ ಪಯಣ.. ಹೊಸಪೇಟೆಯ ಜೋಗಿ ತಾಯಪ್ಪ ಹಾಗೂ ಅಂಥೋನಿ ದಾಸ್ ಎಂಬ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಆನಂದ್ ಸಿಂಗ್ ಜೊತೆ ಹೆಲಿಕ್ಯಾಪ್ಟರ್​ನಲ್ಲಿ ಪ್ರಯಾಣ ಮಾಡಬೇಕು ಎಂಬ ಕನಸು ಕಂಡಿದ್ದರು. ಸದ್ಯ ಈಗ ಇವರ ಕನಸನ್ನು […]

‘ಆನಂದ’ದ ಪಯಣ.. ಹೆಲಿಕಾಪ್ಟರ್ ಹತ್ತಿಸಿ ಅಭಿಮಾನಿಗಳ ಆಸೆ ಈಡೇರಿಸಿದ ಸಚಿವ ಆನಂದ್ ಸಿಂಗ್!
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Nov 11, 2020 | 10:51 AM

ಬಳ್ಳಾರಿ: ಹೆಲಿಕಾಪ್ಟರ್​ನಲ್ಲಿ ತನ್ನ ಅಭಿಮಾನಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ಮೂಲಕ ಸಚಿವ ಆನಂದ್ ಸಿಂಗ್ ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ. ಹಂಪಿ ವಿವಿ ಹೆಲಿಪ್ಯಾಡ್​ನಿಂದ ಬೆಂಗಳೂರಿಗೆ ಸಚಿವರ ಆನಂದ್ ಸಿಂಗ್ ತಮ್ಮ ಅಭಿಮಾನಿಗಳ ಜೊತೆ ಕುಳಿತು ಮಾತನಾಡುತ್ತಾ ಆನಂದದಿಂದ ಪ್ರಯಾಣ ಮಾಡಿದ್ದಾರೆ.

‘ಆನಂದ’ದ ಪಯಣ..
ಹೊಸಪೇಟೆಯ ಜೋಗಿ ತಾಯಪ್ಪ ಹಾಗೂ ಅಂಥೋನಿ ದಾಸ್ ಎಂಬ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಆನಂದ್ ಸಿಂಗ್ ಜೊತೆ ಹೆಲಿಕ್ಯಾಪ್ಟರ್​ನಲ್ಲಿ ಪ್ರಯಾಣ ಮಾಡಬೇಕು ಎಂಬ ಕನಸು ಕಂಡಿದ್ದರು. ಸದ್ಯ ಈಗ ಇವರ ಕನಸನ್ನು ಸಚಿವರು ಈಡೇರಿಸಿದ್ದಾರೆ.

ಹೆಲಿಕ್ಯಾಪ್ಟರ್​ನಲ್ಲಿ ಬೆಂಗಳೂರಿಗೆ ಪ್ರಯಾಣಿಸಿ ಬಳಿಕ ಮರಳಿ ಬರುವಾಗ ಅಭಿಮಾನಿಗಳನ್ನ ತಮ್ಮದೇ ಕಾರಿನಲ್ಲಿ ಆನಂದ್ ಸಿಂಗ್ ಕರೆದುಕೊಂಡು ಬಂದಿದ್ದಾರೆ. ತಮ್ಮ ನೆಚ್ಚಿನ ನಾಯಕ ತಮ್ಮ ಆಸೆ ಈಡೇರಿಸಿದ್ದಕ್ಕೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜನ ನಾಯಕನನ್ನು ಕೊಂಡಾಡಿದ್ದಾರೆ.

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us