ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4 ಲಕ್ಷ ದಾಟಿತು!

  • Publish Date - 9:17 pm, Mon, 7 September 20
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4 ಲಕ್ಷ ದಾಟಿತು!
ಪ್ರಾತಿನಿಧಿಕ ಚಿತ್ರ

ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಇಂದು ಸಾಯಂಕಾಲ ಹೊರಬಿದ್ದಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 141 ಜನ ಕೊವಿಡ್-19 ಸೋಂಕಿನಿಂದ ಸಾವನ್ನಪ್ಪಿದ್ದಾರೆ ಮತ್ತು ಹೊಸದಾಗಿ 5,773 ಜನರಲ್ಲಿ ಸೋಂಕು ಧೃಡಪಟ್ಟಿದೆ. ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ 6,534 ಮರಣಿಸಿದ್ದು ಸೋಂಕಿತರ ಸಂಖ್ಯೆ 4,04,324ಕ್ಕೇರಿದೆ.

ಸೋಂಕಿತರ ಪೈಕಿ 3,00,770 ಜನ ಗುಣಮುಖರಾಗಿ ಮನೆಗಳಿಗೆ ಹಿಂದಿರುಗಿದ್ದಾರೆ ಹಾಗೂ ಉಳಿದ 97,001 ಸೋಂಕಿತರಿಗೆ ವಿವಿಧ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಾಗೆಯೇ, ಬೆಂಗಳೂರಿನಲ್ಲಿ ಇಂದು 48 ಜನ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದು, ಇದುವರೆಗೆ ವ್ಯಾಧಿಗೆ ತುತ್ತಾದವರ ಸಂಖ್ಯೆ 2,211 ತಲುಪಿದೆ. ನಗರದಲ್ಲಿಂದು 2,942 ಜನರಿಗೆ ಹೊಸದಾಗಿ ಸೋಂಕು ತಗುಲಿದ್ದು ಪೀಡಿತರ ಸಂಖ್ಯೆ 1,50,523ಕ್ಕೇರಿದೆ. ಅವರ ಪೈಕಿ 1,08,642 ಜನರು ಗುಣಮುಖರಾಗಿದ್ದಾರೆ ಮತ್ತು ಉಳಿದ 39,669 ಸೋಂಕಿತರು ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Click on your DTH Provider to Add TV9 Kannada