ಅಪ್ರಾಪ್ತೆಯ ಮದುವೆಗೆ ಬ್ರೇಕ್ ಹಾಕಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು
ತುಮಕೂರು ಮೂಲದ 17 ವರ್ಷದ ಯುವತಿಗೆ, 28 ವರ್ಷದ ತ್ಯಾಮಗೊಂಡ್ಲು ಮೂಲದ ಯುವಕನ ಜೊತೆ ವಿವಾಹವಾಗಬೇಕಿತ್ತು. ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಬಾಲಕಿ ರಕ್ಷಣೆ ಮಾಡಿದ್ದಾರೆ.
ನೆಲಮಂಗಲ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಶಿವಗಂಗೆ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದ ಅಪ್ರಾಪ್ತ ಯುವತಿಯ ವಿವಾಹ ನಿಂತಿದೆ.
ತುಮಕೂರು ಮೂಲದ 17 ವರ್ಷದ ಯುವತಿಗೆ, 28 ವರ್ಷದ ತ್ಯಾಮಗೊಂಡ್ಲು ಮೂಲದ ಯುವಕನ ಜೊತೆ ವಿವಾಹವಾಗಬೇಕಿತ್ತು. ಆದರೆ ಬಾಲ್ಯ ವಿವಾಹದ ಬಗ್ಗೆ ಚೈಲ್ಡ್ ಹೆಲ್ಪ್ ಲೈನ್‌ಗೆ ಅಪರಿಚಿತ ವ್ಯಕ್ತಿಯಿಂದ ದೂರು ಬಂದ ಹಿನ್ನೇಲೆಯಲ್ಲಿ ಕಲ್ಯಾಣ ಮಂಟಪಕ್ಕೆ ಅಧಿಕಾರಿಗಳು ಆಗಮಿಸಿದ್ದು, ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ವಿಷಯ ತಿಳಿದ ವಧು– ವರ ನಾಪತ್ತೆಯಾಗಿದ್ದು, ಈ ಕುರಿತ ಪ್ರಕರಣ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಕೊರೊನಾ ಸಮಯದಲ್ಲಿ ಅಧಿಕಾರಿಗಳ ಸಮಯಪ್ರಜ್ಞೆಯಿಂದ ತಪ್ಪಿತು ಬಾಲ್ಯ ವಿವಾಹ