Lockdown ನಿಂದ Down ಆಗಿದ್ದ ತರಕಾರಿ ಬೆಲೆಗಳು ಈಗ ಚಿನ್ನದ ರಥವೇರಿ ಗಗನದತ್ತ ಹಾರುತಿವೆ!
ಕೋಲಾರ: ಕೊರೊನಾ ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆ ಇಲ್ಲದೆ ಟೊಮ್ಯಾಟೊ ಸೇರಿದಂತೆ ಇನ್ನಿತರ ತರಕಾರಿಗಳಿಗೆ ಬೆಲೆ ಇಲ್ಲದೆ ಬೀದಿಗೆ ಸುರಿಯಲಾಗುತಿತ್ತು. ಆದ್ರೆ ಲಾಕ್‌ಡೌನ್ ಸಡಿಲಿಕೆ ಅದೃಷ್ಟವನ್ನೇ ತಂದಿದ್ದು, ತರಕಾರಿ ಬೆಳೆದಿರುವ ರೈತರಿಗೆ ಚಿನ್ನದ ಬೆಳೆಯಾಗಿ, ಕಂಗಾಲಾಗಿದ್ದ ರೈತ ಚೇತರಿಕೆಯತ್ತ ಹೆಜ್ಜೆ ಹಾಕುತ್ತಿದ್ದಾನೆ. ಬಯಲು ಸೀಮೆ ಕೋಲಾರ ಜಿಲ್ಲೆಯಲ್ಲಿ ಬಹುತೇಕ ರೈತರು ಟೊಮ್ಯಾಟೊ ಸೇರಿದಂತೆ ತರಕಾರಿಗಳನ್ನ ಬೆಳೆಯುತ್ತಾರೆ. ಆದ್ರೆ ಅವರ ಶ್ರಮಕ್ಕೆ ತಕ್ಕಂತೆ ಬೆಲೆ ಸಿಗೋದು ಅಪರೂಪ. ಬೆಲೆ ಸಿಗದೆ ಬೆಳೆದ ಬೆಳೆಯನ್ನು ಬೀದಿಗೆ ಸುರಿದು ಕಣ್ಣೀರಾಕೋದು ಕಾಮನ್ ಆಗಿ ಹೋಗಿತ್ತು. […]
ಕೋಲಾರ: ಕೊರೊನಾ ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆ ಇಲ್ಲದೆ ಟೊಮ್ಯಾಟೊ ಸೇರಿದಂತೆ ಇನ್ನಿತರ ತರಕಾರಿಗಳಿಗೆ ಬೆಲೆ ಇಲ್ಲದೆ ಬೀದಿಗೆ ಸುರಿಯಲಾಗುತಿತ್ತು. ಆದ್ರೆ ಲಾಕ್‌ಡೌನ್ ಸಡಿಲಿಕೆ ಅದೃಷ್ಟವನ್ನೇ ತಂದಿದ್ದು, ತರಕಾರಿ ಬೆಳೆದಿರುವ ರೈತರಿಗೆ ಚಿನ್ನದ ಬೆಳೆಯಾಗಿ, ಕಂಗಾಲಾಗಿದ್ದ ರೈತ ಚೇತರಿಕೆಯತ್ತ ಹೆಜ್ಜೆ ಹಾಕುತ್ತಿದ್ದಾನೆ.
ಬಯಲು ಸೀಮೆ ಕೋಲಾರ ಜಿಲ್ಲೆಯಲ್ಲಿ ಬಹುತೇಕ ರೈತರು ಟೊಮ್ಯಾಟೊ ಸೇರಿದಂತೆ ತರಕಾರಿಗಳನ್ನ ಬೆಳೆಯುತ್ತಾರೆ. ಆದ್ರೆ ಅವರ ಶ್ರಮಕ್ಕೆ ತಕ್ಕಂತೆ ಬೆಲೆ ಸಿಗೋದು ಅಪರೂಪ. ಬೆಲೆ ಸಿಗದೆ ಬೆಳೆದ ಬೆಳೆಯನ್ನು ಬೀದಿಗೆ ಸುರಿದು ಕಣ್ಣೀರಾಕೋದು ಕಾಮನ್ ಆಗಿ ಹೋಗಿತ್ತು. ಅದಕ್ಕೆ ತಕ್ಕಂತೆ ಕಳೆದ ಎರಡುವರೆ ತಿಂಗಳಿನಿಂದ ಮಹಾಮಾರಿ ಕೊರೊನಾ ರೈತರ ಬೆಳೆಗಳನ್ನ ಬಲಿ ತೆಗೆದುಕೊಂಡಿತ್ತು. ಈ ಮೂಲಕ ಟೊಮ್ಯಾಟೊ ಬೆಳೆದ ರೈತರನ್ನ ಸಂಕಷ್ಟಕ್ಕೆ ದೂಡುವ ಮೂಲಕ, ಬೆಳೆಯನ್ನ ರಸ್ತೆಗಳಿಗೆ ಸುರಿಯುವುದು ಅಥವಾ ತೋಟದಲ್ಲಿಯೆ ಕೊಳೆಯವಂತಾಗಿತ್ತು.
ಹೀಗಿರುವಾಗ ಕೊರೊನಾ ಲಾಕ್‌ಡೌನ್ ಸಡಿಲಿಕೆಯ ನಂತರ ಕಳೆದೆರಡು ದಿನಗಳಿಂದ ಟೊಮ್ಯಾಟೊಗೆ ಚಿನ್ನದ ಬೆಲೆ ಸಿಕ್ಕಿದೆ. ಈ ಮೂಲಕ ಟೊಮ್ಯಾಟೊ ಬೆಲೆ ದಿಢೀರ್ ಏರಿಕೆ ಕಂಡಿದ್ದು, ಕೊರೊನಾ ಸಂಕಷ್ಟ ಕಾಲದಲ್ಲಿ 15 ಕೆಜಿ ಒಂದು ಬಾಕ್ಸ್ ಟೊಮ್ಯಾಟೊ 250 ರಿಂದ 300 ರೂ.ಗೆ ಏರಿಕೆ ಕಂಡಿದೆ. ಕೊರೊನಾ ಲಾಕ್‌ಡೌನ್‌ನಿಂದ ಸರಿಯಾದ ಬೆಲೆ ಸಿಗದೆ, ರೈತರು ತಾನು ಬೆಳೆದ ಬೆಳೆಗಳನ್ನ ತನ್ನ ಕೈಯಾರೆ ನಾಶಮಾಡಿದ್ರು.
ಕೋಲಾರದ ಹಣ್ಣು, ತರಕಾರಿಗಳಿಗೂ ಎಲ್ಲಿಲ್ಲದ ಬೇಡಿಕೆ ಬಂದಿದೆ. ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಟೊಮ್ಯಾಟೊಗೆ ಬೇಡಿಕೆ ಹೆಚ್ಚಾಗಿರುವ ಪರಿಣಾಮ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಬಂದಿದೆ. ಮಹಾರಾಷ್ಟ್ರ, ನಾಸಿಕ್ ಮತ್ತಿತರ ಕಡೆ ಚಂಡಮಾರುತದಿಂದ ಬೆಳೆ ನಾಶವಾಗಿರುವ ಹಿನ್ನಲೆಯಲ್ಲಿ ಇಲ್ಲಿನ ಟೊಮ್ಯಾಟೊಗೆ ಬೇಡಿಕೆ ಹೆಚ್ಚಾಗಿದೆ.
ತರಕಾರಿ ಬೆಲೆಗಳು ಇಂತಿವೆ ಕ್ಯಾಪ್ಸಿಕಂ 35 ರೂ, ಕ್ಯಾರೆಟ್ 30 ರೂ, ಬೀಟ್ರೋಟ್ 20 ರೂ, ಎಲೆಕೋಸು 8 ರೂ, ಹೂಕೋಸು ಒಂದಕ್ಕೆ 18 ರೂ, ಕಲರ್ ಕ್ಯಾಪ್ಸಿಕಂ 25 ರೂ, ಟೊಮೆಟೊ 15 ರೂ, ಬಜ್ಜಿ ಮೆಣಸಿನಕಾಯಿ 35 ರೂ ಹೀಗೆ ಬೆಲೆಗಳು ಏರಿಕೆಯಾಗಿದೆ. ಇದೇ ತರಕಾರಿಗಳು ಭಾಗಶಃ ಲಾಕ್‌ಡೌನ್ ವೇಳೆ ಕೆಜಿಗೆ 10 ರೂಪಾಯಿಯನ್ನು ಮೀರಿರಲಿಲ್ಲ. ಇದೀಗ ಎಂದಿನಂತೆ ತರಕಾರಿಗಳ ಬೆಲೆಯು ಹೆಚ್ಚಾಗಿ ರೈತರಿಗೆ ಎಂದಿನಂತೆ ಲಾಭ ತಂದುಕೊಡುತ್ತಿದೆ.
ಒಟ್ಟಾರೆ ಕೊರೊನಾ ಸುಳಿಯಲ್ಲಿ ಸಿಲುಕಿದ್ದ ರೈತರಿಗೆ ಅಪರೂಪಕ್ಕೊಮ್ಮೆ ತರಕಾರಿಗಳಿಗೆ ದುಬಾರಿ ಬೆಲೆ ಬಂದಿದೆ. ಇದರಿಂದ ಪದೇ ಪದೇ ಕಂಗಾಲಾಗುತ್ತಿದ್ದ, ರೈತರ ಮುಖದಲ್ಲಿ ಸ್ವಲ್ಪಮಟ್ಟಿಗೆ ಮಂದಹಾಸ ಮೂಡುವಂತಾಗಿದೆ. ಆದ್ರೆ ಇದು ಕೂಡಾ ಅದೃಷ್ಟ ಇದ್ದವರಿಗೆ ಅನ್ನೋದೇ ಬೇಸರ ಸಂಗತಿ.
Published On - 5:25 pm, Fri, 5 June 20