Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಪ್ರೆಗ್ನೆನ್ಸಿ ನಾಟಕ

| Updated By: ಮದನ್​ ಕುಮಾರ್​

Updated on: Mar 10, 2021 | 7:03 PM

ದಿವ್ಯಾ ಪ್ರೆಗ್ನೆನ್ಸಿ ನಾಟಕವಾಡಿದ್ದಾರೆ! ಹಾಗಂತ ಈ ನಾಟಕದ ಹಿಂದೆ ಯಾವುದೇ ಕೆಟ್ಟ ಉದ್ದೇಶವಿರಲಿಲ್ಲ. ಈ ನಾಟಕದ ಹಿಂದೆ ಇದ್ದಿದ್ದು ಸಂಪೂರ್ಣವಾಗಿ ಒಳ್ಳೆಯ ಉದ್ದೇಶ.

Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಪ್ರೆಗ್ನೆನ್ಸಿ ನಾಟಕ
ದಿವ್ಯಾ ಉರುಡುಗ
Follow us on

ಬಿಗ್​ ಬಾಸ್ ಮನೆ​ ಎಂದರೆ ಅಲ್ಲಿ ಡ್ರಾಮಾಗಳು ಇರಲೇಬೇಕು. ನಾಟಕಗಳು ಇಲ್ಲದಿದ್ದರೆ ಯಾರು ನೋಡುತ್ತಾರೆ? ಎನ್ನುವ ಚರ್ಚೆ ಕೂಡ ಇತ್ತೀಚೆಗೆ ಕನ್ನಡ ಬಿಗ್​ ಬಾಸ್​ ಮನೆಯಲ್ಲಿ ನಡೆದಿತ್ತು. ಅಂತೆಯೇ, ಈಗ ದೊಡ್ಮನೆಯಲ್ಲಿ ಒಂದಾದಮೇಲೆ ಒಂದರಂತೆ ನಾಟಕಗಳು ನಡೆಯುತ್ತಿವೆ. ಈಗ ಇದಕ್ಕೆ ಹೊಸ ಸೇರ್ಪಡೆ ದಿವ್ಯಾ ಉರುಡು ಪ್ರೆಗ್ನೆನ್ಸಿ ನಾಟಕ! ಅಷ್ಟಕ್ಕೂ ದಿವ್ಯಾ ಹೀಗೆ ಮಾಡಿದ್ದೇಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಿಗ್​ ಬಾಸ್​ ಎಪಿಸೋಡ್​ನಲ್ಲಿ ತೋರಿಸದ ವಿಡಿಯೋವನ್ನು ಕಲರ್ಸ್​ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ದಿವ್ಯಾ ಪ್ರೆಗ್ನೆನ್ಸಿ ನಾಟಕವಾಡಿದ್ದಾರೆ! ಹಾಗಂತ ಈ ನಾಟಕದ ಹಿಂದೆ ಯಾವುದೇ ಕೆಟ್ಟ ಉದ್ದೇಶವಿರಲಿಲ್ಲ. ಈ ನಾಟಕದ ಹಿಂದೆ ಇದ್ದಿದ್ದು ಸಂಪೂರ್ಣವಾಗಿ ಒಳ್ಳೆಯ ಉದ್ದೇಶ.

ಸೋಮವಾರ (ಮಾ.8) ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಗಿತ್ತು. ಇದರ ಅಂಗವಾಗಿ ವಿಶೇಷ ನಾಟಕ ಮಾಡಲು ಬಿಗ್​ ಬಾಸ್​​ ಆದೇಶಹೊರಡಿಸಿದ್ದರು. ಇದಕ್ಕಾಗಿ ಸಾಕಷ್ಟು ಐಡಿಯಾಗಳನ್ನು ಸ್ಪರ್ಧಿಗಳು ನೀಡಿದ್ದರು. ಲ್ಯಾಗ್​ ಮಂಜು, ಹೆಣ್ಣು ಮಗು ಜನಿಸಿದ ನಂತರ ಆಕೆ ಸಮಾಜದಲ್ಲಿ ಎದುರಿಸುವ ಕಷ್ಟ ಮತ್ತು ನಂತರ ಅದನ್ನು ಮೆಟ್ಟಿ ನಿಂತು ಆಕೆ ಹೇಗೆ ಅದನ್ನು ಎದುರಿಸಿ ಯಶಸ್ಸು ಕಾಣುತ್ತಾಳೆ ಎಂಬುದನ್ನು ತೋರಿಸಬಹುದು ಎಂದು ಹೇಳಿದ್ದರು. ಇದೇ ವಿಚಾರ ಇಟ್ಟುಕೊಂಡು ದಿವ್ಯಾ ಆ್ಯಂಡ್​ ಟೀಂ ನಾಟಕವಾಡಿದೆ.

ನಾಟಕದಲ್ಲಿ ರಾಜೀವ್​ ಹಾಗೂ ದಿವ್ಯಾ ಗಂಡ ಹೆಂಡತಿ ಆಗಿರುತ್ತಾರೆ. ದಿವ್ಯಾ ಗರ್ಭ ಧರಿಸುತ್ತಾಳೆ. ಹೆಣ್ಣುಮಗು ಎನ್ನುವ ಕಾರಣಕ್ಕೆ ಮಗುವನ್ನು ತೆಗೆಸಿಬಿಡೋಣ ಎನ್ನುತ್ತಾನೆ ಪತಿ. ಆದರೆ, ಆಕೆ ಇದಕ್ಕೆ ಒಪ್ಪದೆ ಆ ಮಹಿಳೆ ಗಂಡನಿಂದ ಬೇರೆ ಆಗುತ್ತಾಳೆ. ಆಕೆಗೆ ಹೆಣ್ಣುಮಗು ಕೂಡ ಜನಿಸುತ್ತದೆ. ಸಮಾಜದಲ್ಲಿ ಹೆಣ್ಣುಮಗು ಎಷ್ಟು ಕಷ್ಟ ಅನುಭವಿಸುತ್ತಾಳೆ ಮತ್ತು ಅದನ್ನೆಲ್ಲ ಮೆಟ್ಟಿ ಹೇಗೆ ನಿಲ್ಲುತ್ತಾಳೆ ಎಂಬುದೇ ಈ ನಾಟಕದ ಸಾರಾಂಶ. ಇದನ್ನು ನೋಡಿ ನಿಧಿ ಸುಬ್ಬಯ್ಯ ಕಣ್ಣಲ್ಲಿ ನೀರು ಹಾಕಿದ್ದಾರೆ.


ಕಲರ್ಸ್​ ಕನ್ನಡ ಹಂಚಿಕೊಂಡ ವಿಡಿಯೋ..

ಇದನ್ನೂ ಓದಿ: Bigg Boss Kannada: ದೊಡ್ಡವರು ಅಂತ ಸುಮ್ನೆ ಬಿಟ್ಟೀದೀನಿ ಮಗನೆ; ಪ್ರಶಾಂತ್​ಗೆ ಬ್ರೋ ಗೌಡ ಆವಾಜ್​!

BBK8: ವೈರಸ್​ ದಾಳಿಗೆ ಅಲ್ಲೋಲ-ಕಲ್ಲೋಲವಾದ ಬಿಗ್​ ಬಾಸ್​ ಮನೆ!