ವಿಕ್ಟೋರಿಯಾ ಆಸ್ಪತ್ರೆಗೆ ಪಾದರಾಯನಪುರ ಕಾರ್ಪೊರೇಟರ್ ಪಾಷಾ ಶಿಫ್ಟ್
ಬೆಂಗಳೂರು: ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಪಾದರಾಯನಪುರ ಕಾರ್ಪೊರೇಟರ್ರನ್ನ ಆರೋಗ್ಯಾಧಿಕಾರಿಗಳು ಕರೆದೊಯ್ದಿದ್ದಾರೆ. ಪಿಪಿಇ ಕಿಟ್ ಹಾಕಿಕೊಂಡು ಕಾರ್ಪೊರೇಟರ್ ಆಸ್ಪತ್ರೆಗೆ ತೆರಳಿದರು. ಕೊರೊನಾ ವಕ್ಕರಿಸಿರುವ ಕಾರಣ ಪಾದರಾಯನಪುರ ಕಾರ್ಪೊರೇಟರ್ ಮನೆಗೆ ಆರೋಗ್ಯ ಸಿಬ್ಬಂದಿ ರಾಸಾಯನಿಕ ಸಿಂಪಡಣೆ ಮಾಡಿದರು. ಕಾರ್ಪೊರೇಟರ್ರನ್ನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆ್ಯಂಬುಲೆನ್ಸ್ ಹಿಂದೆಯೇ ಸ್ಥಳೀಯ ಶಾಸಕ ಜಮೀರ್ ಅಹಮದ್ ಹೊರಟಿದ್ದಾರೆ. ನನಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ! ನನಗೆ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆ ಇತ್ತು. ನನಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. […]
ಬೆಂಗಳೂರು: ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಪಾದರಾಯನಪುರ ಕಾರ್ಪೊರೇಟರ್ರನ್ನ ಆರೋಗ್ಯಾಧಿಕಾರಿಗಳು ಕರೆದೊಯ್ದಿದ್ದಾರೆ. ಪಿಪಿಇ ಕಿಟ್ ಹಾಕಿಕೊಂಡು ಕಾರ್ಪೊರೇಟರ್ ಆಸ್ಪತ್ರೆಗೆ ತೆರಳಿದರು.
ಕೊರೊನಾ ವಕ್ಕರಿಸಿರುವ ಕಾರಣ ಪಾದರಾಯನಪುರ ಕಾರ್ಪೊರೇಟರ್ ಮನೆಗೆ ಆರೋಗ್ಯ ಸಿಬ್ಬಂದಿ ರಾಸಾಯನಿಕ ಸಿಂಪಡಣೆ ಮಾಡಿದರು. ಕಾರ್ಪೊರೇಟರ್ರನ್ನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆ್ಯಂಬುಲೆನ್ಸ್ ಹಿಂದೆಯೇ ಸ್ಥಳೀಯ ಶಾಸಕ ಜಮೀರ್ ಅಹಮದ್ ಹೊರಟಿದ್ದಾರೆ.
ನನಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ! ನನಗೆ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆ ಇತ್ತು. ನನಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಹೀಗಾಗಿ ನಾನು ಈಗ ವಿಕ್ಟೋರಿಯಾ ಆಸ್ಪತ್ರೆಗೆ ಹೋಗುತ್ತಿದ್ದೇನೆ. ನಿನ್ನೆ ನನಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ನಂತರ ಕೊರೊನಾ ಟೆಸ್ಟ್ ಮಾಡಿಸಿದಾಗ ದೃಢವಾಗಿತ್ತು. ಮೊದಲ ದಿನದಿಂದ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದೆ. ಹೀಗಾಗಿ ಜನರು ಪ್ರೀತಿ, ವಿಶ್ವಾಸದಿಂದ ಬಂದಿದ್ದಾರೆ. ನಮ್ಮ ಮನೆಯ ಮುಂದೆ ಜನರು ಜಮಾಯಿಸಿದ್ದರು. ವರದಿ ಬರುವುದು ತಡವಾಗಿತ್ತು. ಹೀಗಾಗಿ ವರದಿಗಾಗಿ ನಾನು ಕಾಯುತ್ತಾ ಮನೆಯಲ್ಲಿದ್ದೆ.
ವರದಿ ಬಂದ ಬಳಿಕ ನಾನು ಆಸ್ಪತ್ರೆಗೆ ಹೋಗುತ್ತಿದ್ದೇನೆ. ನಿನ್ನೆ 5 ಗಂಟೆ ಸುಮಾರಿಗೆ ಕೊವಿಡ್ ಟೆಸ್ಟ್ ಮಾಡಿಸಿದ್ದೆ. ನನ್ನ ಜತೆ ಸುಮಾರು 20 ಜನರು ಸಂಪರ್ಕದಲ್ಲಿದ್ದರು. ಅವರೂ ಕೂಡ ಆಸ್ಪತ್ರೆಗೆ ಬರುವುದಾಗಿ ಹೇಳುತ್ತಿದ್ದಾರೆ. ಆದರೆ ಸದ್ಯಕ್ಕೆ ಬರಬೇಡಿ ಎಂದು ನಾನು ಹೇಳಿದ್ದೇನೆ ಎಂದು ಟಿವಿ9ಗೆ ಪಾದರಾಯನಪುರ ಕಾರ್ಪೊರೇಟರ್ ಹೇಳಿಕೆ ನೀಡಿದ್ದಾರೆ.
ನನ್ನ ಮನೆಯನ್ನ ಬಿಟ್ಟು ಎಲ್ಲೂ ಹೋಗಿಲ್ಲ: ನನ್ನ ಸಂಪರ್ಕದಲ್ಲಿದ್ದವರಿಗೆ ಪ್ರತ್ಯೇಕವಾಗಿ ಇರುವಂತೆ ತಿಳಿಸಿದ್ದೇನೆ. ಕೆಲ ದಿನಗಳ ಹಿಂದೆ ಕೊರೊನಾ ಲಕ್ಷಣ ಕಂಡ ಬಂದಿತ್ತು. ಆನಂತರ ನಾನು ನನ್ನ ಮನೆಯನ್ನು ಬಿಟ್ಟು ಎಲ್ಲೂ ಹೋಗಿಲ್ಲ. ನಾನು ನನ್ನ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿದ್ದೆ. ನನ್ನ ಮಕ್ಕಳನ್ನು ಕೂಡ ನಾನು ಭೇಟಿಯಾಗಿಲ್ಲ.
ಕಿಟ್ ಕೊಡಿಸುವುದಕ್ಕೆ ನಾನು ಒಮ್ಮೆ ಹೊರಗೆ ಹೋಗಿದ್ದೆ. ನಾನು ಪೊಲೀಸ್ ಠಾಣೆಯ ಕಡೆ ಹೋಗಿಯೇ ಇಲ್ಲ. ನನ್ನ ಬದಲಿಗೆ ನನ್ನ ಸಹೋದರನನ್ನು ಠಾಣೆಗೆ ಕಳಿಸಿದ್ದೆ. ನಾನು ಯಾರನ್ನ ಭೇಟಿಯಾಗಿದ್ದೆ ಎಂದು ವೈದ್ಯರಿಗೆ ಎಲ್ಲಾ ರೀತಿಯ ಮಾಹಿತಿಯನ್ನು ನೀಡಿದ್ದೇನೆ.
ರಂಜಾನ್ ದಿನ ಭೇಟಿಯಾದವರು ಹುಷಾರಾಗಿರಬೇಕು: ರಂಜಾನ್ ಹಬ್ಬದ ಬಳಿಕ ಕೊರೊನಾ ಲಕ್ಷಣ ಕಾಣಿಸಿಕೊಂಡಿತ್ತು. ಆ ದಿನ ನನ್ನನ್ನು ಭೇಟಿಯಾದವರು ಸ್ವಲ್ಪ ಹುಷಾರಾಗಿರಬೇಕು. ಸೋಂಕಿನ ಲಕ್ಷಣ ಕಂಡು ಬಂದ ಬಳಿಕ ನಾನು ಹೋಗಿಲ್ಲ. ನಾನು ಕೊರೊನಾ ಸೋಂಕಿತರನ್ನು ಭೇಟಿಯಾಗಿಲ್ಲ. ನಾನು ಶಾಸಕ ಜಮೀರ್ ಅಹಮದ್ರನ್ನೂ ಭೇಟಿಯಾಗಿಲ್ಲ.
ನಿನ್ನೆ ರಾತ್ರಿ ಮನೆಯಲ್ಲಿ ನಾನು ಮಲಗಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ಬರುವುದಕ್ಕೆ ತಡವಾಯಿತು. ನಾವು 4 ಜನರಿಗೆ ಬುದ್ಧಿ ಹೇಳುವವರು ತಡ ಮಾಡಬಾರದು. ನಾವಾಗಿಯೇ ಆಸ್ಪತ್ರೆಗೆ ಹೋಗಬೇಕು. ಪೊಲೀಸರಿಗೆ ಊಟ ಹಂಚಿಕೆ ಮಾಡಿದ್ದು ನಾನಲ್ಲ. ನನ್ನ ಸಹೋದರ ಪೊಲೀಸರಿಗೆ ಊಟ ಹಂಚಿಕೆ ಮಾಡಿದ್ದಾರೆ ಎಂದು ಟಿವಿ9ಗೆ ಕಾರ್ಪೊರೇಟರ್ ಪಾಷಾ ಮಾಹಿತಿ ನೀಡಿದ್ದಾರೆ.
Published On - 12:37 pm, Sat, 30 May 20