ತುಂಬಿ ಹರೀತಿದ್ದ ಬ್ಯಾರೇಜ್​ನಲ್ಲಿ ಕೊಚ್ಚಿ ಹೋದ ಬೈಕ್ ಸವಾರ, ಎಲ್ಲಿ?

ವಿಜಯಪುರ: ತುಂಬಿ ಹರೀತಿದ್ದ ಭೀಮಾ ನದಿಯಲ್ಲಿ ಬೈಕ್ ಸವಾರ ಕೊಚ್ಚಿ ಹೋದ ಘಟನೆ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಭೀಮಾ ನದಿಯ ಭಂಡಾರಕವಟೆ ಬ್ಯಾರೇಜ್​​ನಲ್ಲಿ ನಡೆದಿದೆ. ತುಂಬಿ‌ ಹರಿಯುತ್ತಿದ್ದ ಭೀಮಾ ನದಿ ಬ್ಯಾರೇಜ್​ ಅನ್ನು ಬೈಕ್​ನಲ್ಲಿ ದಾಟುತ್ತಿದ್ದಾಗ ನೀರಿನ ರಭಸಕ್ಕೆ ಸವಾರ ಕೊಚ್ಚಿಹೋಗಿದ್ದಾನೆ. ಮಹಾರಾಷ್ಟ್ರದ ದಕ್ಷಿಣ ಸೊಲ್ಲಾಪುರ ಜಿಲ್ಲೆಯ ಕಂದಲಗಾಂವ ಗ್ರಾಮದ ಶಂಕರಕೋಲೆ(65) ನೀರುಪಾಲಾಗಿದ್ದಾರೆ. ನಂದೂರ ಗ್ರಾಮದಿಂದ ಕಂದಲಗಾಂವ ಗ್ರಾಮಕ್ಕೆ ಹೊರಟಿದ್ದ ವೇಳೆ ಘಟನೆ ನಡೆದಿದೆ. ಸ್ಥಳಕ್ಕೆ ಮಹಾರಾಷ್ಟ್ರದ ಮಂದ್ರೂಪ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರೆ. […]

ತುಂಬಿ ಹರೀತಿದ್ದ ಬ್ಯಾರೇಜ್​ನಲ್ಲಿ ಕೊಚ್ಚಿ ಹೋದ ಬೈಕ್ ಸವಾರ, ಎಲ್ಲಿ?
Edited By:

Updated on: Sep 14, 2020 | 10:20 AM

ವಿಜಯಪುರ: ತುಂಬಿ ಹರೀತಿದ್ದ ಭೀಮಾ ನದಿಯಲ್ಲಿ ಬೈಕ್ ಸವಾರ ಕೊಚ್ಚಿ ಹೋದ ಘಟನೆ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಭೀಮಾ ನದಿಯ ಭಂಡಾರಕವಟೆ ಬ್ಯಾರೇಜ್​​ನಲ್ಲಿ ನಡೆದಿದೆ.

ತುಂಬಿ‌ ಹರಿಯುತ್ತಿದ್ದ ಭೀಮಾ ನದಿ ಬ್ಯಾರೇಜ್​ ಅನ್ನು ಬೈಕ್​ನಲ್ಲಿ ದಾಟುತ್ತಿದ್ದಾಗ ನೀರಿನ ರಭಸಕ್ಕೆ ಸವಾರ ಕೊಚ್ಚಿಹೋಗಿದ್ದಾನೆ. ಮಹಾರಾಷ್ಟ್ರದ ದಕ್ಷಿಣ ಸೊಲ್ಲಾಪುರ ಜಿಲ್ಲೆಯ ಕಂದಲಗಾಂವ ಗ್ರಾಮದ ಶಂಕರಕೋಲೆ(65) ನೀರುಪಾಲಾಗಿದ್ದಾರೆ. ನಂದೂರ ಗ್ರಾಮದಿಂದ ಕಂದಲಗಾಂವ ಗ್ರಾಮಕ್ಕೆ ಹೊರಟಿದ್ದ ವೇಳೆ ಘಟನೆ ನಡೆದಿದೆ.

ಸ್ಥಳಕ್ಕೆ ಮಹಾರಾಷ್ಟ್ರದ ಮಂದ್ರೂಪ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರೆ. ಕೊಚ್ಚಿಹೋದ ವ್ಯಕ್ತಿಗಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಬಾಂದಾರ್ ಗೆ ತಡೆಗೋಡೆ ಇಲ್ಲದ ಕಾರಣ ಈ ಘಟನೆ ಸಂಭವಿಸಿದರಿಂದ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.