ಕೊರೊನಾ ನಿಯಂತ್ರಣಕ್ಕೆ ಬಾಗಲಕೋಟೆ ಜಿಲ್ಲಾಡಳಿತ ಮಾಸ್ಟರ್ ಪ್ಲ್ಯಾನ್!

ಸಾಧು ಶ್ರೀನಾಥ್​

|

Updated on:May 17, 2020 | 4:04 PM

ಬಾಗಲಕೋಟೆ: ಜಿಲ್ಲೆ ಸದ್ಯ ಕೊರೊನಾ ಹಾಟ್​ಸ್ಪಾಟ್ ಆಗಿದೆ. ಉತ್ತರದಲ್ಲಿ ಬೆಳಗಾವಿ ಹೊರತುಪಡಿಸಿದರೆ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದ್ದು ಬಾಗಲಕೋಟೆ ಜಿಲ್ಲೆಯಲ್ಲೇ. ಇನ್ನು ಜಿಲ್ಲೆಯಲ್ಲಿ ಲಾಕ್​ಡೌನ್ ಎಷ್ಟೇ ಕಟ್ಟುನಿಟ್ಟಾಗಿ ಜಾರಿ‌ ಮಾಡಿದ್ರೂ ಜಿಲ್ಲೆಯಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಕಡಿಮೆಯಾಗ್ತಿಲ್ಲ. ವೈದ್ಯಕೀಯ ಸಿಬ್ಬಂದಿಯ ಅವಿರತ ಶ್ರಮ ಕೂಡ ಸಫಲವಾಗ್ತಿಲ್ಲ. 70 ರ ಗಡಿಗೆ ಪ್ರಕರಣಗಳು ಬಂದು ತಲುಪಿವೆ. ಈ ಹೊತ್ತಲ್ಲೇ ಮಹಾಮಾರಿಗೆ ಒಂದು ಗತಿ ಕಾಣಿಸಲು ಜಿಲ್ಲಾಡಳಿತ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಲ್ಯಾಬ್ ಆರಂಭಿಸಲು ಮುಂದಾದ ಬಾಗಲಕೋಟೆ […]

ಕೊರೊನಾ ನಿಯಂತ್ರಣಕ್ಕೆ ಬಾಗಲಕೋಟೆ ಜಿಲ್ಲಾಡಳಿತ ಮಾಸ್ಟರ್ ಪ್ಲ್ಯಾನ್!

ಬಾಗಲಕೋಟೆ: ಜಿಲ್ಲೆ ಸದ್ಯ ಕೊರೊನಾ ಹಾಟ್​ಸ್ಪಾಟ್ ಆಗಿದೆ. ಉತ್ತರದಲ್ಲಿ ಬೆಳಗಾವಿ ಹೊರತುಪಡಿಸಿದರೆ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದ್ದು ಬಾಗಲಕೋಟೆ ಜಿಲ್ಲೆಯಲ್ಲೇ. ಇನ್ನು ಜಿಲ್ಲೆಯಲ್ಲಿ ಲಾಕ್​ಡೌನ್ ಎಷ್ಟೇ ಕಟ್ಟುನಿಟ್ಟಾಗಿ ಜಾರಿ‌ ಮಾಡಿದ್ರೂ ಜಿಲ್ಲೆಯಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಕಡಿಮೆಯಾಗ್ತಿಲ್ಲ. ವೈದ್ಯಕೀಯ ಸಿಬ್ಬಂದಿಯ ಅವಿರತ ಶ್ರಮ ಕೂಡ ಸಫಲವಾಗ್ತಿಲ್ಲ. 70 ರ ಗಡಿಗೆ ಪ್ರಕರಣಗಳು ಬಂದು ತಲುಪಿವೆ. ಈ ಹೊತ್ತಲ್ಲೇ ಮಹಾಮಾರಿಗೆ ಒಂದು ಗತಿ ಕಾಣಿಸಲು ಜಿಲ್ಲಾಡಳಿತ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.

ಲ್ಯಾಬ್ ಆರಂಭಿಸಲು ಮುಂದಾದ ಬಾಗಲಕೋಟೆ ಜಿಲ್ಲಾಡಳಿತ: ಅಂದಹಾಗೆ ಜಿಲ್ಲೆಯಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್ ಆರಂಭಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿತ್ತು. ಕೊನೆಗೆ ಅದಕ್ಕೆ ಕಾಲ ಕೂಡಿ ಬಂದಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಈಗಾಗಲೇ ಕೊರೊನಾ ಟೆಸ್ಟಿಂಗ್ ಯುನಿಟ್ ಹಾಕಲಾಗಿದೆ. ಅದನ್ನು ಆಪರೇಟ್ ಮಾಡಲು ಆಸ್ಪತ್ರೆ ತಂತ್ರಜ್ಞರಿಗೆ ತರಬೇತಿ ನೀಡಲಾಗಿದೆ. ಇದಕ್ಕಾಗಿ ಜಿಲ್ಲಾಸ್ಪತ್ರೆಯಲ್ಲಿ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದ್ದು, ಓರ್ವ ಪ್ಯಾಥಾಲಜಿಸ್ಟ್, ನಾಲ್ವರು ಟೆಕ್ನಿಷಿಯನ್ ಕೊವಿಡ್ ಟೆಸ್ಟ್​ಗೆ ಅಣಿಯಾಗಿದ್ದಾರೆ.

ಅಷ್ಟಕ್ಕೂ ಬಾಗಲಕೋಟೆ ಜಿಲ್ಲೆಯಲ್ಲಿ ವಿವಿಧ ದಿಕ್ಕಿನಿಂದ, ವಿವಿಧ ಮೂಲೆಗಳಿಂದ ಸೋಂಕು ವಕ್ಕರಿಸ್ತ್ತಿದೆ. ಇನ್ನೂ ಜಿಲ್ಲೆಯಲ್ಲಿ ‌ಮೊದಲು ಸೋಂಕು ಕಾಣಿಸಿಕೊಂಡ ವೃದ್ಧ ಈಗಾಗಲೇ ಬಲಿಯಾಗಿದ್ದಾನೆ. ಆತನ ಮನೆ ವ್ಯಾಪ್ತಿಯಲ್ಲೇ 15 ಜನಕ್ಕೆ ಕೊರೊನಾ ವಕ್ಕರಿಸಿತ್ತು. ಅದ್ರಲ್ಲಿ 12 ಜನ ಡಿಸ್ಚಾರ್ಜ್ ಆಗಿದ್ದು, ಇನ್ನಿಬ್ಬರು ಗುಣಮುಖರಾಗ್ತಿದ್ದಾರೆ. ನಂತರದ ದಿನಗಳಲ್ಲಿ ಮುಧೋಳ, ಬಾದಾಮಿಯಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚುತ್ತಾ ಸಾಗಿದೆ. ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಕೊರೊನಾ ಕೇಸ್​ಗಳು ಹೆಚ್ಚಾಗ್ತಿವೆ.

ಮುಧೋಳ‌ದಲ್ಲಂತೂ ಭಯದ ವಾತಾವರಣವೇ ಇದೆ. ಹೀಗಾಗಿ ನಿತ್ಯ ನೂರಾರು ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಇದುವರೆಗೂ ಗಂಟಲು ದ್ರವವನ್ನು ಬೆಂಗಳೂರಿಗೆ ಕಳಿಸಲಾಗುತ್ತಿದ್ದು, ಸದ್ಯಕ್ಕೆ ಯುನಿಟ್ ಅಳವಡಿಸಿದ್ದು, ICMR ಅನುಮತಿ ಸಿಕ್ಕ ನಂತರ ಸ್ವಾಬ್ ಟೆಸ್ಟಿಂಗ್ ಬಾಗಲಕೋಟೆಯ ‌ಕೋವಿಡ್ ಆಸ್ಪತ್ರೆಯಲ್ಲೇ ಶುರುವಾಗಲಿದೆ. ಇದು ಮಾಹಾಮಾರಿ ಕೊರೊನಾ ಸೋಂಕು ತಡೆಗೆ ಸಾಕಷ್ಟು ಸಹಾಯಕವಾಗಲಿದೆ.

ಒಟ್ನಲ್ಲಿ ಸದ್ಯದ ಸ್ಥಿತಿಯಲ್ಲಿ ಬಾಗಲಕೋಟೆಯಲ್ಲಿ ಕೊರೊನಾ ಕಟ್ಟಿಹಾಕಲು ಲ್ಯಾಬ್ ಅಗತ್ಯತೆ ಇದ್ದು, ಕೂಡಲೇ ಸಂಬಂಧಪಟ್ಟವರು ಟೆಸ್ಟಿಂಗ್ ಲ್ಯಾಬ್ ಅನ್ನ ಆದಷ್ಟು ಬೇಗ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಬೇಕಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada