ಅಡುಗೆ ಕೆಲಸದವನಿಂದ್ಲೇ ಲಾಕರ್ ಕಳ್ಳತನ, ಉಂಡ ಮನೆಗೆ ಕನ್ನ ಹಾಕೋಕೆ ಹೋಗಿ ಲಾಕ್

ಬೆಂಗಳೂರು: ಬೇರೆ ರಾಜ್ಯದಿಂದ ಬಂದು ಅಡುಗೆ ಕೆಲಸ ಮಾಡ್ಕೊಂಡು ಇದ್ದು, ಅದೇ ಮನೆಯಲ್ಲಿ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ನಿವಾಸಿ ಕೈಲಾಸ್ ದಾಸ್ ಎಂಬಾತ ಜೆ.ಪಿ.ನಗರದ ರಾಜೇಶ್ ಬಾಬು ಎಂಬುವರ ಮನೆಯಲ್ಲಿ 6 ವರ್ಷದಿಂದ ಅಡುಗೆ ಕೆಲಸ ಮಾಡ್ಕೊಂಡು ಇವರ ಮನೆಯಲ್ಲೇ ವಾಸವಿದ್ದ. ಇತ್ತೀಚೆಗೆ ಈ ಮನೆಯ ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ರು. ಈ ವೇಳೆ ಉಂಡು ತಿಂದ ಮನೆಗೆ ಕನ್ನ ಹಾಕೋಕೆ ಈತ ಪ್ಲ್ಯಾನ್ […]

ಅಡುಗೆ ಕೆಲಸದವನಿಂದ್ಲೇ ಲಾಕರ್ ಕಳ್ಳತನ, ಉಂಡ ಮನೆಗೆ ಕನ್ನ ಹಾಕೋಕೆ ಹೋಗಿ ಲಾಕ್
Follow us
ಆಯೇಷಾ ಬಾನು
|

Updated on: Oct 19, 2020 | 6:36 AM

ಬೆಂಗಳೂರು: ಬೇರೆ ರಾಜ್ಯದಿಂದ ಬಂದು ಅಡುಗೆ ಕೆಲಸ ಮಾಡ್ಕೊಂಡು ಇದ್ದು, ಅದೇ ಮನೆಯಲ್ಲಿ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ನಿವಾಸಿ ಕೈಲಾಸ್ ದಾಸ್ ಎಂಬಾತ ಜೆ.ಪಿ.ನಗರದ ರಾಜೇಶ್ ಬಾಬು ಎಂಬುವರ ಮನೆಯಲ್ಲಿ 6 ವರ್ಷದಿಂದ ಅಡುಗೆ ಕೆಲಸ ಮಾಡ್ಕೊಂಡು ಇವರ ಮನೆಯಲ್ಲೇ ವಾಸವಿದ್ದ. ಇತ್ತೀಚೆಗೆ ಈ ಮನೆಯ ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ರು. ಈ ವೇಳೆ ಉಂಡು ತಿಂದ ಮನೆಗೆ ಕನ್ನ ಹಾಕೋಕೆ ಈತ ಪ್ಲ್ಯಾನ್ ಮಾಡಿದ್ದ. ಅದರಂತೆ ಅಕ್ಟೋಬರ್ 9ರಂದು ರಾಜೇಶ್ ಬಾಬು ಮನೆಯಲ್ಲಿದ್ದ ವಜ್ರ, ಚಿನ್ನಾಭರಣಗಳಿದ್ದ ಲಾಕರ್ ಕದ್ದೊಯ್ದಿದ್ದಾನೆ.. ಈ ಲಾಕರ್‌ನಲ್ಲಿ ಸುಮಾರು 1 ಕೋಟಿ 30 ಲಕ್ಷ ರೂಪಾಯಿ ಬೆಲೆಬಾಳುವ ವಜ್ರ ಮತ್ತು ಚಿನ್ನದ ಆಭರಣ ಇತ್ತು. ಈ ಕಳ್ಳತನದಿಂದ ಶಾಕ್‌ ಆದ ಮನೆ ಮಾಲೀಕ ರಾಜೇಶ್ ಜೆ.ಪಿ ನಗರ ಠಾಣೆಯಲ್ಲಿ‌ ದೂರು ನೀಡಿದ್ರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಡಿಜಿಟಲ್ ಲಾಕರ್ ಸಮೇತ ಎಸ್ಕೇಪ್ ಆಗಿದ್ದ ಕೈಲಾಸ್‌ನನ್ನ 48 ಗಂಟೆಗಳಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ .

ಲಾಕರ್ ಕದ್ದ ಕೈಲಾಸ್‌ ಲಾಕರ್ ಸಮೇತ ಮೈಸೂರಿಗೆ ಹೋಗಿ ಲಾಡ್ಜ್ ನಲ್ಲಿ ಸೇರಿಕೊಂಡಿದ್ದ. ಅಲ್ಲಿ 2 ದಿನ ಲಾಕರ್ ಒಪನ್ ಮಾಡೋಕೆ ಒದ್ದಾಡಿದ್ದಾನೆ. ಆದ್ರೆ ಓಪನ್ ಆಗಿಲ್ಲ. ಇಲ್ಲೇ ಇದ್ರೆ ಪೊಲೀಸರ ಕೈಯಲ್ಲಿ ಲಾಕ್ ಆಗ್ತೀನಿ ಅಂತ ತನ್ನ ಊರಾದ ಪ.ಬಂಗಾಳಕ್ಕೆ ತೆರಳಲು ರೈಲು ಏರಿದ್ದ. ರೈಲ್ವೆ ನಿಲ್ದಾಣ ಸಿಸಿ ಕ್ಯಾಮರಾಗಳನ್ನ ಪರಿಶೀಲಿಸಿದಾಗ ಆರೋಪಿ ಕೈಲಾಸ್‌ ಯಶವಂತಪುರ ರೈಲ್ವೆ ನಿಲ್ದಾಣದ ಮೂಲಕ ಪಶ್ಚಿಮ ಬಂಗಾಳಕ್ಕೆ ತೆರಳಿದ್ದು ಗೊತ್ತಾಗಿತ್ತು. ಈ ಮಾಹಿತಿ ತಿಳಿದು ಪೊಲೀಸರು ಆತ ತಲುಪುವ ಮುಂಚೆಯೇ ಹೌರಾ ಬಳಿ ಆತನ ಸ್ವಾಗತಕ್ಕೆ ಕಾದಿದ್ದಾರೆ. ಆದರೆ ಅಲ್ಲಿ ಕೂಡ ಪೊಲೀಸರ ಕಣ್ತಪ್ಪಿಸಿ ರೈಲ್ವೆ ನಿಲ್ದಾಣದ ಬೇರೆ-ಬೇರೆ ಪ್ಲಾಟ್ ಫಾರ್ಮ್‌ನಿಂದ ಹೊರಗಡೆ ಹೋಗೋಕೆ ಸಂಚು ಹಾಕಿದ್ದಾನೆ. ತಕ್ಷಣ ಅಲರ್ಟ್ ಆದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಪ್ಲ್ಯಾನ್ ಮಾಡಿ ರೈಲ್ವೆ ನಿಲ್ದಾಣದಲ್ಲೇ ಕೈಲಾಸ್‌ನನ್ನ ಬಂಧಿಸಿ, ವಜ್ರ, ಚಿನ್ನಾಭರಣಗಳಿದ್ದ ಲಾಕರ್ ವಶಕ್ಕೆ ಪಡೆದಿದ್ದಾರೆ.

ಮಾಲೀಕನಿಗೆ ವಂಚಿಸಿ ಆರೋಪಿ ಚಾಪೆ ಕೆಳಗೆ ನುಸುಳಿದ್ರೆ, ಬೆಂಗಳೂರು ಪೊಲೀಸರ ಚಾಣಾಕ್ಷ ತನಿಖೆ ನಡೆಸಿ ರಂಗೋಲಿ ಕೆಳೆಗೆ ನುಸುಳಿ ಕೈಲಾಸ್‌ನನ್ನ ಲಾಕ್ ಮಾಡಿದ್ದಾರೆ. ಒಟ್ನಲ್ಲಿ ಅಯ್ಯೋ ಪಾಪ ಎಂದು ಪರ ರಾಜ್ಯದವರಿಗೆ ಕೆಲಸ ನೀಡುವ ಮುಂಚೇ ಮೂರು ಸಲ ಯೋಚನೆ ಮಾಡಿ. ಇದು ಒಂದು ಉದಾಹರಣೆ.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ