
ಬೆಂಗಳೂರು: ಬ್ಯಾಂಕ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಖಾಸಗಿ ಬ್ಯಾಂಕ್‌ನ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ. ನಿನ್ನೆ ಸೋಂಕು ದೃಢಪಟ್ಟ ಬೆನ್ನಲ್ಲೇ ಬ್ಯಾಂಕ್ನತ್ತ ಆರೋಗ್ಯ ಸಿಬ್ಬಂದಿ ದೌಡಾಯಿಸಿದ್ದಾರೆ.
ಸದ್ಯ ಬ್ಯಾಂಕ್ನಲ್ಲಿ ಸೆಕ್ಯೂರಿಟಿ ಗಾರ್ಡ್ ಸಮೇತ ಯಾರು ಇಲ್ಲ. ಬ್ಯಾಂಕ್‌ನ ಮುಂಭಾಗ ಆರೋಗ್ಯಾಧಿಕಾರಿಗಳು ನೋಟಿಸ್ ಹಾಕಿದ್ದಾರೆ. ಆದ್ರೆ ಬ್ಯಾಂಕ್ ಕ್ಲೋಸ್ ಹಿನ್ನೆಲೆಯಲ್ಲಿ ಮಾಹಿತಿಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಡಕಾಡುತ್ತಿದ್ದಾರೆ. ಕ್ವಾರಂಟೈನ್ಗೆ ಪ್ರಾಥಮಿಕ ಸಂಪರ್ಕದವರ ಮಾಹಿತಿ ಸಿಗದೆ ಅಧಿಕಾರಿಗಳು ಒದ್ದಾಡುತ್ತಿದ್ದಾರೆ.
ಬಿಲ್ಡಿಂಗ್ನಲ್ಲಿ ವಾಸವಿರುವ ನಿವಾಸಿಗಳಿಗೆ ಆತಂಕ:
ಬ್ಯಾಂಕ್ ಇರುವ ಬಿಲ್ಡಿಂಗ್ನಲ್ಲಿ ವಾಸವಾಗಿರುವ ನಿವಾಸಿಗಳಿಗೂ ಆತಂಕ ಶುರುವಾಗಿದೆ. ಬ್ಯಾಂಕ್ ಇರುವ ಬಿಲ್ಡಿಂಗ್ನಲ್ಲಿ 4 ಕುಟುಂಬಗಳು ವಾಸವಾಗಿದೆ. ಮೊದಲ ಮಹಡಿಯಲ್ಲಿ ಬ್ಯಾಂಕ್ ಇದೆ. ಹಾಗಾಗಿ ಕಟ್ಟಡದಲ್ಲಿರುವ ಎಲ್ಲರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
Published On - 12:45 pm, Thu, 4 June 20