ಕೊರೊನಾ ಲಸಿಕೆಯ ಬಗ್ಗೆ ಸುಳ್ಳು ಸುದ್ದಿ ಹರಡದಂತೆ ತಡೆಯಲು ಫೇಸ್​ಬುಕ್​ನಿಂದ ಹೊಸ ಅಸ್ತ್ರ

ಕೊರೊನಾ ಲಸಿಕೆಯ ಬಗ್ಗೆ ಜಾಲತಾಣದಲ್ಲಿ ಹರಿದಾಡುವ ತಪ್ಪು ಮಾಹಿತಿಗಳು ಅಪಾಯ ತಂದೊಡ್ಡುವ ಸಾಧ್ಯತೆಯಿದೆ ಎಂದು ಫೇಸ್​ಬುಕ್ ಅಭಿಪ್ರಾಯಪಟ್ಟಿದೆ.

ಕೊರೊನಾ ಲಸಿಕೆಯ ಬಗ್ಗೆ ಸುಳ್ಳು ಸುದ್ದಿ ಹರಡದಂತೆ ತಡೆಯಲು ಫೇಸ್​ಬುಕ್​ನಿಂದ ಹೊಸ ಅಸ್ತ್ರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 07, 2022 | 5:42 PM

ಕೊರೊನಾ ಲಸಿಕೆಯ ಬಗೆಗಿನ ಸುಳ್ಳು ಸುದ್ದಿ ತಡೆಗಟ್ಟಲು ಫೇಸ್​ಬುಕ್ ಸಂಸ್ಥೆ ಹೊಸ ಅಸ್ತ್ರ ಪ್ರಯೋಗಿಸಿದೆ. ಕೊವಿಡ್ ಲಸಿಕೆಯ ತಪ್ಪು ಮಾಹಿತಿಗಳನ್ನು ಫೇಸ್​ಬುಕ್​ನಿಂದ ತೆಗೆದುಹಾಕುವುದಾಗಿ ಹೇಳಿದೆ. ಕಳೆದ ಅಕ್ಟೋಬರ್​ನಲ್ಲಿ ಆಲ್ಫಾಬೆಟ್ ಇಂಕ್ (ಗೂಗಲ್) ಸಂಸ್ಥೆ ಯೂಟ್ಯೂಬ್ ಕುರಿತಾಗಿ ಇದೇ ನಿರ್ಧಾರವನ್ನು ತಾಳಿತ್ತು.

ಸಾರ್ವಜನಿಕ ವೇದಿಕೆಯಲ್ಲಿ ಹಲವು ಆರೋಗ್ಯ ತಜ್ಞರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಫೇಸ್​ಬುಕ್​ ನೀತಿಗಳನ್ನು ಮೀರುವ ಅಂತಹ ವಿಚಾರಗಳನ್ನು ತೆಗೆದುಹಾಕುವುದಾಗಿ ಫೇಸ್​ಬುಕ್​ ಹೇಳಿದೆ. ಕೊರೊನಾ ಲಸಿಕೆಯ ಬಗ್ಗೆ ಹರಿದಾಡುವ ತಪ್ಪು ಮಾಹಿತಿಗಳು ಅಪಾಯ ತಂದೊಡ್ಡುವ ಸಾಧ್ಯತೆಯಿದೆ ಎಂದು ಫೇಸ್​ಬುಕ್ ಅಭಿಪ್ರಾಯಪಟ್ಟಿದೆ.

ಫೈಜರ್ ಮತ್ತು ಮಾಡೆರ್ನಾ ಲಸಿಕೆ ತಯಾರಿಕಾ ಸಂಸ್ಥೆಗಳು ಅಮೆರಿಕ ಬಳಿ, ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿವೆ. ಫೈಜರ್ ಲಸಿಕೆಯ ಬಳಕೆಗೆ ಬುಧವಾರ ಅನುಮತಿ ಸೂಚಿಸಿರುವ ಬ್ರಿಟನ್, ಲಸಿಕೆ ಹಂಚಿಕೆಯಲ್ಲಿ ಮುಂಚೂಣಿಯಲ್ಲಿರುವ ಆಸಕ್ತಿ ತೋರಿದೆ.

ಈ ಸಂದರ್ಭದಲ್ಲಿ ವಿವಿಧ ಸಿದ್ಧಾಂತದ ಹಿನ್ನೆಲೆಯ ಲಸಿಕೆ ವಿರೋಧಿ ಪೋಸ್ಟ್​ಗಳು ಫೇಸ್​ಬುಕ್​ನಲ್ಲಿ ವೈರಲ್ ಆಗಿದ್ದನ್ನು ಸಂಶೋಧಕರು ಗುರುತಿಸಿದ್ದಾರೆ. ಫಸ್ಟ್ ಡ್ರಾಫ್ಟ್ ಅಧ್ಯಯನದ ಪ್ರಕಾರ, ಫೇಸ್​ಬುಕ್ ಮತ್ತು ಇನ್ಸ್ಟಾಗ್ರಾಮ್​ನಲ್ಲಿ ನಡೆದ ಶೇ. 84ರಷ್ಟು ಸಂವಹನವು ಕೊವಿಡ್ ಲಸಿಕೆ ಕುರಿತದ್ದಾಗಿದೆ.

ಲಸಿಕೆ ಸುರಕ್ಷತೆ, ಅದರ ಪರಿಣಾಮಗಳು, ಲಸಿಕೆಗೆ ಬಳಸಿರುವ ಅಂಶಗಳು, ಲಸಿಕೆಯ ಅಡ್ಡಪರಿಣಾಮಗಳು ಇತ್ಯಾದಿ ಸುಳ್ಳು ಸುದ್ದಿಗಳನ್ನು ಹೊರಹಾಕುವುದಾಗಿ ಫೇಸ್​ಬುಕ್ ತಿಳಿಸಿದೆ. ಹಾಗೆಂದು ರಾತ್ರೋರಾತ್ರಿ ಈ ಕೆಲಸ ಮಾಡಿ ಮುಗಿಸಲು ಸಾಧ್ಯವಿಲ್ಲ ಎಂದಿರುವ ಫೇಸ್​ಬುಕ್, ಯಾವತ್ತಿನಿಂದ ನಿಯಮಗಳು ಕಾರ್ಯರೂಪಕ್ಕೆ ಬರಲಿವೆ ಎಂದು ತಿಳಿಸಿಲ್ಲ.

ಕೊರೊನಾ ಲಸಿಕೆಯ ಬಗ್ಗೆ ಅಧೈರ್ಯ ಮೂಡಿಸುವ ಜಾಹೀರಾತುಗಳನ್ನೂ ನಿಷೇಧಿಸುವುದಾಗಿ ಫೇಸ್​ಬುಕ್ ಕಳೆದ ಅಕ್ಟೋಬರ್​ನಲ್ಲಿ ಹೇಳಿತ್ತು. ಅದರಂತೆ ಲಸಿಕೆ ವಿರೋಧಿ ಫೇಸ್​ಬುಕ್ ಪೇಜನ್ನು ಮತ್ತು ಕೆಲವು ಖಾಸಗಿ ಗುಂಪುಗಳನ್ನು ಫೇಸ್​ಬುಕ್​ನಿಂದ ತೆಗೆದುಹಾಕಿತ್ತು.

Published On - 6:43 pm, Fri, 4 December 20

ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ