ಕೊರೊನಾದಿಂದ ಬಳಲುತ್ತಿದ್ದ ಬಿಂದು ಮಾಧವ ಶರ್ಮಾ ಶ್ರೀಗಳು.. ಚಿಕಿತ್ಸೆ ಫಲಿಸದೆ ದೈವಾಧೀನ
ಜಿಲ್ಲೆಯ ಹೊಸದುರ್ಗ ತಾಲೂಕಿನ ಬೆಲಗೂರಿನ ಬಿಂದು ಮಾಧವ ಶರ್ಮಾ ಸ್ವಾಮೀಜಿಗಳು (75) ದೈವಾಧೀನರಾಗಿದ್ದಾರೆ. ಕೊರೊನಾದಿಂದ ಬಳಲುತ್ತಿದ್ದ ಶ್ರೀಗಳು ಚಿಕಿತ್ಸೆ ಫಲಿಸದೆ ದೈವಾಧೀನರಾಗಿದ್ದಾರೆ.
ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಬೆಲಗೂರಿನ ಬಿಂದು ಮಾಧವ ಶರ್ಮಾ ಸ್ವಾಮೀಜಿಗಳು (75) ದೈವಾಧೀನರಾಗಿದ್ದಾರೆ. ಕೊರೊನಾದಿಂದ ಬಳಲುತ್ತಿದ್ದ ಶ್ರೀಗಳು ಚಿಕಿತ್ಸೆ ಫಲಿಸದೆ ದೈವಾಧೀನರಾಗಿದ್ದಾರೆ. ಸಂಜೆ ಬೆಲಗೂರು ಬಳಿ ತೋಟದಲ್ಲಿ ಶ್ರೀಗಳ ಅಂತ್ಯಸಂಸ್ಕಾರ ನೆರವೇರೆಲಿದೆ ಎಂದು ಹೊಸದುರ್ಗದ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಮಾಹಿತಿ ನೀಡಿದ್ದಾರೆ.
ಬೆಲಗೂರಿನ ಆಂಜನೇಯ ದೇಗುಲದ ಅವಧೂತರಾ್ದ ಬಿಂದು ಮಾಧವ ಶರ್ಮಾ ಸ್ವಾಮೀಜಿಗಳು ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇಂದು ಚಿಕಿತ್ಸೆ ಫಲಿಸದೆ ಬಿಂದು ಮಾಧವ ಶ್ರೀ ದೈವಾಧೀನರಾಗಿದ್ದಾರೆ.