ಬೆಂಗಳೂರು: ಡಿಜೆ ಹಳ್ಳಿ ಹಾಗು ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ 250ಕ್ಕೆ ಹೆಚ್ಚು ಜನರನ್ನ ಪೊಲೀಸರು ಬಂಧಿಸಿದ್ದಾರೆ.
ಇದರಲ್ಲಿ, ಪ್ರಮುಖವಾಗಿ 46ಜನರನ್ನ ಲಿಸ್ಟ್ ಮಾಡಲಾಗಿದ್ದು ಆ ಪೈಕಿ 6 ಜನರನ್ನ ಮಾತ್ರ ಬಂಧಿಸಲಾಗಿದೆ. ಇನ್ನೂ 40ಕ್ಕೂ ಹೆಚ್ಚು ಜನರನ್ನ ಬಂಧಿಸ ಬೇಕಾಗಿದೆ. ಇದೀಗ, ಪ್ರಮುಖರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದಕ್ಕಾಗಿ, ವಿಡಿಯೋಗಳ ಪರಿಶೀಲನೆ ಮಾಡಿ, ಹುಡುಕಾಟ ನಡೆಸುತ್ತಿದ್ದಾರೆ.
ಆದರೆ, 40 ರಲ್ಲಿ ಪ್ರಮುಖ ಮಾಸ್ಟರ್ ಮೈಂಡ್‌ಗಳು ಆಗಲೇ ಬೆಂಗಳೂರು ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಆ ಕಿಡಿಗೇಡಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಕೋಲಾರ, ರಾಮನಗರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರದಲ್ಲೆಲ್ಲಾ ಹುಡುಕಾಟ ಪೊಲೀಸರು ಹುಡುಕಾಡ ನಡೆಸುತ್ತಿದ್ದಾರೆ.
ಈ ನಡುವೆ, ಗಲಭೆಯಲ್ಲಿ ಗಾಯಗೊಂಡ ಬಹುತೇಕ ಮಂದಿ ಕಣ್ಮರೆಯಾಗಿದ್ದಾರೆ. ಸುಮಾರು 15 ಜನ ಗಾಯಾಳುಗಳು ಘಟನೆ ಬಳಿಕ ಎಸ್ಕೇಪ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರ ಲೆಕ್ಕಾಚಾರದ ಪ್ರಕಾರ ಇನ್ನು ಹೆಚ್ಚು ಮಂದಿಗೆ ಗುಂಡೇಟು ಬಿದ್ದಿದೆ. ಪೊಲೀಸರು ತಮ್ಮ ಆತ್ಮರಕ್ಷಣೆಗೆ ಗುಂಡೇಟು ಹೊಡೆದಿದ್ದು ಇನ್ನಷ್ಡು ಮಂದಿಗೆ ತಗುಲಿರುವ ಅನುಮಾನವಿದೆ.
15 ಜನರಿಗೆ ಚಿಕಿತ್ಸೆ ಕೊಡಿಸಿ ವಶಕ್ಕೆ ಪಡೆದಿದ್ದವರಲ್ಲಿ 6 ಮಂದಿ ಅಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ಗಾಯಗೊಂಡು ಪರಾರಿಯಾದವರಿಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಮೂರು ಜಿಲ್ಲೆಗಳಲ್ಲಿರುವ ಪ್ರತಿ ಅಸ್ಪತ್ರೆಯಲ್ಲಿಯೂ ಹುಡುಕಾಟ ನಡೆಸುತ್ತಿದ್ದಾರೆ.