AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಡಿಷನ್​ಗೆ ಕರೆಸಿ ಅತ್ಯಾಚಾರ ಆರೋಪ, ಕೊರಿಯೋಗ್ರಾಫರ್ ಪವನ್ ಅಂದರ್

ಬೆಂಗಳೂರು: ಸ್ಟಾರ್ ನಟನ ತಂಗಿ ಪಾತ್ರಕ್ಕೆ ಚಿತ್ರದ ಆಡಿಷನ್‌ ಇದೆ ಎಂದು ಕರೆಸಿ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ನೃತ್ಯ ಸಂಯೋಜಕ ಪವನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳೆದ ಜನವರಿ 12 ರಂದು ಡ್ಯಾನ್ಸ್ ಮಾಸ್ಟರ್ ಪವನ್ ಯುವತಿಗೆ ಕರೆ ಮಾಡಿ ಚಿತ್ರವೊಂದರಲ್ಲಿ ತಂಗಿ ಪಾತ್ರಕ್ಕೆ ಆಡಿಷನ್ ಇದೆ ಬಾ ಎಂದು ಕರೆದಿದ್ದಾರೆ. ಸಂತ್ರಸ್ಥ ಯುವತಿ ನಾಗರಭಾವಿ ಬಳಿಯ ತನ್ನ ಡ್ಯಾನ್ಸ್ ಕ್ಲಾಸಿಗೆ ಬಂದಿದ್ದಾಳೆ. ನಂತರ ಪವನ್ ತನ್ನ ಗೆಳೆಯನೊಬ್ಬನಿಗೆ ಕರೆ […]

ಆಡಿಷನ್​ಗೆ ಕರೆಸಿ ಅತ್ಯಾಚಾರ ಆರೋಪ, ಕೊರಿಯೋಗ್ರಾಫರ್ ಪವನ್ ಅಂದರ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Jan 16, 2020 | 9:52 AM

Share

ಬೆಂಗಳೂರು: ಸ್ಟಾರ್ ನಟನ ತಂಗಿ ಪಾತ್ರಕ್ಕೆ ಚಿತ್ರದ ಆಡಿಷನ್‌ ಇದೆ ಎಂದು ಕರೆಸಿ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ನೃತ್ಯ ಸಂಯೋಜಕ ಪವನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ಜನವರಿ 12 ರಂದು ಡ್ಯಾನ್ಸ್ ಮಾಸ್ಟರ್ ಪವನ್ ಯುವತಿಗೆ ಕರೆ ಮಾಡಿ ಚಿತ್ರವೊಂದರಲ್ಲಿ ತಂಗಿ ಪಾತ್ರಕ್ಕೆ ಆಡಿಷನ್ ಇದೆ ಬಾ ಎಂದು ಕರೆದಿದ್ದಾರೆ. ಸಂತ್ರಸ್ಥ ಯುವತಿ ನಾಗರಭಾವಿ ಬಳಿಯ ತನ್ನ ಡ್ಯಾನ್ಸ್ ಕ್ಲಾಸಿಗೆ ಬಂದಿದ್ದಾಳೆ. ನಂತರ ಪವನ್ ತನ್ನ ಗೆಳೆಯನೊಬ್ಬನಿಗೆ ಕರೆ ಮಾಡಿ ನಿರ್ದೇಶಕನ ಸೋಗಿನಲ್ಲಿ ಯುವತಿಯ ಜೊತೆ ಮಾತನಾಡಿಸಿದ್ದಾನೆ. ಮಾತು ಮುಗಿದ ಬಳಿಕ ನೀನು ಸುದೀಪ್ ಸರ್ ನೆಕ್ಸ್ಟ್ ಮೂವಿಯ ತಂಗಿ ಪಾತ್ರಕ್ಕೆ ನೀನು ಸೆಲೆಕ್ಟ್ ಆಗಿದ್ದೀಯಾ ಎಂದು ನಂಬಿಸಿದ್ದಾನೆ.

ನಂತರ ಡ್ಯಾನ್ಸ್ ಕ್ಲಾಸ್​ನಲ್ಲಿ ಯುವತಿಗೆ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋಗಳನ್ನ ತೋರಿಸಿದ್ದಾನೆ. ಬಳಿಕ ಪ್ರಜ್ಞೆ ತಪ್ಪುವ ಔಷಧ ಬೆರೆಸಿದ ನೀರು ಕುಡಿಸಿದ್ದಾನೆ. ಯುವತಿ ಪ್ರಜ್ಞೆತಪ್ಪಿದಾಗ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ಥ ಯುವತಿ ಪೋಷಕರು ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಯುವತಿಯನ್ನ ನಂಬಿಸಿ ದೈಹಿಕವಾಗಿ ಹಿಂಸಿಸಿದ ಕನ್ನಡದ ಡ್ಯಾನ್ಸ್ ಮಾಸ್ಟರ್ ಅಂದರ್ ಆಗಿದ್ದಾನೆ. ಬಂಧಿತ ಡ್ಯಾನ್ಸ್ ಮಾಸ್ಟರ್ ಕನ್ನಡದ ಖ್ಯಾತ ರಿಯಾಲಿಟಿ ಶೋ ಗಳಿಗೆ ಕೊರಿಯೋಗ್ರಾಫರ್ ಆಗಿದ್ದ. ಕನ್ನಡದ ಡ್ಯಾನ್ಸ್ ಡ್ಯಾನ್ಸ್, ತಕಧಿಮಿತ, ಕಿಕ್, ಡ್ಯಾನ್ಸಿಂಗ್ ಸ್ಟಾರ್ ಶೋಗಳಲ್ಲಿ ನೃತ್ಯಸಂಯೋಜಕನಾಗಿದ್ದ. ನಾಗರಭಾವಿ ಬಿಡಿಎ ಕಾಂಪ್ಲೇಕ್ಸ್ ಬಳಿ ಡ್ಯಾನ್ಸ್ ಕ್ಲಾಸ್ ಹೊಂದಿದ್ದ. ಸಂತ್ರಸ್ಥ ಯುವತಿ ಪವನ್ ಬಳಿ ಕಳೆದ ಮೂರು ವರ್ಷಗಳಿಂದ ಡ್ಯಾನ್ಸ್ ಕಲಿಯುತ್ತಿದ್ದಳು.

Published On - 7:54 am, Thu, 16 January 20

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್