Bigg Boss Kannada Voice: ‘ಬಿಗ್ ಬಾಸ್ ಧ್ವನಿ ಚೇಂಜ್ ಮಾಡ್ರೋ, ಕೇಳೋಕೆ ಆಗ್ತಿಲ್ಲ’; ಆಕ್ರೋಶ ಹೊರ ಹಾಕಿದ ವೀಕ್ಷಕರು!
ಪ್ರೊಮೋ ಸಂದರ್ಭದಲ್ಲೂ ಕಿಚ್ಚ ಸುದೀಪ್ ಜ್ಯೋತಿಷ್ಯ ಹೇಳುವವರ ಅವತಾರ ಎತ್ತಿದ್ದರು. ಈ ಮೂಲಕ ಭಿನ್ನ ರೂಪದಲ್ಲಿ ಕಾಣಿಸಿಕೊಂಡಿದ್ದರು. ಇದು ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಹೀಗೆ ಪ್ರತಿ ಹಂತದಲ್ಲೂ ಹೊಸ ವಿಚಾರವನ್ನು ತೋರಿಸಲಾಗಿತ್ತು.
ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ಸ್ಪರ್ಧಿಗಳು ಹೋಗುತ್ತಾರೆ ಎನ್ನುವುದು ಎಷ್ಟು ಮುಖ್ಯವೋ ಅದೇ ರೀತಿ, ಬಿಗ್ ಬಾಸ್ ಮನೆಯ ವಿನ್ಯಾಸ, ಅದರಲ್ಲಿ ಬರುವ ಬಿಗ್ ಬಾಸ್ ಧ್ವನಿ, ವೀಕೆಂಡ್ನಲ್ಲಿ ಸುದೀಪ್ ತೊಡುವ ಬಟ್ಟೆ ಎಲ್ಲವೂ ತುಂಬಾನೇ ಮುಖ್ಯ. ಇದನ್ನು ಪ್ರೇಕ್ಷಕರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಇದರಲ್ಲಿ ಸ್ವಲ್ಪ ಬದಲಾವಣೆ ಆದರೂ ಪ್ರೇಕ್ಷಕ ಮಹಾಶಯ ಇದನ್ನು ಸಹಿಸಿಕೊಳ್ಳುವುದಿಲ್ಲ. ಈ ಬಾರಿಯೂ ಹಾಗೆಯೇ ಆಗಿದೆ! ಬಿಗ್ ಬಾಸ್-8ರಲ್ಲಿ ಆದ ಮಹತ್ವದ ಬದಲಾವಣೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಬಿಗ್ ಬಾಸ್-8 ಸಂಪೂರ್ಣ ಹೊಸ ರೀತಿಯಲ್ಲಿ ಬರಲಿದೆ ಎಂದು ಕಲರ್ಸ್ ಕನ್ನಡ ವಾಹಿನಿ ಹೇಳಿಕೊಂಡಿತ್ತು. ಅದೇ ರೀತಿ ಬಿಗ್ ಬಾಸ್ ಮನೆಯ ವಿನ್ಯಾಸ ಬದಲಾಗಿದೆ. ಗಾರ್ಡನ್ ಏರಿಯಾ, ಬಿಗ್ ಬಾಸ್ ಮನೆ ಒಳಭಾಗದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಹೀಗಾಗಿ, ಬಿಗ್ ಬಾಸ್ ಮನೆ ಮತ್ತಷ್ಟು ರಿಚ್ ಆಗಿ ಕಾಣುತ್ತಿದೆ.
ಪ್ರೊಮೋ ಸಂದರ್ಭದಲ್ಲೂ ಕಿಚ್ಚ ಸುದೀಪ್ ಜ್ಯೋತಿಷ್ಯ ಹೇಳುವವರ ಅವತಾರ ಎತ್ತಿದ್ದರು. ಈ ಮೂಲಕ ಭಿನ್ನ ರೂಪದಲ್ಲಿ ಕಾಣಿಸಿಕೊಂಡಿದ್ದರು. ಇದು ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಹೀಗೆ ಪ್ರತಿ ಹಂತದಲ್ಲೂ ಹೊಸ ವಿಚಾರವನ್ನು ತೋರಿಸಲಾಗಿತ್ತು.
ಈಗ ಬಿಗ್ ಬಾಸ್-8ರಲ್ಲಿ ಮಾಡಿದ ಮಹತ್ವದ ಬದಲಾವಣೆಯೊಂದರ ಬಗ್ಗೆ ಪ್ರೇಕ್ಷಕರು ಸಿಟ್ಟಾಗಿದ್ದಾರೆ. ಅದುವೇ ಧ್ವನಿಯ ವಿಚಾರ. ಸ್ಪರ್ಧಿಗಳು ಮನೆಯಲ್ಲಿ ಕೂತಿದ್ದಾಗ ‘ಇದು ಬಿಗ್ ಬಾಸ್…’ ಎಂದು ಕಮಾಂಡ್ ನೀಡುವ ಧ್ವನಿ ಬರುತ್ತಿತ್ತು. ಆದರೆ, ಈ ಬಾರಿ ಆ ಧ್ವನಿ ಬದಲಾಗಿದೆ. ಬೇರೆಯದೇ ವಾಯ್ಸ್ ಈ ಬಾರಿ ಕಮಾಂಡ್ ನೀಡುತ್ತಿದೆ. ಇದು ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಬಿಗ್ ಬಾಸ್ ವಾಯ್ಸ್ನಲ್ಲಿ ಗತ್ತು-ಖದರ್ ಎರಡೂ ಇಲ್ವಲ್ಲ ಗುರೂ. ಹಳೆಯ ಬಿಗ್ ಬಾಸ್ ಧ್ವನಿ ಬೇಕು ನಮಗೆ. ಹೊಸ ಬಿಗ್ ಬಾಸ್ಗೆ ಗಂಟಲು ಕಿರಿಕಿರಿ ಆಗಿರುವ ರೀತಿಯಲ್ಲಿ ಲೋ ಟೋನ್ನಲ್ಲಿ ವಾಯ್ಸ್ ನೀಡುತ್ತಿದ್ದಾರೆ. ಇದರಲ್ಲಿ ಕಮಾಂಡಿಂಗ್ ಇಲ್ಲವೇ ಇಲ್ಲ ಎಂದು ಕೆಲವರು ಬೇಸರ ಹೊರ ಹಾಕಿದರೆ, ಇನ್ನೂ ಕೆಲವರು ಬಿಗ್ ಬಾಸ್ ಧ್ವನಿ ಚೇಂಜ್ ಮಾಡ್ರೋ, ಕೇಳೋಕೆ ಆಗ್ತಿಲ್ಲ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Bigg Boss Kannada Day 1: ಬ್ರೋ ಗೌಡಗೆ ದಿವ್ಯಾ ಸುರೇಶ್ ಮೇಲೆ ಪ್ರೀತಿ?; ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಕಥೆ!