
ದಾವಣಗೆರೆ: IAS ಅಧಿಕಾರಿಗಳು ನೀಡಿದ ಕಿರುಕುಳದಿಂದಾಗಿ ನೌಕರಿ ಬಿಟ್ಟು, ಆಟೋ ಓಡಿಸುತ್ತಿದ್ದ ವೈದ್ಯಾಧಿಕಾರಿ ಡಾ.ರವೀಂದ್ರನಾಥ್ ಹೋರಾಟಕ್ಕೆ ಸರ್ಕಾರ ಕೊನೆಗೂ ಮಣಿದಿದೆ.
ಮೂಲತಃ ಜಿಲ್ಲೆಯ ಬಾಡ ಗ್ರಾಮದ ನಿವಾಸಿಯಾಗಿರುವ ಡಾ. ರವೀಂದ್ರನಾಥ್, ಬಳ್ಳಾರಿಯಲ್ಲಿ ಜಿಲ್ಲಾ ಲಸಿಕಾಧಿಕಾರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ IAS ಅಧಿಕಾರಿಗಳ ದುರಾಡಳಿತದಿಂದ ಬೇಸತ್ತ ಡಾ. ರವೀಂದ್ರನಾಥ್ ತಮ್ಮ ಉದ್ಯೋಗ ತ್ಯಜಿಸಿ, ‘IAS ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ’ ಎಂದು ಆಟೋವೊಂದರ ಮೇಲೆ ಬರೆಸಿಕೊಂಡು ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದರು.
ವೈದ್ಯಾಧಿಕಾರಿಯ ಈ ಹೊರಾಟದ ಬಗ್ಗೆ ಟಿವಿ9 ವರದಿ ಬಿತ್ತರಿಸಿತ್ತು. ಈಗ ವೈದ್ಯಾಧಿಕಾರಿಯ ಈ ವಿಭಿನ್ನ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಅವರನ್ನು ಕೊಪ್ಪಳ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: IAS ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ -ಜಿಲ್ಲಾ ಲಸಿಕಾಧಿಕಾರಿ ಆದ್ರು ಆಟೋ ಚಾಲಕ