ಗ್ರಾಹಕರಂತೆ ಬಂದು.. 59 ಗ್ರಾಂ ಚಿನ್ನಾಭರಣ ಕದ್ದು ಎಸ್ಕೇಪ್​ ಆದ ಚಾಲಾಕಿಗಳು, ಯಾವೂರಲ್ಲಿ?

  • Updated On - 2:33 pm, Sun, 13 September 20
ಗ್ರಾಹಕರಂತೆ ಬಂದು.. 59 ಗ್ರಾಂ ಚಿನ್ನಾಭರಣ ಕದ್ದು ಎಸ್ಕೇಪ್​ ಆದ ಚಾಲಾಕಿಗಳು, ಯಾವೂರಲ್ಲಿ?

ಧಾರವಾಡ: ಗ್ರಾಹಕರ ಸೋಗಿನಲ್ಲಿ ಬಂದ ಖದೀಮರು ಹುಬ್ಬಳ್ಳಿಯ ಸ್ಟೇಷನ್ ರಸ್ತೆಯಲ್ಲಿರುವ ಆಭರಣ ಮಳಿಗೆ ಒಂದರಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಕಳ್ಳರು ನಗರದ ಪ್ರತಿಷ್ಠಿತ ಕಲ್ಯಾಣ್ ಜ್ಯುವೆಲ್ಲರಿ ಮಳಿಗೆಯಲ್ಲಿ 4 ಲಕ್ಷ ರೂಪಾಯಿ ಮೌಲ್ಯದ 59 ಗ್ರಾಂನ ಚಿನ್ನಾಭರಣ ಕದ್ದಿದ್ದಾರೆ ಎಂದು ತಿಳಿದುಬಂದಿದೆ.

ಚಿನ್ನ ಕೊಳ್ಳಲು ಗ್ರಾಹಕರಾಗಿ ಆಭರಣ ಮಳಿಗೆಗೆ ಬಂದ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. 40 ವರ್ಷದ ಇಬ್ಬರು ವ್ಯಕ್ತಿಗಳು ಸೇಲ್ಸ್​ಮನ್​ನ ಗಮನ ಬೇರೆಡೆ ಸೆಳೆದು 59 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಹುಬ್ಬಳ್ಳಿಯ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Click on your DTH Provider to Add TV9 Kannada