ಬೆಂಗಳೂರಿಗರ ಸ್ವರ್ಗದ ಬಾಗಿಲು ತೆರೆಯಲು ಸಮಯ ನಿಗದಿ: ಪ್ರವಾಸಿಗರು ಹೈರಾಣ..

ಬೆಂಗಳೂರಿಗರ ಸ್ವರ್ಗದ ಬಾಗಿಲು ತೆರೆಯಲು ಸಮಯ ನಿಗದಿ: ಪ್ರವಾಸಿಗರು ಹೈರಾಣ..

ಚಿಕ್ಕಬಳ್ಳಾಪುರ: ಅದು ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಂತೇ ಇರುವ ಗಿರಿಧಾಮ. ವೀಕೆಂಡ್​ನಲ್ಲಿ ಅಲ್ಲಿಗೆ ಹೋಗಿ ಕುಣಿದು ಕುಪ್ಪಳಿಸದಿದ್ರೆ ವೀಕೆಂಡ್ ಬಗ್ಗೆ ವಿರಸ ಮೂಡುತ್ತೆ. ಆದರೆ ಕೊರೊನಾದಿಂದ ಗಿರಿಧಾಮ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು.

ಇದೀಗ ನಿಷೇಧ ವಾಪಸ್ ಪಡೆದು ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದೇ ತಡ ಪ್ರವಾಸಿಗರ ದಂಡೇ ಹರಿದು ಬರ್ತಿದೆ. ಭೂಮಿ ಆಕಾಶ ಸೇರಿ ಒಂದನ್ನೊಂದು ತಬ್ಬುವ ಹಾಗೆ ಬೆಳ್ಳಿಮೋಡಗಳ ಮಧ್ಯೆ ಇರುವ ಇದು ಪ್ರಕೃತಿ ಸೌಂದರ್ಯದ ನಾಡು.. ಹಾಗೇ ಪ್ರೇಮಿಗಳ ಬೀಡು. ಅಷ್ಟೇ ಯಾಕೆ ವೃದ್ಧರಿಗೆ ಸಿಕ್ಕಾಪಟ್ಟೆ ಹೆಲ್ತೀ ಪ್ಲೇಸ್.

ನಂದಿ ಬೆಟ್ಟ ಪ್ರವೇಶಿಸಲು ಪ್ರವಾಸಿಗರ ಜಾಗರಣೆ..!
ರಾಜಧಾನಿ ಬೆಂಗಳೂರಿನಿಂದ 50 ಕಿ.ಮೀ. ದೂರದಲ್ಲಿರೋ ಕಾರಣ, ಬೆಂಗಳೂರಿಗರ ಫೇವರಿಟ್ ಸ್ಪಾಟ್ ನಂದಿ ಹಿಲ್ಸ್. ಆದ್ರೆ ಇಂಥ ಸುಂದರ ಗಿರಿಧಾಮಕ್ಕೂ ಕೊರೊನಾ ಸಂಕಷ್ಟ ತಗುಲಿ ಕಳೆದ ಐದಾರು ತಿಂಗಳಿಂದ ಲಾಕ್​ಡೌನ್ ಆಗಿತ್ತು.

ಆದ್ರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಾರ್ವಜನಿಕರ ಪ್ರವೇಶಕ್ಕೆ ಹೇರಿದ್ದ ನಿಷೇಧವನ್ನ ಹಿಂಪಡೆದು ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದ್ರಿಂದ ಮತ್ತೆ ರಾಜಧಾನಿ ಮಂದಿ ಗಿರಿಧಾಮದತ್ತ ಆಗಮಿಸ್ತಿದ್ದಾರೆ. ಆದ್ರೆ ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಗಿರಿಧಾಮ ಪ್ರವೇಶಕ್ಕೆ ಹಲವು ನಿಬಂಧನೆ ವಿಧಿಸಿದೆ.

ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಮಾತ್ರ ಅವಕಾಶ..
ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಮಾತ್ರ ಅವಕಾಶ ನೀಡಿದೆ. ಇದರ ಪರಿವಿಲ್ಲದೆ ರಾತ್ರಿಯೇ ಗಿರಿಧಾಮಕ್ಕೆ ಬರುವ ಪ್ರವಾಸಿಗರು ಗೇಟ್ ಬಳಿ ಕಾರು-ಬೈಕ್, ವಾಹನಗಳಲ್ಲಿ ಜಾಗರಣೆ ಮಾಡುವಂತಾಗಿದೆ. ಹೀಗೆ ಅನ್​ಲಾಕ್ ಬಳಿ ನಂದಿ ಹಿಲ್ಸ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

ಒಂದ್ಕಡೆ ಹೀಗೆ ಪ್ರವಾಸಿಗರು ತಮಗೆ ತಿಳಿಯದಂತೆ ನಂದಿಹಿಲ್ಸ್ ಪ್ರವಾಸಕ್ಕೆ ಅಂತಾ ಬಂದು ಜಾಗರಣೆ ಮಾಡುತ್ತಿದ್ರೆ, ಇನ್ನೊಂದ್ಕಡೆ ಗಿರಿಧಾಮದ ಅಧಿಕಾರಿಗಳು ಮಾತ್ರ ತಮ್ಮ ಈ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಟ್ನಲ್ಲಿ ಐದಾರು ತಿಂಗಳ ನಂತರ ಗಿರಿಧಾಮಕ್ಕೆ ಬರುವ ಪ್ರವಾಸಿಗರು, ಗಿರಿಧಾಮದ ಪ್ರಕೃತಿ ಸೌಂದರ್ಯ ಸವಿಯುವ ಹುಮ್ಮಸ್ಸಿನಲ್ಲಿದ್ದಾರೆ.

ಹೀಗಾಗಿ ಅಪಾಯಕ್ಕೆ ಸಿಲುಕಬಾರದು ಎಂಬ ಕಾರಣಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಒಂದಷ್ಟು ನಿರ್ಬಂಧ ವಿಧಿಸಿದೆ. ಹೀಗಾಗಿ ಪ್ರವಾಸಿಗರು ಕೂಡ ನಿಯಮ ಪಾಲಿಸಿ ಪ್ರವಾಸವನ್ನ ಎಂಜಾಯ್ ಮಾಡಬೇಕಾಗಿದೆ.

Click on your DTH Provider to Add TV9 Kannada