ವರ್ಷಗಳ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ, ವಾಣಿವಿಲಾಸ ಸಾಗರಕ್ಕೆ ಹರಿದುಬಂತು ಭದ್ರಾ ನೀರು

  • Publish Date - 7:10 am, Wed, 9 September 20
ವರ್ಷಗಳ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ, ವಾಣಿವಿಲಾಸ ಸಾಗರಕ್ಕೆ ಹರಿದುಬಂತು ಭದ್ರಾ ನೀರು

ಚಿತ್ರದುರ್ಗ: ಕೋಟೆನಾಡಿನ ಜನರ ಬಹುಕಾಲದ ಕನಸೊಂದು ಕೊನೆಗೂ ನನಸಾಗಿದೆ. ರಾಜಕೀಯ ಮೇಲಾಟಗಳ ನಡುವೆ ಕೊಂಚ ವಿಳಂಬವಾಗಿದೆಯಾದ್ರೂ ಕೊನೆಗೂ ನೀರು ಹರಿದಿದೆ. ಬಯಲಸೀಮೆಗೆ ನೀರು ಹರಿಯುತ್ತಿರುವುದು ಜಿಲ್ಲೆಯ ಜನರಲ್ಲಿ ಖುಷಿ ಮೂಡಿಸಿದೆ.

ಬಯಲು ಸೀಮೆ ಚಿತ್ರದುರ್ಗಕ್ಕೆ ಹರಿಯುತ್ತಿರುವ ಭದ್ರಾ ನೀರು. ನೀರಿನ ಹರಿವು ಕಂಡು ಕೋಟೆನಾಡಿನ ಜನರಲ್ಲಿ ಸಂಭ್ರಮ. ವಾಣಿವಿಲಾಸ ಸಾಗರ ಜಲಾಶಯ‌ ಸೇರುತ್ತಿರುವ ಭದ್ರಾ.

ಬರದನಾಡು ಚಿತ್ರದುರ್ಗ‌ ಜಿಲ್ಲೆಯ ಬಹುತೇಕ ಕೆರೆ ಕಟ್ಟೆಗಳು ಮಾತ್ರ ಖಾಲಿಯಾಗಿಯೇ ಇವೆ. ಹೀಗಾಗಿ ಹಿರಿಯೂರಿನ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ಡ್ಯಾಮ್‌ನಿಂದ ನೀರು ಹರಿಸಬೇಕೆಂದು ದುರ್ಗದ ಜನ ಆಗ್ರಹಿಸಿದ್ದರು. ಸುಮಾರು ಒಂದು ತಿಂಗಳಿಂದ ನೀರು ಹರಿಸುವ ದಿನಾಂಕಗಳನ್ನು ಹೇಳುತ್ತಲೇ ಸಾಗಿದ್ದ ಸರ್ಕಾರ ಕೊನೆಗೂ ನೀರು‌ ಹರಿಸಿದೆ. ಇದೀಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಭದ್ರಾ ಜಲಾಶಯದಿಂದ ನೀರು ಕೋಟೆನಾಡಿನತ್ತ ಹರಿದು ಬರ್ತಿದೆ. ಕೋಟಿ ನಾಡಿನ ಜನರಲ್ಲಿ ಖುಷಿ ಮೂಡಿಸಿದೆ.

ಇನ್ನು ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಬಂದಿದೆ. ರಾಜಕೀಯ ಮೇಲಾಟದಿಂದ ನೀರು‌ ಹರಿಸುವ ಕಾರ್ಯ ಮುಂದೂಡುತ್ತಿದ್ರು. ಇನ್ಮುಂದೆ ನಿರಂತರವಾಗಿ ಭದ್ರಾ ನೀರು ಹರಿಸಬೇಕು. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಪ್ರತಿ‌ ಕೆರೆ ಕಟ್ಟೆಗಳಿಗೆ ನೀರು ಪೂರೈಸಬೇಕೆಂಬುದು ರೈತರು ಆಗ್ರಹಿಸಿದ್ದಾರೆ.

ಒಟ್ನಲ್ಲಿ, ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜನರ ಬಹುದಿನದ ಕನಸಾದ ಭದ್ರಾ ಮೇಲ್ದಂಡೆ ಯೋಜನೆ ಕೊನೆಗೂ ನನಸಾಗಿದೆ. ಕೊನೆಗೂ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಯುತ್ತಿದೆ. ಅಂತೆಯೇ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಂಡು ಹಳ್ಳಿಹಳ್ಳಿಗೂ ತಲುಪಲಿ ಎಂಬುದು ರೈತರ ಆಗ್ರಹವಾಗಿದೆ.

Click on your DTH Provider to Add TV9 Kannada