ಕೆಜಿಎಫ್ ಚಾಪ್ಟರ್​-2​ ಟೀಸರ್​ ಯೂಟ್ಯೂಬ್​ನಿಂದ ಗಳಿಸಿದ್ದೆಷ್ಟು ಗೊತ್ತಾ?

ಕೆಜಿಎಫ್-2​ ಟೀಸರ್​ ಈವರೆಗೆ 16.19 ಕೋಟಿ ವೀಕ್ಷಣೆ ಕಂಡಿದೆ. ಕನ್ನಡ ಸಿನಿಮಾದ ಟೀಸರ್​ ಒಂದು ಕಡಿಮೆ ಅವಧಿಯಲ್ಲಿ ಇಷ್ಟು ವೀಕ್ಷಣೆ ಕಂಡಿರುವುದು ಇದೇ ಮೊದಲಂತೆ. ಹೀಗಾಗಿ, ಈ ಟೀಸರ್​ನಿಂದ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಗಳಿಕೆ ಬಂದಿದೆ ಎನ್ನಲಾಗುತ್ತಿದೆ.

  • TV9 Web Team
  • Published On - 21:06 PM, 26 Jan 2021
ಕೆಜಿಎಫ್ ಚಾಪ್ಟರ್​-2​ ಟೀಸರ್​ ಯೂಟ್ಯೂಬ್​ನಿಂದ ಗಳಿಸಿದ್ದೆಷ್ಟು ಗೊತ್ತಾ?
KGF ಚಾಪ್ಟರ್-2

ಕೆಜಿಎಫ್​ ಚಾಪ್ಟರ್​ 2 ಚಿತ್ರದ ಟೀಸರ್​ ಯಶ್​ ಜನ್ಮದಿನದ ಅಂಗವಾಗಿ ಜನವರಿ 7ರಂದು ರಿಲೀಸ್​ ಆಗಿತ್ತು. ಕೆಜಿಎಫ್​-2 ​ ಟೀಸರ್​​ ರಿಲೀಸ್​ ಸಾಕಷ್ಟು ದಾಖಲೆ ಸೃಷ್ಟಿಸಿದೆ. ವಿಶೇಷ ಎಂದರೆ ಈ ಟೀಸರ್​ ಒಂದೇ ಕೋಟಿ ಕೋಟಿ ರೂಪಾಯಿ ಗಳಿಕೆ ಮಾಡಿದೆಯಂತೆ.

ಯಶ್​ ಜನ್ಮದಿನದ ಅಂಗವಾಗಿ ರಿಲೀಸ್​ ಆಗಿದ್ದ ಕೆಜಿಎಫ್​-2 ಟೀಸರ್​​ ಐದೂ ಭಾಷೆಗಳಿಗೆ ಹೊಂದಿಕೆ ಆಗುವಂತಿತ್ತು. ಹೀಗಾಗಿ, ಬೇರೆ ಬೇರೆ ಟೀಸರ್​ ಬಿಡುಗಡೆ ಮಾಡದೆ, ಒಂದೇ ಟೀಸರ್​ ರಿಲೀಸ್ ಆಗಿತ್ತು. ಇನ್ನು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಎಲ್ಲಾ ಕಾರಣಕ್ಕೆ ಟೀಸರ್​ ಅತಿ ಹೆಚ್ಚು ವೀಕ್ಷಣೆ ಕಂಡಿತ್ತು.

ಕೆಜಿಎಫ್-2​ ಟೀಸರ್​ ಈವರೆಗೆ 16.19 ಕೋಟಿ ವೀಕ್ಷಣೆ ಕಂಡಿದೆ. ಕನ್ನಡ ಸಿನಿಮಾದ ಟೀಸರ್​ ಒಂದು ಕಡಿಮೆ ಅವಧಿಯಲ್ಲಿ ಇಷ್ಟು ವೀಕ್ಷಣೆ ಕಂಡಿರುವುದು ಇದೇ ಮೊದಲಂತೆ. ಹೀಗಾಗಿ, ಈ ಟೀಸರ್​ನಿಂದ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಗಳಿಕೆ ಬಂದಿದೆ ಎನ್ನಲಾಗುತ್ತಿದೆ.

ವಿಡಿಯೋ ಎಷ್ಟು ವೀಕ್ಷಣೆ ಕಂಡಿದೆ ಎಂಬಿತ್ಯಾದಿ ವಿಚಾರ ಇಟ್ಟುಕೊಂಡು ಯೂಟ್ಯೂಬ್​ ವಿಡಿಯೋಗೆ ಹಣ ನೀಡುತ್ತದೆ. ಹೊಂಬಾಳೆ ಫಿಲ್ಮ್ಸ್​ನಲ್ಲಿ ತೆರೆಕಂಡಿರುವ ಈ ಟೀಸರ್​ನಿಂದ ಬರೋಬ್ಬರಿ 2.18 ಕೋಟಿ ರೂಪಾಯಿ ದೊರೆತಿದೆ ಎನ್ನಲಾಗಿದೆ. ಇದು ಕೆಲ ಸ್ಯಾಂಡಲ್​ವುಡ್​ ಹೀರೋನ ಸಂಭಾವನೆಗಿಂತ ಹೆಚ್ಚು ಅನ್ನೋದು ವಿಶೇಷ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಳೆದ ಅಕ್ಟೋಬರ್​ ತಿಂಗಳಲ್ಲೇ ಕೆಜಿಎಫ್​ -2 ರಿಲೀಸ್​ ಆಗಬೇಕಿತ್ತು. ಆದರೆ, ಕೊರೊನಾದಿಂದಾಗಿ ಕೆಜಿಎಫ್​-2 ಕೆಲಸಗಳು ಮುಂದೂಡಲ್ಪಟ್ಟಿದ್ದವು. ಈಗ ಚಿತ್ರದ ಕೆಲಸ ಪೂರ್ಣಗೊಂಡಿದ್ದು,  ಈ ವರ್ಷವೇ ಸಿನಿಮಾ ರಿಲೀಸ್​ ಆಗಲಿದೆಯಂತೆ.

ಕೆಜಿಎಫ್2 ಟೀಸರ್ ಮತ್ತೊಂದು ದಾಖಲೆ ಮಾಡೇ ಬಿಟ್ಟಿದೆ..

ಕೆಜಿಎಫ್​ ಕಥೆ ಹೇಳಿದ ಮಾಳವಿಕಾ ಅವಿನಾಶ್.. ಪಾರ್ಟ್​ 2 ಸೆಟ್​ ಅದೆಷ್ಟು ಅದ್ಧೂರಿ!