AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವನ್ಯಾರು? ಇವನ್ಯಾರು?: ಗಲಾಟೆಯ ವಿಡಿಯೋ ಮಾಡಿ ತಗಲಾಕೊಂಡ್ರು ಗಲಭೆಕೋರರು

ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಮತ್ತು ಕಾವಲ್​ ಭೈರಸಂದ್ರದಲ್ಲಿ ದಾಂಧಲೆ ನಡೆಸಿದ ಗಲಭೆಕೋರರು ಇಷ್ಟು ಬೇಗ ನೂರಾರು ಸಂಖ್ಯೆಯಲ್ಲಿ ಲಾಕ್ ಆಗ್ತಿರೋದು ಅವರು ತೆಗೆದ ವಿಡಿಯೋಗಳಿಂದ. ಹೌದು, ಪ್ರತಿ ಮನೆಯ ಬಳಿ ಗಲಾಟೆ ಮಾಡಿದ ಬಗ್ಗೆ ಸಾಕ್ಷಿ ಹೇಳ್ತಿವೆ ಪುಂಡರ ಮೊಬೈಲ್ ಪೋನ್​ಗಳು. ಗಲಾಟೆಯ ವೇಳೆ ಆರೋಪಿಗಳು ಮಾಡಿದ ವಿಡಿಯೋಗಳೇ ಅವರು ಮತ್ತು ಇನ್ನಿತ್ತರ ಆರೋಪಿಗಳನ್ನ ಬಂಧಿಸುವಲ್ಲಿ ನೆರವಾಗುತ್ತಿದೆ ಎಂದು ತಿಳಿದುಬಂದಿದೆ. ಗಲಭೆಕೋರರು ತಾವು ಮಾಡಿದ ಕುಕೃತ್ಯವನ್ನು ತಮ್ಮತಮ್ಮ ಮೊಬೈಲ್​ನಲ್ಲಿ ಚಿತ್ರಿಸಿಕೊಂಡು ಇದೀಗ ತಗಲಾಕಿಕೊಂಡಿದ್ದಾರೆ. ಸಿಸಿಟಿವಿ […]

ಅವನ್ಯಾರು? ಇವನ್ಯಾರು?: ಗಲಾಟೆಯ ವಿಡಿಯೋ ಮಾಡಿ ತಗಲಾಕೊಂಡ್ರು ಗಲಭೆಕೋರರು
KUSHAL V
|

Updated on: Aug 16, 2020 | 12:51 PM

Share

ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಮತ್ತು ಕಾವಲ್​ ಭೈರಸಂದ್ರದಲ್ಲಿ ದಾಂಧಲೆ ನಡೆಸಿದ ಗಲಭೆಕೋರರು ಇಷ್ಟು ಬೇಗ ನೂರಾರು ಸಂಖ್ಯೆಯಲ್ಲಿ ಲಾಕ್ ಆಗ್ತಿರೋದು ಅವರು ತೆಗೆದ ವಿಡಿಯೋಗಳಿಂದ.

ಹೌದು, ಪ್ರತಿ ಮನೆಯ ಬಳಿ ಗಲಾಟೆ ಮಾಡಿದ ಬಗ್ಗೆ ಸಾಕ್ಷಿ ಹೇಳ್ತಿವೆ ಪುಂಡರ ಮೊಬೈಲ್ ಪೋನ್​ಗಳು. ಗಲಾಟೆಯ ವೇಳೆ ಆರೋಪಿಗಳು ಮಾಡಿದ ವಿಡಿಯೋಗಳೇ ಅವರು ಮತ್ತು ಇನ್ನಿತ್ತರ ಆರೋಪಿಗಳನ್ನ ಬಂಧಿಸುವಲ್ಲಿ ನೆರವಾಗುತ್ತಿದೆ ಎಂದು ತಿಳಿದುಬಂದಿದೆ. ಗಲಭೆಕೋರರು ತಾವು ಮಾಡಿದ ಕುಕೃತ್ಯವನ್ನು ತಮ್ಮತಮ್ಮ ಮೊಬೈಲ್​ನಲ್ಲಿ ಚಿತ್ರಿಸಿಕೊಂಡು ಇದೀಗ ತಗಲಾಕಿಕೊಂಡಿದ್ದಾರೆ.

ಸಿಸಿಟಿವಿ ದೃಶ್ಯಾವಳಿಯೊಂದರಲ್ಲಿ ಕಿಡಿಗೇಡಿಗಳು ಕುಕೃತ್ಯದ ವಿಡಿಯೋ ಮಾಡ್ತಿರುವುದು ಪೊಲೀಸರಿಗೆ ಕಂಡು ಬಂತು. ಹಾಗಾಗಿ, ಮೊದಲು ಅರೇಸ್ಟ್ ಆದ ಆರೋಪಿಗಳ‌ ಮೊಬೈಲ್​ನಲ್ಲಿದ್ದ ವಿಡಿಯೋಗಳ ಆಧಾರದ ಮೇಲೆ ಮತ್ತಷ್ಟು ಆರೋಪಿಗಳು ಪತ್ತೆಯಾಗಿದ್ದಾರೆ. ಬಂಧಿಸಿದ ಆರೋಪಿಗಳನ್ನ ಅವರ ವಿಡಿಯೋ ತೋರಿಸಿ ಅವನ್ಯಾರು? ಇವನ್ಯಾರು? ಅಂತಾ ಪ್ರಶ್ನಿಸಿ ಇತರರನ್ನ ಖಾಕಿ ಅರೆಸ್ಟ್​ ಮಾಡಿದ್ದಾರೆ. ಮತ್ತೊಂದೆಡೆ ಮೊಬೈಲ್ ಟವರ್ ಡಂಪ್ ಕೂಡ ಸಹಾಯ ಮಾಡಿದೆ ಎಂದು ತಿಳಿದುಬಂದಿದೆ.

ಪೊಲೀಸರಿಗೆ ಸಾಕ್ಷ್ಯ ಸಿಗಬಾರದೆಂದು ಸಿಸಿಟಿವಿಗಳ ನಾಶ ಮಾಡಿ ಕೃತ್ಯ ಎಸಗಿದ್ದ ಪುಂಡರು ಏರಿಯಾದ ಸ್ಟ್ರೀಟ್ ಲೈಟ್ ಗಳನ್ನು ಸಹ ಬಿಡದೆ ಪುಡಿಗಟ್ಟಿದ್ದರು. ಆದರೆ, ತಮ್ಮ ಪುಂಡಾಟಿಕೆಯನ್ನ ಮೊಬೈಲ್​ನಲ್ಲಿ ತಾವೇ ಸೆರೆ ಹಿಡಿದು ಇದೀಗ ಲಾಕ್​ ಆಗಿದ್ದಾರೆ.

ಗೃಹ ಇಲಾಖೆ, ಪೊಲೀಸರಿಗೆ ಮತ್ತೊಂದು ತಲೆನೋವು ಶುರು ಈ ನಡುವೆ ಗಲಭೆಯ ದಳ್ಳುರಿ ಕಡಿಮೆಯಾಗಿದ್ರೂ ಅದರ ಕಿಚ್ಚು ಬೂದಿ ಮುಚ್ಚಿದ ಕೆಂಡದಂತೆ ಪ್ರಚಲಿತವಾಗಿದೆ. ಇದರಿಂದ ಗೃಹ ಇಲಾಖೆ ಹಾಗೂ ಪೊಲೀಸರಿಗೆ ಮತ್ತೊಂದು ತಲೆನೋವು ಎದುರಾಗಿದೆ.

ಗಲಭೆ ಬಳಿಕವೂ ಆರೋಪಿ ನವೀನನ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಎಂದು ತಿಳಿದುಬಂದಿದೆ. ನವೀನ್​ನ ಪೋಸ್ಟ್ ಆಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಸಮರ ಪ್ರಾರಂಭವಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಪೋಸ್ಟ್​ಗಳು ಈಗಲೂ ಹರಿದಾಡ್ತಿವೆ. ಈ ಕಾರಣಕ್ಕೆ ಗೃಹ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಲು ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.