ಸಿಎಂ ಯಡಿಯೂರಪ್ಪ ಆದೇಶಕ್ಕೆ ರೇಣುಕಾಚಾರ್ಯ ಡೋಂಟ್ ಕೇರ್
ದಾವಣಗೆರೆ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೊರೊನಾ ಹತ್ತಿಕ್ಕಲು ಸಂಡೇ ಲಾಕ್‌ಡೌನ್ ನಿಯಮ ಜಾರಿಗೆ ತಂದಿದ್ದಾರೆ. ಆದ್ರೆ ಅವರ ರಾಜಕೀಯ ಕಾರ್ಯದರ್ಶಿಯೇ ಸಂಡೇ ಲಾಕ್‌ಡೌನ್ ರೂಲ್ಸ್ ಅನ್ನು ಉಲ್ಲಂಘಿಸಿ ಸಿಎಂ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ಹೌದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯರೇ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ತಮ್ಮದೇ ಆದ ಪಟಾಲಂ ಕಟ್ಟಿಕೊಂಡು ತಾಲೂಕಿನಾದ್ಯಂತ ತಿರುಗುತ್ತಿದ್ದಾರೆ. ಒಂದಾದರ ಮೇಲೊಂದರಂತೆ ಮದುವೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೊನ್ನಾಳಿ ತಾಲೂಕಿನ ಕೆಂಚಿಕೊಪ್ಪ, ಯರಗನಾಳ್ ಗ್ರಾಮಗಳು […]
ದಾವಣಗೆರೆ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೊರೊನಾ ಹತ್ತಿಕ್ಕಲು ಸಂಡೇ ಲಾಕ್‌ಡೌನ್ ನಿಯಮ ಜಾರಿಗೆ ತಂದಿದ್ದಾರೆ. ಆದ್ರೆ ಅವರ ರಾಜಕೀಯ ಕಾರ್ಯದರ್ಶಿಯೇ ಸಂಡೇ ಲಾಕ್‌ಡೌನ್ ರೂಲ್ಸ್ ಅನ್ನು ಉಲ್ಲಂಘಿಸಿ ಸಿಎಂ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ.
ಹೌದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯರೇ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ತಮ್ಮದೇ ಆದ ಪಟಾಲಂ ಕಟ್ಟಿಕೊಂಡು ತಾಲೂಕಿನಾದ್ಯಂತ ತಿರುಗುತ್ತಿದ್ದಾರೆ. ಒಂದಾದರ ಮೇಲೊಂದರಂತೆ ಮದುವೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಹೊನ್ನಾಳಿ ತಾಲೂಕಿನ ಕೆಂಚಿಕೊಪ್ಪ, ಯರಗನಾಳ್ ಗ್ರಾಮಗಳು ಸೇರಿದಂತೆ ವಿವಿಧೆಡೆಗಳಲ್ಲಿ ತಮ್ಮ ಹಿಂಬಾಲಕರನ್ನು ಕಟ್ಟಿಕೊಂಡು ತಿರುಗುತ್ತಿರುವ ಶಾಸಕರ ಈ ವರ್ತನೆಗೆ ಸಾರ್ವಜನಿಕವಾಗಿ ಟೀಕೆಗಳು ಕೇಳಿಬಂದಿವೆ. ಮುಖ್ಯಂಂತ್ರಿಗಳ ರಾಜಕೀಯ ಕಾರ್ಯದರ್ಶಿಯೇ ನಿಯಮಗಳನ್ನ ಉಲ್ಲಂಘಿಸಿದರೆ ಜನಸಾಮನ್ಯರು ಪಾಲಿಸುತ್ತಾರಾ ಎಂದು ಪ್ರಶ್ನಿಸುತ್ತಿದ್ದಾರೆ.
Published On - 3:06 pm, Sun, 26 July 20