ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾದ BCCI ಅಧ್ಯಕ್ಷ ಸೌರವ್​ ಗಂಗೂಲಿ

ಇಂದು ಬೆಳಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದ ಗಂಗೂಲಿಯನ್ನು ಕೋಲ್ಕತ್ತಾದ ವುಡ್‌ಲ್ಯಾಂಡ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಂಜಿಯೋಪ್ಲ್ಯಾಸ್ಟಿ ಮಾಡಿದ ನಂತರ ಭಾರತದ ಮಾಜಿ ನಾಯಕ ಆಸ್ಪತ್ರೆಯಿಂದ ತೆರಳುವ ಸಾಧ್ಯತೆಯಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾದ BCCI ಅಧ್ಯಕ್ಷ ಸೌರವ್​ ಗಂಗೂಲಿ
ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ
Updated By: KUSHAL V

Updated on: Jan 02, 2021 | 5:33 PM

ಕೋಲ್ಕತ್ತಾ: ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋಲ್ಕತ್ತಾದ ವುಡ್‌ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಂದು ಬೆಳಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದ ಗಂಗೂಲಿಯನ್ನು ಕೋಲ್ಕತ್ತಾದ ವುಡ್‌ಲ್ಯಾಂಡ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಂಜಿಯೋಪ್ಲ್ಯಾಸ್ಟಿ ಮಾಡಿದ ನಂತರ ಭಾರತದ ಮಾಜಿ ನಾಯಕ ಆಸ್ಪತ್ರೆಯಿಂದ ತೆರಳುವ ಸಾಧ್ಯತೆಯಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಜಿಮ್‌ನಲ್ಲಿ ದೇಹ ದಂಡಿಸುತ್ತಿದ್ದ ಗಂಗೂಲಿಗೆ ಇದ್ದಕ್ಕಿದಂತೆ ತಲೆತಿರುಗಿದಂತಾಗಿದೆ. ಹೀಗಾಗಿ ಗಂಗೂಲಿಯನ್ನು ತಕ್ಷಣವೇ ವುಡ್‌ಲ್ಯಾಂಡ್ಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಗಂಗೂಲಿಯನ್ನು ಪರೀಕ್ಷಿಸಿದ ಆಸ್ಪತ್ರೆ ವೈದ್ಯರು, ಗಂಗೂಲಿಗೆ ಹೃದಯ ಸಮಸ್ಯೆಯಿದೆ ಎಂದು ತಿಳಿಸಿದ್ದಾರೆ. ಈಗ ಡಾ. ಸರೋಜ್ ಮೊಂಡಾಲ್ ಜೊತೆ 3 ಸದಸ್ಯರನ್ನೊಳಗೊಂಡ ವೈದ್ಯರ ತಂಡ ಗಂಗೂಲಿಗೆ ಚಿಕಿತ್ಸೆ ನೀಡುತ್ತಿದೆ.

‘ದಾದಾ ಆರೋಗ್ಯ ಸ್ಥಿರವಾಗಿದೆ, 24 ಗಂಟೆಗಳ ಕಾಲ ನಿಗಾದಲ್ಲಿಟ್ಟಿದ್ದೇವೆ’
ಸದ್ಯ, ಸೌರವ್ ಗಂಗೂಲಿಗೆ ಌಂಜಿಯೋಪ್ಲಾಸ್ಟಿ ನಡೆಸಿರುವ ವೈದ್ಯರು ಕೋಲ್ಕತ್ತಾದ ವುಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಸೌರವ್​ ಆರೋಗ್ಯ ಸ್ಥಿರವಾಗಿದೆ. 24 ಗಂಟೆಗಳ ಕಾಲ ನಿಗಾದಲ್ಲಿಟ್ಟಿದ್ದೇವೆ ಎಂದು ವುಡ್‌ಲ್ಯಾಂಡ್ ಆಸ್ಪತ್ರೆಯ ವೈದ್ಯ ಅಫ್ತಾಬ್ ಖಾನ್ ಮಾಹಿತಿ ಕೊಟ್ಟಿದ್ದಾರೆ.

ಸೌರವ್ ಗಂಗೂಲಿ ಹೃದಯದಲ್ಲಿ ಎರಡು ಅಡೆತಡೆಗಳು ಇವೆ. ಇದಕ್ಕೆ ಚಿಕಿತ್ಸೆ ಮುಂದುವರಿಸುತ್ತೇವೆ ಎಂದು ವೈದ್ಯ ಅಫ್ತಾಬ್ ಖಾನ್ ಹೇಳಿದ್ದಾರೆ.

Published On - 2:34 pm, Sat, 2 January 21