AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CBSE Time Table: 10 ಮತ್ತು 12ನೇ ತರಗತಿ ಪರಿಷ್ಕೃತ ಪರೀಕ್ಷಾ ದಿನಾಂಕ ಘೋಷಿಸಿದ ಸಿಬಿಎಸ್​ಇ

CBSE Revised Date Sheet: ಈ ಹಿಂದೆ ಪ್ರಕಟಿಸಿದ್ದ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಆಗಿದೆ. ಈ ಹಿಂದೆ 12ನೇ ತರಗತಿ ವಿದ್ಯಾರ್ಥಿಗಳಿಗೆ ಮೇ.13ರಂದು ನಿಗದಿಪಡಿಸಲಾಗಿದ್ದ ಭೌತಶಾಸ್ತ್ರ ಮತ್ತು ಅನ್ವಯಿಕ ಭೌತಶಾಸ್ತ್ರ ಪರೀಕ್ಷೆಯನ್ನು ಜೂನ್​ 8ಕ್ಕೆ ಹಾಗೂ ಜೂನ್​ 2ಕ್ಕೆ ನಿಗದಿಪಡಿಸಿದ್ದ ಭೂಗೋಳಶಾಸ್ತ್ರ ಪರೀಕ್ಷೆಯನ್ನು ಜೂನ್ 3ಕ್ಕೆ ಮುಂದೂಡಿದೆ.

CBSE Time Table: 10 ಮತ್ತು 12ನೇ ತರಗತಿ ಪರಿಷ್ಕೃತ ಪರೀಕ್ಷಾ ದಿನಾಂಕ ಘೋಷಿಸಿದ ಸಿಬಿಎಸ್​ಇ
ಸಾಂದರ್ಭಿಕ ಚಿತ್ರ
Skanda
| Edited By: |

Updated on: Mar 05, 2021 | 7:07 PM

Share

ದೆಹಲಿ: ಪ್ರಸಕ್ತ ಶೈಕ್ಷಣಿಕ ಸಾಲಿನ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ವೇಳಾಪಟ್ಟಿಯನ್ನು CBSE ಘೋಷಿಸಿದೆ. 12ನೇ ತರಗತಿ ವಿದ್ಯಾರ್ಥಿಗಳಿಗೆ ಮೇ 4ರಿಂದ ಜೂನ್ 14ರ ತನಕ ಪರೀಕ್ಷೆ ನಡೆಯಲಿದ್ದು, ಈ ಹಿಂದೆ ಪ್ರಕಟಿಸಿದ್ದ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಆಗಿದೆ. ಈ ಹಿಂದೆ 12ನೇ ತರಗತಿ ವಿದ್ಯಾರ್ಥಿಗಳಿಗೆ ಮೇ.13ರಂದು ನಿಗದಿಪಡಿಸಲಾಗಿದ್ದ ಭೌತಶಾಸ್ತ್ರ ಮತ್ತು ಅನ್ವಯಿಕ ಭೌತಶಾಸ್ತ್ರ ಪರೀಕ್ಷೆಯನ್ನು ಜೂನ್​ 8ಕ್ಕೆ ಹಾಗೂ ಜೂನ್​ 2ಕ್ಕೆ ನಿಗದಿಪಡಿಸಿದ್ದ ಭೂಗೋಳಶಾಸ್ತ್ರ ಪರೀಕ್ಷೆಯನ್ನು ಜೂನ್ 3ಕ್ಕೆ ಮುಂದೂಡಿದೆ. ಅಂತೆಯೇ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೇ.21ರಂದು ಮಾಡಬೇಕಿದ್ದ ಗಣಿತ ಪರೀಕ್ಷೆಯನ್ನು ಜೂನ್​ 2ರಂದು ನಿಗದಿಪಡಿಸಿದೆ.

10ನೇ ತರಗತಿ ಪರೀಕ್ಷಾ ವೇಳಾಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ.

12ನೇ ತರಗತಿ ಪರೀಕ್ಷೇ ವೇಳಾಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ.

CBSE 10TH EXAM TIME TABLE

ಹತ್ತನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ವೇಳಾಪಟ್ಟಿ

CBSE 12TH EXAM TIME TABLE

ಹನ್ನೆರಡನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ವೇಳಾಪಟ್ಟಿ

CBSE 12TH EXAM TIME TABLE

ಹನ್ನೆರಡನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ವೇಳಾಪಟ್ಟಿ