ಡ್ರಗ್ಸ್ ಜಾಲ: ಸಿಸಿಬಿಯಿಂದ A4 ಪ್ರಶಾಂತ್ ರಂಕಾ ಅಧಿಕೃತವಾಗಿ ಅರೆಸ್ಟ್

ಡ್ರಗ್ಸ್ ಜಾಲ: ಸಿಸಿಬಿಯಿಂದ A4 ಪ್ರಶಾಂತ್ ರಂಕಾ ಅಧಿಕೃತವಾಗಿ ಅರೆಸ್ಟ್

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟ ಸಂಬಂಧ ಮತ್ತೊಬ್ಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. A4 ಪ್ರಶಾಂತ್ ರಂಕಾ ಎಂಬುವನನ್ನು ಇಂದಿರಾನಗರದಲ್ಲಿ ಬಂಧಿಸಿದ್ದಾರೆ.

ಬಂಧಿತ ರವಿಶಂಕರ್ ಜೊತೆ ಆಪ್ತನಾಗಿದ್ದ ಎಂದು ಈ ಹಿಂದೆಯೇ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಸದ್ಯ ಈಗ ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಶಾಂತ್ ರಂಕಾನನ್ನು ಬಂಧಿಸಲಾಗಿದೆ. ರಂಕಾ ರವಿಶಂಕರ್ ಜೊತೆ ಹಲವು ಪಾರ್ಟಿಗಳಲ್ಲಿ ಭಾಗಿಯಾಗಿದ್ದ. ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕಾರ್ ಸೀಜ್ ಮಾಡುವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಇಂದು ಸಿಸಿಬಿ ಪ್ರಶಾಂತ್ ರಂಕಾನನ್ನು ಅಧಿಕೃತವಾಗಿ ಅರೆಸ್ಟ್ ಮಾಡಿದೆ. ಇನ್ನು ರಂಕಾನಿಂದ ಮುಂದೆ ಯಾವೆಲ್ಲಾ ಸಂಗತಿಗಳು ಬಹಿರಂಗವಾಗುತ್ತವೋ ಕಾದು ನೋಡಬೇಕಿದೆ.

Click on your DTH Provider to Add TV9 Kannada