ಮರಳು ಸಾಗಿಸುತ್ತಿದ್ದ ಲಾರಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ದುರ್ಮರಣ
ವಿಜಯಪುರ: ಮರಳು ಸಾಗಿಸುತ್ತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತಿಕೋಟಾ ಪಟ್ಟಣದ ಹೊರವಲಯದಲ್ಲಿ ರಾತ್ರಿ ನಡೆದಿದೆ. ಅಶ್ವಿನಿಕುಮಾರ ಟಿ. ಕುಲಕರ್ಣಿ(40) ಮೃತ ಬೈಕ್ ಸವಾರ. ಘಟನೆಯಲ್ಲಿ ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಶ್ವಿನಿಕುಮಾರ ನಗರದ PDJA ಹೈಸ್ಕೂಲ್ನಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ಶಿಕ್ಷಕ ಸ್ವಗ್ರಾಮ ಹೊನವಾಡದಿಂದ ವಿಜಯಪುರಕ್ಕೆ ಮರಳುವಾಗ ಅವಘಡ ಸಂಭವಿಸಿದೆ. ಇನ್ನು, ಘಟನೆ ನಡೆಯುತ್ತಿದ್ದಂತೆ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ, ಪೊಲೀಸರು […]

ವಿಜಯಪುರ: ಮರಳು ಸಾಗಿಸುತ್ತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತಿಕೋಟಾ ಪಟ್ಟಣದ ಹೊರವಲಯದಲ್ಲಿ ರಾತ್ರಿ ನಡೆದಿದೆ. ಅಶ್ವಿನಿಕುಮಾರ ಟಿ. ಕುಲಕರ್ಣಿ(40) ಮೃತ ಬೈಕ್ ಸವಾರ.
ಘಟನೆಯಲ್ಲಿ ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಶ್ವಿನಿಕುಮಾರ ನಗರದ PDJA ಹೈಸ್ಕೂಲ್ನಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ಶಿಕ್ಷಕ ಸ್ವಗ್ರಾಮ ಹೊನವಾಡದಿಂದ ವಿಜಯಪುರಕ್ಕೆ ಮರಳುವಾಗ ಅವಘಡ ಸಂಭವಿಸಿದೆ. ಇನ್ನು, ಘಟನೆ ನಡೆಯುತ್ತಿದ್ದಂತೆ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ, ಪೊಲೀಸರು ಲಾರಿಯನ್ನು ಜಪ್ತಿ ಮಾಡಿದ್ದಾರೆ.



