AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆಯಲಿ ಜೀವನ್ಮರಣ ಹೋರಾಟ ನಡೆಸ್ತಿದ್ದ ಹದ್ದಿಗೆ ಮಡಿವಾಳ ಪೊಲೀಸರ ಆಸರೆ!

ಬೆಂಗಳೂರು: ಮಡಿವಾಳ ಟ್ರಾಫಿಕ್ ಪೊಲೀಸರು ಹದ್ದಿನ ರಕ್ಷಣೆ ಮಾಡಿದ್ದಾರೆ. ನಿನ್ನೆಯಿಂದಲೂ ಠಾಣೆಯ ಸುತ್ತಮುತ್ತ ಹಾರಾಡ್ತಿದ್ದ ಹದ್ದು ಇಂದು ಪೊಲೀಸರೇ ತನ್ನ ಆರಕ್ಷಿಸಬೇಕು ಎಂದು ಬಯಸಿ, ಠಾಣೆಯೆದುರೇ ಪ್ರತ್ಯಕ್ಷವಾಗಿತ್ತು. ಆಹಾರವಿಲ್ಲದೇ ನಿತ್ರಾಣವಾಗಿದ್ದ ಆ ಹದ್ದು ರೆಕ್ಕೆ ಬಿಚ್ಚಿ ಹಾರಾಡಲಾಗದೆ ನಡುರಸ್ತೆಯಲ್ಲೆ ಪರಿತಪಿಸುತ್ತಿತ್ತು. ಮಡಿವಾಳ ಟ್ರಾಫಿಕ್ ಪಿಎಸ್ಐ ಶಿವರಾಜ್ ಕುಮಾರ್ ಮತ್ತು ಸಿಬ್ಬಂದಿಗೆ ವೆಹಿಕಲ್ ಚೆಕ್ಕಿಂಗ್ ವೇಳೆ ಈ ಹದ್ದು ನಿತ್ರಾಣವಾಗಿ ನಡುರಸ್ತೆಯಲ್ಲಿ ಪರಿತಪಿಸುತ್ತಿದ್ದಿದ್ದು ಕಂಡು ಬಂದಿದೆ. ಕೂಡಲೇ ಕರ್ತವ್ಯನಿರತ ಪಿಎಸ್ ಐ ಶಿವರಾಜ್ ಕುಮಾರ್ ಅಸ್ವಸ್ಥವಾಗಿದ್ದ ಹದ್ದಿಗೆ ನೀರುಣಿಸಿ […]

ರಸ್ತೆಯಲಿ ಜೀವನ್ಮರಣ ಹೋರಾಟ ನಡೆಸ್ತಿದ್ದ ಹದ್ದಿಗೆ ಮಡಿವಾಳ ಪೊಲೀಸರ ಆಸರೆ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Apr 17, 2020 | 2:14 PM

Share

ಬೆಂಗಳೂರು: ಮಡಿವಾಳ ಟ್ರಾಫಿಕ್ ಪೊಲೀಸರು ಹದ್ದಿನ ರಕ್ಷಣೆ ಮಾಡಿದ್ದಾರೆ. ನಿನ್ನೆಯಿಂದಲೂ ಠಾಣೆಯ ಸುತ್ತಮುತ್ತ ಹಾರಾಡ್ತಿದ್ದ ಹದ್ದು ಇಂದು ಪೊಲೀಸರೇ ತನ್ನ ಆರಕ್ಷಿಸಬೇಕು ಎಂದು ಬಯಸಿ, ಠಾಣೆಯೆದುರೇ ಪ್ರತ್ಯಕ್ಷವಾಗಿತ್ತು.

ಆಹಾರವಿಲ್ಲದೇ ನಿತ್ರಾಣವಾಗಿದ್ದ ಆ ಹದ್ದು ರೆಕ್ಕೆ ಬಿಚ್ಚಿ ಹಾರಾಡಲಾಗದೆ ನಡುರಸ್ತೆಯಲ್ಲೆ ಪರಿತಪಿಸುತ್ತಿತ್ತು. ಮಡಿವಾಳ ಟ್ರಾಫಿಕ್ ಪಿಎಸ್ಐ ಶಿವರಾಜ್ ಕುಮಾರ್ ಮತ್ತು ಸಿಬ್ಬಂದಿಗೆ ವೆಹಿಕಲ್ ಚೆಕ್ಕಿಂಗ್ ವೇಳೆ ಈ ಹದ್ದು ನಿತ್ರಾಣವಾಗಿ ನಡುರಸ್ತೆಯಲ್ಲಿ ಪರಿತಪಿಸುತ್ತಿದ್ದಿದ್ದು ಕಂಡು ಬಂದಿದೆ.

ಕೂಡಲೇ ಕರ್ತವ್ಯನಿರತ ಪಿಎಸ್ ಐ ಶಿವರಾಜ್ ಕುಮಾರ್ ಅಸ್ವಸ್ಥವಾಗಿದ್ದ ಹದ್ದಿಗೆ ನೀರುಣಿಸಿ ಆರೈಕೆ ಮಾಡಿದ್ದಾರೆ. ಹಾರಾಲಾಗದೆ ನಿತ್ರಾಣವಾಗಿದ್ದ ಹದ್ದಿಗೆ ನೀರುಣಿಸಿ ಮಾನವೀಯತೆ ಮೆರೆದಿದ್ದಾರೆ. ಜೊತೆಗೆ ಅಗತ್ಯ ವೈದ್ಯಕೀಯ ನೆರವನ್ನೂ ಕಲ್ಪಿಸಿದ್ದಾರೆ. ಬಳಿಕ ಬನ್ನೇರುಘಟ್ಟ ಸಮೀಪದ ಪ್ರಾಣಿ ದಯಾ ಸಂಘದ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.

ಮಡಿವಾಳ ಸಂಚಾರಿ ಠಾಣೆಯ ಮುಖ್ಯ ಪೇದೆ ಲೋಕೇಶ್ ಮತ್ತು ಮಲ್ಲಿಕಾರ್ಜುನ ಸಹ ಇದರಲ್ಲಿ ನೆರವಿನ ಹಸ್ತ ಚಾಚಿದ್ದಾರೆ.

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು