ಬಿಗ್​ ಬಾಸ್​ ಅಭ್ಯರ್ಥಿಗಳ ಕುತಂತ್ರ ಬುದ್ಧಿ ಬಗ್ಗೆ ಸುದೀಪ್​ ಬಳಿ ಅಳಲು ತೋಡಿಕೊಂಡ ಶಂಕರ್​ ಅಶ್ವತ್ಥ್​ ​

ಬಿಗ್​ ಬಾಸ್​ ಮನೆ ಸೇರಿದ ಪ್ರತಿ ಅಭ್ಯರ್ಥಿಗೂ ಗೆಲ್ಲಬೇಕು ಎನ್ನುವ ಛಲ ಇರುತ್ತದೆ. ಇದೇ ಕಾರಣಕ್ಕೆ ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಮಸೆಯುತ್ತಲೇ ಇರುತ್ತಾರೆ.

ಬಿಗ್​ ಬಾಸ್​ ಅಭ್ಯರ್ಥಿಗಳ ಕುತಂತ್ರ ಬುದ್ಧಿ ಬಗ್ಗೆ ಸುದೀಪ್​ ಬಳಿ ಅಳಲು ತೋಡಿಕೊಂಡ ಶಂಕರ್​ ಅಶ್ವತ್ಥ್​  ​
ಶಂಕರ್​ ಅಶ್ವತ್ಥ್​
Edited By:

Updated on: Mar 14, 2021 | 3:23 PM

ಕನ್ನಡ ಬಿಗ್​ ಬಾಸ್​ ಎರಡನೇ ವಾರದ ಎಲಿಮಿನೇಷನ್​ಗೆ ಕ್ಷಣಗಣನೆ ಆರಂಭವಾಗಿದೆ. ಗೀತಾ ಅಥವಾ ನಿರ್ಮಾಲಾ ಇವರಲ್ಲಿ ಒಬ್ಬರು ಮನೆಯಿಂದ ಹೊರ ಹೋಗೋದು ಬಹುತೇಕ ಖಚಿತವಾಗಿದೆ. ಈ ಎಲ್ಲ ಪ್ರಶ್ನೆಗಳಿಗೆ ಇಂದು ರಾತ್ರಿ ಉತ್ತರ ಸಿಗಲಿದೆ. ಈ ಮಧ್ಯೆ ಮನೆಯಲ್ಲಿ ನಡೆಯುತ್ತಿರುವ ಕುತಂತ್ರ ಬುದ್ಧಿ ಬಗ್ಗೆ ಶಂಕರ್​ ಅಶ್ವತ್ಥ್​​ ಮೌನ ಮುರಿದಿದ್ದಾರೆ. ಯಾರು ಹೇಗೆ ಎನ್ನುವ ವಿಚಾರದ ಬಗ್ಗೆ ‘ಸೂಪರ್ ಸಂಡೆ ವಿತ್ ಸುದೀಪ’​ದಲ್ಲಿ ಹೇಳಿಕೊಂಡಿದ್ದಾರೆ.

ಬಿಗ್​ ಬಾಸ್​ ಮನೆ ಸೇರಿದ ಪ್ರತಿ ಅಭ್ಯರ್ಥಿಗೂ ಗೆಲ್ಲಬೇಕು ಎನ್ನುವ ಛಲ ಇರುತ್ತದೆ. ಇದೇ ಕಾರಣಕ್ಕೆ ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಮಸೆಯುತ್ತಲೇ ಇರುತ್ತಾರೆ. ಗೆಳೆಯರಂತೆ ಕಂಡವರೂ ಹಿಂದಿನಿಂದ ಚಾಕು ಹಾಕುತ್ತಾರೆ. ಇದು ಇಂದು ನಿನ್ನೆಯ ಕಥೆಯಲ್ಲ. ಬಿಗ್​ ಬಾಸ್​ ಆರಂಭವಾದಾಗಿನಿಂದಲೂ ಇದು ಮನೆಯಲ್ಲಿ ನಡೆದೇ ಇದೆ.

ಈ ಬಾರಿಯೂ ಹಾಗೆಯೇ ಆಗಿದೆ. ಶುಭಾ ಪೂಂಜಾ ಹಾಗೂ ನಿಧಿ ಸುಬ್ಬಯ್ಯ ತುಂಬಾನೇ ಕ್ಲೋಸ್​ ಫ್ರೆಂಡ್ಸ್​​​ ಆಗಿದ್ದರು. ಆದರೆ, ವೈರಸ್​ ಟಾಸ್ಕ್​ ನಂತರ ಇಬ್ಬರ ಗೆಳೆತನದಲ್ಲಿ ಬಿರುಕು ಮೂಡಿದೆ. ಹೀಗೆ ಅನೇಕರ ನಡುವೆ ವೈಷಮ್ಯ ಮೂಡಿದೆ. ಈಗ ಅಶ್ವತ್ಥ್​ ನಾರಾಯಣ್​ ಮನೆಯಲ್ಲಿ ಇರುವ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿ ಇಂದು ಪ್ರೋಮೋ ಒಂದನ್ನು ತನ್ನ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಸುದೀಪ್​ ನೇರವಾಗಿ ಮಾತನಾಡುವ ಒಂದು ಟಾಸ್ಕ್​ ನೀಡಿದ್ದರು. ಇದರನ್ವಯ ಪ್ರತಿ ಅಭ್ಯರ್ಥಿ ಯಾರು ಫೇಕ್​, ಯಾರು ಒಳ್ಳೆಯವರು ಎಂದು ಹೇಳಬೇಕು. ಕೆಲವರು ಗೀತಾ ಅವರ ಹೆಸರನ್ನು ಆಯ್ಕೆ ಮಾಡಿಕೊಂಡರೆ ಇನ್ನೂ ಕೆಲವರು ಚಂದ್ರಕಲಾ ಹೆಸರನ್ನು ಸೂಚಿಸಿದರು.

ಶಂಕರ್​ ಅಶ್ವತ್ಥ್​ ಮಾತ್ರ ಸಂಪೂರ್ಣ ಭಿನ್ನವಾಗಿ ಮಾತನಾಡಿದರು. ಇಲ್ಲಿರುವ ಅಷ್ಟೂ ಅಭ್ಯರ್ಥಿಗಳು ಫೇಕ್​. ನೇರವಾಗಿ ಹೇಳಬೇಕು ಎಂದು ನೀವು ಕೇಳುತ್ತಿದ್ದೀರಿ. ಆದರೆ, ಯಾರು ಒಳ್ಳೆಯವರು ಯಾರು ಫೇಕ್​ ಎಂದು ಹೇಳೋಕೆ ಆಗಲ್ಲ. ಹೇಳಿದ್ರೆ ಪಕ್ಕದಲ್ಲಿದ್ದವರು ಯಾರು ಚುಚ್ಚುತ್ತಾರೋ ಎನ್ನುವ ಭಯ ಇರತ್ತದೆ. ಇಲ್ಲವೇ, ಕುತಂತ್ರದ ಬುದ್ಧಿ ತಲೆಯಲ್ಲಿ ಓಡುತ್ತಿರುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ಅಭಿಮಾನಿಗಳು ಕಮೆಂಟ್​ ಮಾಡಿದ್ದು, ಶಂಕರ್​ ಅಶ್ವಥ್ ಸರ್ ಸರಿಯಾಗಿ ಹೇಳಿದ್ದೀರಿ ಎಂದು ಮೆಚ್ಚುಗೆ ಹೊರ ಹಾಕಿದ್ದಾರೆ.

ಇದನ್ನೂ ಓದಿ: Bigg Boss Elimination: ಬಿಗ್​ ಬಾಸ್​ನಿಂದ ಹೊರಬಿದ್ದ ಗೀತಾ? ‘ಬ್ರಹ್ಮಗಂಟು’ ನಟಿಯ ಈ ಒಂದು ಗುಣ ಯಾರಿಗೂ ಇಷ್ಟ ಆಗಲಿಲ್ಲ!

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us