ಮಹಾರಾಷ್ಟ್ರ, ಒಡಿಸ್ಸಾಗೆ ಹೋಗಿದ್ದ ಕೊರೊನಾ ಶಂಕಿತ ವ್ಯಕ್ತಿ ಕೋಲಾರದಲ್ಲಿ ಸಾವು
ಕೋಲಾರ: ಮಾಲೂರಿನಲ್ಲಿ ಕೊರೊನಾ ಶಂಕಿತ ಮೃತಪಟ್ಟಿದ್ದಾರೆ. ಇದರಿಂದ ಮಾಲೂರಿನ ಜನ ಆತಂಕಕ್ಕೆ ಒಳಗಾಗಿದ್ದಾರೆ. ಮಹಾರಾಷ್ಟ್ರ ಮೂಲದ ಮನೋಹರ್(60) ಮೃತ ದುರ್ದೈವಿ. ಇವರು 15 ದಿನದ ಹಿಂದೆ ಚಿಕ್ಕಬಳ್ಳಾಪುರ ಮೂಲದ ಟ್ರಕ್ ಚಾಲಕನೊಂದಿಗೆ ಟ್ರಕ್‌ನಲ್ಲಿ ಕೋಲಾರ ಜಿಲ್ಲೆಗೆ ಬಂದಿದ್ದರು. ನಂತರ ನಾಲ್ಕು ದಿನಗಳ ಹಿಂದೆ ಟ್ರಕ್ ಮೂಲಕ ಮಾಲೂರಿನಿಂದ ಒಡಿಸ್ಸಾ ಹೋಗಿದ್ದರು. ನಿನ್ನೆ ಸಂಜೆ ಒಡಿಸ್ಸಾದಿಂದ ಮಾಲೂರಿಗೆ ಬಂದಿದ್ದಾರೆ. ತೀವ್ರ ಉಸಿರಾಟ ಸಮಸ್ಯೆಯಿಂದ ನಿನ್ನೆ ರಾತ್ರಿ 11 ಗಂಟೆಗೆ ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ […]
ಕೋಲಾರ: ಮಾಲೂರಿನಲ್ಲಿ ಕೊರೊನಾ ಶಂಕಿತ ಮೃತಪಟ್ಟಿದ್ದಾರೆ. ಇದರಿಂದ ಮಾಲೂರಿನ ಜನ ಆತಂಕಕ್ಕೆ ಒಳಗಾಗಿದ್ದಾರೆ. ಮಹಾರಾಷ್ಟ್ರ ಮೂಲದ ಮನೋಹರ್(60) ಮೃತ ದುರ್ದೈವಿ. ಇವರು 15 ದಿನದ ಹಿಂದೆ ಚಿಕ್ಕಬಳ್ಳಾಪುರ ಮೂಲದ ಟ್ರಕ್ ಚಾಲಕನೊಂದಿಗೆ ಟ್ರಕ್‌ನಲ್ಲಿ ಕೋಲಾರ ಜಿಲ್ಲೆಗೆ ಬಂದಿದ್ದರು. ನಂತರ ನಾಲ್ಕು ದಿನಗಳ ಹಿಂದೆ ಟ್ರಕ್ ಮೂಲಕ ಮಾಲೂರಿನಿಂದ ಒಡಿಸ್ಸಾ ಹೋಗಿದ್ದರು. ನಿನ್ನೆ ಸಂಜೆ ಒಡಿಸ್ಸಾದಿಂದ ಮಾಲೂರಿಗೆ ಬಂದಿದ್ದಾರೆ.
ತೀವ್ರ ಉಸಿರಾಟ ಸಮಸ್ಯೆಯಿಂದ ನಿನ್ನೆ ರಾತ್ರಿ 11 ಗಂಟೆಗೆ ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಗೆ ಸೊರೊನಾ ಸೋಂಕು ಇರುವ ಬಗ್ಗೆ ಆಸ್ಪತ್ರೆಯ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಮೃತನ ಗಂಟಲು ದ್ರವ ಕೊರೊನಾ ಪರೀಕ್ಷೆಗೆ ರವಾನಿಸಲಾಗಿದೆ.
Published On - 9:45 am, Tue, 19 May 20