ಹುಷಾರು! ಮೈಸೂರಿನಲ್ಲಿ ಹಾವುಗಳು ಹಾರುತಿವೆ..

ಮೈಸೂರು: ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಾಣಿಸಿಕೊಳ್ಳುವ ಹಾರುವ ಹಾವು ಮೈಸೂರಿನಲ್ಲಿ ಪ್ರತ್ಯಕ್ಷವಾಗಿ ಜನರಲ್ಲಿ‌ ಕುತೂಹಲ ಮೂಡಿಸಿದೆ. ಮೈಸೂರಿನ ರಾಮಾನುಜ ರಸ್ತೆಯ ವೆಂಕಟರಮಣ ಎಂಬುವರ ಮನೆಯ ಪಕ್ಕದಲ್ಲಿದ್ದ ಮರದ ಮೇಲಿಂದ ಹಾವು ಮನೆಯ ಮೇಲ್ಛಾವಣಿಗೆ ಬಿದ್ದಿದೆ. ನಂತರ ಮನೆ ಬಾಗಿಲಿನ ಗ್ರಿಲ್​ನಲ್ಲಿ ಕಳೆದ ರಾತ್ರಿ ಕಾಣಿಸಿಕೊಂಡಿದೆ. ಹಾವನ್ನು ನೋಡಿ ಗಾಬರಿಗೊಂಡ ಮನೆಯ ಮಾಲೀಕರು ಉರಗ ತಜ್ಞರನ್ನು ಸಂಪರ್ಕ ಮಾಡಿದ್ದಾರೆ. ಮತ್ತೆ ಮಾಲೀಕ ನೋಡುವಷ್ಟರಲ್ಲಿ ಹಾವು ನಾಪತ್ತೆಯಾಗಿದೆ. ಮನೆಯಲ್ಲಿ ಕಾಣಿಸಿಕೊಂಡಿದ್ದ ವೇಳೆ ಮನೆಯವರು ತಮ್ಮ ಮೊಬೈಲ್​ನಲ್ಲಿ ಫೋಟೋ ಸೆರೆ ಹಿಡಿದಿದ್ದು, […]

ಹುಷಾರು! ಮೈಸೂರಿನಲ್ಲಿ ಹಾವುಗಳು ಹಾರುತಿವೆ..
Follow us
ಸಾಧು ಶ್ರೀನಾಥ್​
|

Updated on:Jun 05, 2020 | 5:02 PM

ಮೈಸೂರು: ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಾಣಿಸಿಕೊಳ್ಳುವ ಹಾರುವ ಹಾವು ಮೈಸೂರಿನಲ್ಲಿ ಪ್ರತ್ಯಕ್ಷವಾಗಿ ಜನರಲ್ಲಿ‌ ಕುತೂಹಲ ಮೂಡಿಸಿದೆ. ಮೈಸೂರಿನ ರಾಮಾನುಜ ರಸ್ತೆಯ ವೆಂಕಟರಮಣ ಎಂಬುವರ ಮನೆಯ ಪಕ್ಕದಲ್ಲಿದ್ದ ಮರದ ಮೇಲಿಂದ ಹಾವು ಮನೆಯ ಮೇಲ್ಛಾವಣಿಗೆ ಬಿದ್ದಿದೆ. ನಂತರ ಮನೆ ಬಾಗಿಲಿನ ಗ್ರಿಲ್​ನಲ್ಲಿ ಕಳೆದ ರಾತ್ರಿ ಕಾಣಿಸಿಕೊಂಡಿದೆ.

ಹಾವನ್ನು ನೋಡಿ ಗಾಬರಿಗೊಂಡ ಮನೆಯ ಮಾಲೀಕರು ಉರಗ ತಜ್ಞರನ್ನು ಸಂಪರ್ಕ ಮಾಡಿದ್ದಾರೆ. ಮತ್ತೆ ಮಾಲೀಕ ನೋಡುವಷ್ಟರಲ್ಲಿ ಹಾವು ನಾಪತ್ತೆಯಾಗಿದೆ. ಮನೆಯಲ್ಲಿ ಕಾಣಿಸಿಕೊಂಡಿದ್ದ ವೇಳೆ ಮನೆಯವರು ತಮ್ಮ ಮೊಬೈಲ್​ನಲ್ಲಿ ಫೋಟೋ ಸೆರೆ ಹಿಡಿದಿದ್ದು, ಅದನ್ನು ಉರಗ ತಜ್ಞ ಸ್ನೇಕ್ ಶಾಮ್ ಅವರಿಗೆ ತೋರಿಸಿದಾಗ ಇದು ಹಾರುವ ಹಾವು ಎಂದು ತಿಳಿದು ಬಂದಿದೆ.

ಹಾರುವ ಹಾವಿನ ವಿಶೇಷ ಭಾರತದಲ್ಲಿರುವ 270ಕ್ಕೂ ಹೆಚ್ಚು ವಿಧದ ಹಾವುಗಳಲ್ಲಿ ಈ ಹಾರುವ ಹಾವು ಕೂಡ ಒಂದಾಗಿದೆ. ಈ ಹಾವು ಸಾಮಾನ್ಯವಾಗಿ ಎತ್ತರದ ಮರದಲ್ಲಿ ವಾಸಮಾಡುತ್ತದೆ. ಈ ಹಾವುಗಳು ನೆಲದಲ್ಲಿ ಸಂಚಾರ ಮಾಡುವುದಕ್ಕಿಂತ ಹೆಚ್ಚಾಗಿ ಮರದಿಂದ ಮರಕ್ಕೆ ಹಾರಿ ಆಹಾರ ಹುಡುಕಿಕೊಳ್ಳುತ್ತವೆ. ಹೆಚ್ಚಾಗಿ ಹಸಿರು ಹಾಗೂ ಎತ್ತರದ ಮರಗಳಿರುವ ಮಲೆನಾಡು ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತವೆ.

ಅದರಲ್ಲಿ ಸಣ್ಣ ಕೀಟಗಳು, ಪಕ್ಷಿ ಮೊಟ್ಟೆ, ಹಲ್ಲಿಗಳು, ಓತಿಕ್ಯಾತಗಳನ್ನು ತಿಂದು ಜೀವಿಸುತ್ತವೆ. ನೋಡಲು ಸುಂದರವಾಗಿರುವ ಈ ಹಾವು, ಕೆಂಪು, ಕಪ್ಪು, ಕಂದು ಬಣ್ಣದಲ್ಲಿರುತ್ತವೆ. ಈ ಹಾವುಗಳಿಗೆ ರೆಕ್ಕೆ ಇಲ್ಲದಿದ್ದರು ಎತ್ತರ ಮರದಿಂದ ಸಣ್ಣ ಮರದ ಕಡೆ ಗಾಳಿಯಲ್ಲಿ ತೇಲುತ್ತವೆ. ಭಾರತದಲ್ಲಿ ಮರದ ಹಾವು ಸಾಕಷ್ಟಿದ್ದರೂ, ಹಾರುವ ಹಾವು ಇದೊಂದೆ ಎಂಬುದು ವಿಶೇಷ.

ಮೈಸೂರಿಗೆ ಬಂದಿದ್ದು ಹೇಗೆ? ಮಲೆನಾಡು ಪ್ರದೇಶದ ದಟ್ಟ ಕಾಡುಗಳಲ್ಲಿ ಕಾಣಿಸುವ ಈ ಹಾವು ಮೈಸೂರಿನಲ್ಲಿ ಹೇಗೆ ಕಾಣಿಸಿಕೊಂಡಿದೆ ಎಂಬುದು ಸಹಜವಾಗಿಯೇ ಮೂಡವ ಪ್ರಶ್ನೆ. ಈ ಹಾವು ಮರದಿಂದ ಹಾರುವ ಹಾವುಗಳಾಗಿದ್ದು ಮಲೆನಾಡು ಪ್ರದೇಶದ ಕಾಡುಗಳಲ್ಲಿ ಹಾದು ಬರುವ ಲಾರಿಯಂತ ವಾಹನಗಳ ಮೇಲೆ ಬಿದ್ದು ಇಲ್ಲಿಗೆ ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮೈಸೂರಿನಲ್ಲಿ ಕಳೆದ ಮೂರು ತಿಂಗಳ ಹಿಂದೆ ನಗರದ ಕೈಗಾರಿಕ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಅದಾದ ನಂತರ ಅಗ್ರಹಾರದಲ್ಲಿ ಕಾಣಿಸಿದೆ. ಇದು ವಿಷಕಾರಿ ಹಾವಲ್ಲ, ಮನುಷ್ಯನಿಗೆ ಕಚ್ಚಿದರೆ ಅಪಾಯವಿಲ್ಲ. ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಈ ಹಾವುಗಳು ಕಂಡು ಬರುತ್ತವೆ.

Published On - 4:52 pm, Fri, 5 June 20

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ