ಟೈಂ ಫಿಕ್ಸ್ ಮಾಡಿ ಯಡವಟ್ಟು ಮಾಡ್ತಾ ಸರ್ಕಾರ? ಸಾರಿಗೆ ಸಚಿವರಿಗೆ 8 ಪ್ರಶ್ನೆಗಳು
ಬೆಂಗಳೂರು: ಬಸ್ ಓಡಾಟಕ್ಕೆ ಅವಕಾಶ ಕೊಟ್ಟು, ಟೈಂ ಫಿಕ್ಸ್ ಮಾಡಿ ಸರ್ಕಾರ ಯಡವಟ್ಟು ಮಾಡಿಕೊಂಡಿದೆ. ಸರ್ಕಾರದ ಸಂಚಾರಿ ಗೈಡ್ಲೈನ್ಸ್ನಿಂದ ಹಲವಾರು ಗೊಂದಲಗಳು ಹುಟ್ಟಿವೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸರ್ಕಾರಿ ಬಸ್, ಖಾಸಗಿ ಬಸ್, ಎಲ್ಲಾ ವಾಹನಕ್ಕೆ ಟೈಂ ಕಂಡೀಷನ್ ಹಾಕಲಾಗಿದೆ. ಆದರೆ ಸರ್ಕಾರದ ಸಾರಿಗೆ ಸಂಚಾರ ಗೈಡ್ಲೈನ್ಸ್ ಫಾಲೋ ಮಾಡೋದು ಕಷ್ಟವಾಗಿದೆ. ಅವೈಜ್ಞಾನಿಕ ಸಾರಿಗೆ ಸಂಚಾರ ಗೈಡ್ಲೈನ್ಸ್ನಿಂದ ಪ್ರಯಾಣಿಕರಿಗೆ ತೊಂದ್ರೆ ಉಂಟಾಗಿದ್ದು, ಬೆಂಗಳೂರಿನಿಂದ ದೂರದ ಜಿಲ್ಲೆಗಳಿಗೆ 12 […]
ಬೆಂಗಳೂರು: ಬಸ್ ಓಡಾಟಕ್ಕೆ ಅವಕಾಶ ಕೊಟ್ಟು, ಟೈಂ ಫಿಕ್ಸ್ ಮಾಡಿ ಸರ್ಕಾರ ಯಡವಟ್ಟು ಮಾಡಿಕೊಂಡಿದೆ. ಸರ್ಕಾರದ ಸಂಚಾರಿ ಗೈಡ್ಲೈನ್ಸ್ನಿಂದ ಹಲವಾರು ಗೊಂದಲಗಳು ಹುಟ್ಟಿವೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸರ್ಕಾರಿ ಬಸ್, ಖಾಸಗಿ ಬಸ್, ಎಲ್ಲಾ ವಾಹನಕ್ಕೆ ಟೈಂ ಕಂಡೀಷನ್ ಹಾಕಲಾಗಿದೆ. ಆದರೆ ಸರ್ಕಾರದ ಸಾರಿಗೆ ಸಂಚಾರ ಗೈಡ್ಲೈನ್ಸ್ ಫಾಲೋ ಮಾಡೋದು ಕಷ್ಟವಾಗಿದೆ. ಅವೈಜ್ಞಾನಿಕ ಸಾರಿಗೆ ಸಂಚಾರ ಗೈಡ್ಲೈನ್ಸ್ನಿಂದ ಪ್ರಯಾಣಿಕರಿಗೆ ತೊಂದ್ರೆ ಉಂಟಾಗಿದ್ದು, ಬೆಂಗಳೂರಿನಿಂದ ದೂರದ ಜಿಲ್ಲೆಗಳಿಗೆ 12 ಗಂಟೆಯಲ್ಲಿ ಹೋಗಲು ಸಾಧ್ಯವೆ ಎಂಬ ಪ್ರಶ್ನೆ ಉಂಟಾಗಿದೆ.
ಸಾರಿಗೆ ಇಲಾಖೆ ಸಚಿವರಿಗೆ ಟಿವಿ9 ಪ್ರಶ್ನೆ: ಪ್ರಶ್ನೆ 1 : ಬೆಂಗಳೂರಿನಿಂದ ಬೀದರ್ಗೆ ಬರೋಬ್ಬರಿ 689 ಕಿಲೋ ಮೀಟರ್ ಇದೆ 12 ಗಂಟೆಗಳ ಅವಧಿಯಲ್ಲಿ ಬೆಂಗಳೂರಿನಿಂದ ಬೀದರ್ಗೆ ಹೋಗಲು ಸಾಧ್ಯವೆ ಪ್ರಶ್ನೆ 2 : ಟ್ರಾಫಿಕ್ ಜಾಮ್ ಮಧ್ಯೆ ಸುಡುಬಿಸಿಲಿನಲ್ಲಿ 12 ಗಂಟೆ ಪ್ರಯಾಣ ಸಾಧ್ಯವೇ ಪ್ರಶ್ನೆ 3 : ಬೀದರ್ಗೆ 12 ಗಂಟೆಯೊಳಗೆ ತಲಪಿದರೂ, ಅಲ್ಲಿಂದ ಬೇರೆಡೆಗೆ ಹೋಗೋರ ಕಥೆ ಏನು..? ಪ್ರಶ್ನೆ 4 : ಜಿಲ್ಲಾ ಕೇಂದ್ರದಿಂದ ಹಳ್ಳಿಗಳಿಗೆ 7 ಗಂಟೆ ನಂತ್ರ ಬಸ್ ಇಲ್ದೆ ಹೋದ್ರೆ ಜನರ ಕಥೆ ಏನು..? ಪ್ರಶ್ನೆ 5 : 12 ಗಂಟೆಗಳ ಅವಧಿಯಲ್ಲಿ ಚಾಲಕ , ನಿರ್ವಾಹಕರ, ಪ್ರಯಾಣಿಕರ ಊಟದ ವ್ಯವಸ್ಥೆ ಏನು…? ಪ್ರಶ್ನೆ 6 : ಕ್ಯಾಂಟೀನ್ ತೆರೆಯಲು ಅವಕಾಶವಿದೆ, ಆದ್ರೆ ಊಟಕ್ಕೆ ಸಮಯ ಎಲ್ಲಿದೆ..? ಪ್ರಶ್ನೆ 7 : ಊಟ ಮಾಡಲು ಸಮಯ ತೆಗೆದುಕೊಂಡ್ರೆ ಸಂಜೆ 7 ಗಂಟೆ ವೇಳೆಗೆ ತಲುಪಲು ಸಾಧ್ಯವೆ ಪ್ರಶ್ನೆ 8 : ಪ್ರಯಾಣದ ಬಳಿಕ ಇಡೀ ಬಸ್ ಸಾನಿಟೈಜ್ ಮಾಡುವ ವ್ಯವಸ್ಥೆ ನಮ್ಮಲ್ಲಿ ಇದ್ಯಾ..?
ಕಲ್ಯಾಣ ಕರ್ನಾಟಕ ಭಾಗಕ್ಕೆ ನಾಳೆಯಿಂದ ಸಂಚಾರ: ಟಿವಿ9 ವರದಿ ಬಳಿಕ ಎಚ್ಚೆತ್ತ ಸಚಿವರು ಲಾಂಗ್ ಜರ್ನಿ ಇರುವುದರಿಂದ ಇಂದು ಸಂಚಾರವಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ನಾಳೆಯಿಂದ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತೇವೆ. ಪ್ರಯಾಣಿಕರಿಗೆ ಮಾಹಿತಿ ಇಲ್ಲದೆ ಬಂದಿರುತ್ತಾರೆ. ಕಮ್ಯೂನಿಕೇಷನ್ ಇಲ್ಲದೆ ಈ ರೀತಿಯಾಗಿ ಆಗಿದೆ ಎಂದು ಸಾರಿಗೆ ಇಲಾಖೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
Published On - 10:23 am, Tue, 19 May 20