ಕರ್ತವ್ಯದ ವೇಳೆ ಹೃದಯಾಘಾತ, ಕೊವಿಡ್ ವಾರಿಯರ್ ಸಾವು
ಗದಗ: ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಹೃದಯಾಘಾತವಾಗಿ ಕೊವಿಡ್ ವಾರಿಯರ್ ಮೃತಪಟ್ಟಿದ್ದಾರೆ. ಆ್ಯಂಬುಲೆನ್ಸ್ ಚಾಲಕ ಉಮೇಶ್(37) ಮೃತಪಟ್ಟವರು. ಕೊಣ್ಣೂರ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತವಾಗಿದೆ. ತಕ್ಷಣ ಚಾಲಕ ಉಮೇಶ್ನನ್ನು ಧಾರವಾಡ ಎಸ್ಡಿಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ದಾರಿ ಮಧ್ಯೆಯೇ ಉಮೇಶ್ ಮೃತಪಟ್ಟಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಉಮೇಶ್ ಮೃತಪಟ್ಟಿದ್ದರೂ ಡಿಹೆಚ್ಒ ಡಾ.ಸತೀಶ್ ಬಸರಿಗಿಡದ ಅವರಿಗೆ ಗೊತ್ತಿಲ್ಲವಂತೆ! ಈ ಬಗ್ಗೆ ವಿಚಾರಿಸಿದ್ರೆ.. ಅದು ನನ್ನ ವ್ಯಾಪ್ತಿಗೆ ಬರಲ್ಲ ಎಂದು ಉಡಾಫೆ ಉತ್ತರವನ್ನೂ ನೀಡಿದ್ದಾರೆ.
ಗದಗ: ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಹೃದಯಾಘಾತವಾಗಿ ಕೊವಿಡ್ ವಾರಿಯರ್ ಮೃತಪಟ್ಟಿದ್ದಾರೆ. ಆ್ಯಂಬುಲೆನ್ಸ್ ಚಾಲಕ ಉಮೇಶ್(37) ಮೃತಪಟ್ಟವರು.
ಕೊಣ್ಣೂರ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತವಾಗಿದೆ. ತಕ್ಷಣ ಚಾಲಕ ಉಮೇಶ್ನನ್ನು ಧಾರವಾಡ ಎಸ್ಡಿಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ದಾರಿ ಮಧ್ಯೆಯೇ ಉಮೇಶ್ ಮೃತಪಟ್ಟಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಉಮೇಶ್ ಮೃತಪಟ್ಟಿದ್ದರೂ ಡಿಹೆಚ್ಒ ಡಾ.ಸತೀಶ್ ಬಸರಿಗಿಡದ ಅವರಿಗೆ ಗೊತ್ತಿಲ್ಲವಂತೆ! ಈ ಬಗ್ಗೆ ವಿಚಾರಿಸಿದ್ರೆ.. ಅದು ನನ್ನ ವ್ಯಾಪ್ತಿಗೆ ಬರಲ್ಲ ಎಂದು ಉಡಾಫೆ ಉತ್ತರವನ್ನೂ ನೀಡಿದ್ದಾರೆ.
Published On - 6:49 pm, Wed, 27 May 20