
ಬೆಂಗಳೂರು: ಬಿಬಿಎಂಪಿ ಆವರಣದಲ್ಲಿ ಕ್ಯಾಂಟೀನ್ ನಡೆಸ್ತಿದ್ದ ವ್ಯಕ್ತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್.ಆರ್.ನಗರದಲ್ಲಿ ನಡೆದಿದೆ. ಕ್ಯಾಂಟೀನ್ ನಡೆಸುತ್ತಿದ್ದ ಲಿಂಗರಾಜು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ 23 ವರ್ಷಗಳಿಂದ ಬಿಬಿಎಂಪಿ ಆವರಣದಲ್ಲಿ ಕ್ಯಾಂಟೀನ್ ನಡೆಸ್ತಿದ್ದ ಲಿಂಗರಾಜು ಕ್ಯಾಂಟೀನ್ ಟೆಂಡರ್ ಬೇರೆಯವರಿಗೆ ಕೊಟ್ಟಿದ್ದಕ್ಕೆ ಮನನೊಂದು ನೇಣಿಗೆ ಶರಣಾಗಿದ್ದಾರೆ ಎಂಬುವ ಶಂಕೆ ವ್ಯಕ್ತವಾಗಿದೆ. ಆರ್.ಆರ್ ನಗರದ RV ಕಾಲೇಜ್ ಬಳಿ ಇರುವ ತಮ್ಮ ಮನೆಯಲ್ಲಿ ಯಾರು ಇಲ್ಲದ ವೇಳೆ ಲಿಂಗರಾಜು ನೇಣಿಗೆ ಶರಣಾಗಿದ್ದಾರೆ.