ಪ್ರಪಂಚದ ಎದುರು ದೇಶವೇ ತಲೆ ತಗ್ಗಿಸುವ ತೀರ್ಪು ಇದಾಗಿದೆ: SDPI

ಮಂಗಳೂರು: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳು ನಿರ್ದೋಷಿ ಎಂಬ ತೀರ್ಪು ಹೊರ ಬಿದ್ದಿದೆ. ಈ ತೀರ್ಪು ಈ ದೇಶ, ಪ್ರಪಂಚದ ಎದುರು ತಲೆ ತಗ್ಗಿಸುವ ತೀರ್ಪನ್ನು ಲಕ್ನೋ ಕೋರ್ಟ್ ನೀಡಿದೆ ಎಂದು ಮಂಗಳೂರಲ್ಲಿ SDPI ರಾಜ್ಯ ಕಾರ್ಯದರ್ಶಿ ಅಶ್ರಫ್ ಹೇಳಿದ್ದಾರೆ. ಭಾರತದಲ್ಲಿ ನಿಜವಾಗಿಯೂ ಪ್ರಜಾಪ್ರಭುತ್ವ ಇದೆಯಾ ಅನ್ನೋ ಸಂಶಯ ಮೂಡ್ತಿದೆ. ನ್ಯಾಯಾಲಯದಲ್ಲೂ ನ್ಯಾಯ ಸಿಗ್ತಿಲ್ಲ ಅನ್ನೋದಾದ್ರೆ ಈ ದೇಶ ಎತ್ತ ಕಡೆ ಸಾಗುತ್ತಿದೆ. ರಾಮಮಂದಿರ ತೀರ್ಪಿನಲ್ಲೂ ಬಾಬ್ರಿ ಧ್ವಂಸ ಅಪರಾಧ ಅಂತ ಸುಪ್ರೀಂ ಕೋರ್ಟ್ ಹೇಳಿತ್ತು. […]

ಪ್ರಪಂಚದ ಎದುರು ದೇಶವೇ ತಲೆ ತಗ್ಗಿಸುವ ತೀರ್ಪು ಇದಾಗಿದೆ: SDPI
Edited By:

Updated on: Sep 30, 2020 | 2:45 PM

ಮಂಗಳೂರು: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳು ನಿರ್ದೋಷಿ ಎಂಬ ತೀರ್ಪು ಹೊರ ಬಿದ್ದಿದೆ. ಈ ತೀರ್ಪು ಈ ದೇಶ, ಪ್ರಪಂಚದ ಎದುರು ತಲೆ ತಗ್ಗಿಸುವ ತೀರ್ಪನ್ನು ಲಕ್ನೋ ಕೋರ್ಟ್ ನೀಡಿದೆ ಎಂದು ಮಂಗಳೂರಲ್ಲಿ SDPI ರಾಜ್ಯ ಕಾರ್ಯದರ್ಶಿ ಅಶ್ರಫ್ ಹೇಳಿದ್ದಾರೆ.

ಭಾರತದಲ್ಲಿ ನಿಜವಾಗಿಯೂ ಪ್ರಜಾಪ್ರಭುತ್ವ ಇದೆಯಾ ಅನ್ನೋ ಸಂಶಯ ಮೂಡ್ತಿದೆ. ನ್ಯಾಯಾಲಯದಲ್ಲೂ ನ್ಯಾಯ ಸಿಗ್ತಿಲ್ಲ ಅನ್ನೋದಾದ್ರೆ ಈ ದೇಶ ಎತ್ತ ಕಡೆ ಸಾಗುತ್ತಿದೆ.

ರಾಮಮಂದಿರ ತೀರ್ಪಿನಲ್ಲೂ ಬಾಬ್ರಿ ಧ್ವಂಸ ಅಪರಾಧ ಅಂತ ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಕೋರ್ಟ್​ನ ಇವತ್ತಿನ ತೀರ್ಪು ದೇಶದಲ್ಲಿ ನ್ಯಾಯ ಉಳಿದಿಲ್ಲ ಅನ್ನೋವಷ್ಟರ ಮಟ್ಟಿಗೆ ನಾಚಿಗೆಕೇಡು.

28 ವರ್ಷ ಕಾದರೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಅಂತಾದ್ರೆ ನ್ಯಾಯ ಎಲ್ಲಿದೆ. ಬಿಜೆಪಿ ಮತ್ತು ಸಂಘ ಪರಿವಾರ ಪ್ರಭುತ್ವ ಮೀರಿ ದೇಶ ಒಡೆಯಲು ಯತ್ನಿಸುತ್ತಿದೆ ಎಂದು ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.