ಬ್ರಿಟನ್ನಲ್ಲಿ ಮೂರನೇ ಕೊರೊನಾ ಲಸಿಕೆಗೂ ಸಿಕ್ತು ಅನುಮತಿ.. ಮಾರುಕಟ್ಟೆಗೆ ಬರಲಿದೆ ಮಾಡೆರ್ನಾ
ವಿಶೇಷವೆಂದರೆ ಮಾಡೆರ್ನಾ ಸಂಸ್ಥೆಯ ಲಸಿಕೆ ಬಳಕೆಗೆ ಅರ್ಹವಾಗಿದೆ ಎಂದು ದೇಶದಲ್ಲಿ ಅನುಮೋದನೆ ಸಿಗುವ ಮೊದಲೇ ಬ್ರಿಟನ್ 70ಲಕ್ಷ ಡೋಸ್ ಲಸಿಕೆಯನ್ನು ಮುಂಗಡವಾಗಿ ಕಾಯ್ದಿರಿಸಿತ್ತು.
ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತ ಮೊದಲೇ ಕೊರೊನಾ ಲಸಿಕೆ ವಿತರಣೆ ಆರಂಭಿಸಿದ್ದ ಬ್ರಿಟನ್ ಇಂದು (ಜ.8) ಮಾಡೆರ್ನಾ ಸಂಸ್ಥೆಯ ಕೊರೊನಾ ಲಸಿಕೆ ಬಳಕೆಗೆ ಅಸ್ತು ಎಂದಿದೆ. ಆ ಮೂಲಕ ಬ್ರಿಟನ್ನಲ್ಲಿ ಮೂರು ಸಂಸ್ಥೆಯ ಕೊರೊನಾ ಲಸಿಕೆಗಳ ಬಳಕೆಗೆ ಅನುಮತಿ ಲಭಿಸಿದಂತಾಗಿದೆ.
ವಿಶೇಷವೆಂದರೆ ಮಾಡೆರ್ನಾ ಸಂಸ್ಥೆಯ ಲಸಿಕೆ ಬಳಕೆಗೆ ಅರ್ಹವಾಗಿದೆ ಎಂದು ದೇಶದಲ್ಲಿ ಅನುಮೋದನೆ ಸಿಗುವ ಮೊದಲೇ ಬ್ರಿಟನ್ 70ಲಕ್ಷ ಡೋಸ್ ಲಸಿಕೆಯನ್ನು ಮುಂಗಡವಾಗಿ ಕಾಯ್ದಿರಿಸಿತ್ತು. ಮಾಡೆರ್ನಾ ಅಭಿವೃದ್ಧಿಪಡಿಸಿದ ಲಸಿಕೆ ಶೇ.95ರಷ್ಟು ಪರಿಣಾಮಕಾರಿ ಎಂದು ಪರೀಕ್ಷಾ ಹಂತದ ವರದಿಗಳು ತಿಳಿಸಿದ್ದ ಕಾರಣ ಅದೇ ಆಧಾರದ ಮೇಲೆ ಬ್ರಿಟನ್ ಅಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆ ತರಿಸಲು ನಿರ್ಧರಿಸಿತ್ತು ಎನ್ನುವುದು ತಜ್ಞರ ಅಭಿಪ್ರಾಯ.
ಫೈಜರ್-ಬಯೋಎನ್ಟೆಕ್ ಮತ್ತು ಆಕ್ಸ್ಫರ್ಡ್-ಆಸ್ಟ್ರಾಜೆನೆಕಾ ಸಂಸ್ಥೆಗಳ ಲಸಿಕೆ ಬಳಸಲು ಆರಂಭಿಸಿದ್ದ ಬ್ರಿಟನ್, ಈಗಾಗಲೇ ಒಂದೂವರೆ ಲಕ್ಷ ಜನರಿಗೆ ಕನಿಷ್ಠ ಒಂದು ಡೋಸ್ನಷ್ಟು ಲಸಿಕೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಸದ್ಯ ಮಾಡೆರ್ನಾ ಲಸಿಕೆ ಮಾರುಕಟ್ಟೆಗೆ ಬರುವುದು ಕೊಂಚ ತಡವಾಗಬಹುದಾದರೂ ಬಂದ ಕೂಡಲೇ ಇನ್ನಷ್ಟು ಜನರಿಗೆ ಲಸಿಕೆ ವಿತರಿಸಲು ಬ್ರಿಟನ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮತ್ತು ಈ ಎಲ್ಲಾ ಲಸಿಕೆಗಳನ್ನು ಒಬ್ಬ ವ್ಯಕ್ತಿಗೆ ಎರಡು ಡೋಸ್ನಂತೆ ನೀಡಬೇಕಾಗಿದೆ.
ಅಮೆರಿಕಾ, ಬ್ರಿಟನ್ ಲಸಿಕೆ ಮೇಲೆ ನಮಗೆ ನಂಬಿಕೆಯಿಲ್ಲ.. ಆ ಲಸಿಕೆ ಬೇಡ: ಸೆಡ್ಡು ಹೊಡೆದ ಇರಾನ್