ಬಳ್ಳಾರಿಗಾದ ಗತಿಯೇ ಬೀದರ್ ಜಿಲ್ಲೆಗೂ! ಎಲ್ಲೆಲ್ಲೂ ಕೆಂಪು ಕಲ್ಲು ಗಣಿಗಾರಿಕೆ, ಇಲಾಖೆಗೆ ಗಾಢ ನಿದ್ದೆ
ಬೀದರ್ ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಅಕ್ರಮ ಇಟ್ಟಂಗಿ ಕೊರೆಯುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಕಳೆದೆರಡು ವರ್ಷದಿಂದಲೂ ಇಲ್ಲಿ ಕಾನೂನನ್ನ ಗಾಳಿಗೆ ತೂರಿ ಇಲ್ಲಿ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಗಾಢ ನಿದ್ರೆಯಲ್ಲಿದೆ. ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮಳಚಾಪುರ ಹಾಗೂ ಬೀದರ್ ತಾಲೂಕಿನ ಮನ್ನಳ್ಳಿ, ಸಂಗೋಳ್ಳಗಿ ತಾಂಡಾ ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಕೆಂಪು ಕಲ್ಲು ಕೊರೆಯುವ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಚಿಕ್ಕ ಮಕ್ಕಳೇ ಇಲ್ಲಿ ದೊಡ್ಡ ದೊಡ್ಡ ಮಶೀನ್ ಗಳನ್ನ […]
ಬೀದರ್ ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಅಕ್ರಮ ಇಟ್ಟಂಗಿ ಕೊರೆಯುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಕಳೆದೆರಡು ವರ್ಷದಿಂದಲೂ ಇಲ್ಲಿ ಕಾನೂನನ್ನ ಗಾಳಿಗೆ ತೂರಿ ಇಲ್ಲಿ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಗಾಢ ನಿದ್ರೆಯಲ್ಲಿದೆ.
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮಳಚಾಪುರ ಹಾಗೂ ಬೀದರ್ ತಾಲೂಕಿನ ಮನ್ನಳ್ಳಿ, ಸಂಗೋಳ್ಳಗಿ ತಾಂಡಾ ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಕೆಂಪು ಕಲ್ಲು ಕೊರೆಯುವ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಚಿಕ್ಕ ಮಕ್ಕಳೇ ಇಲ್ಲಿ ದೊಡ್ಡ ದೊಡ್ಡ ಮಶೀನ್ ಗಳನ್ನ ಬಳಸಿಕೊಂಡು ಭೂಮಿಯ ಒಡಲಿನಿಂದ ಕಲ್ಲನ್ನ ಕೊರೆದು ಹೆಕ್ಕಿ ತೆಗೆಯುತ್ತಿದ್ದಾರೆ. ಹಾಡಹಗಲಿನಲ್ಲಿಯೇ ಈ ಕೆಲಸ ನಡೆಯುತ್ತಿದ್ದರೂ ಪೊಲೀಸರು, ಗಣಿ ಮತ್ತು ಭೂ ವಿಜ್ಜಾನ ಇಲಾಖೆಯ ಅಧಿಕಾರಿಗಳು ವಿಚಾರಗೊತ್ತಿದ್ದರೂ ಕಂಡು ಕಾಣದವರಂತೆ ಕುಳಿತು ಬಿಟ್ಟಿದ್ದಾರೆ.
ಸರಕಾರದ ನೀತಿ ನಿಯಮಗಳನ್ನ ಗಾಳಿಗೆ ತೂರಿ ಅಕ್ರಮವಾಗಿ ಕಲ್ಲು ಕೊರೆಯುವ ದಂಧೆಯನ್ನ ಯಾರದೂ ಅಂಜಿಕೆ ಅಳುಕ್ಕಿಲ್ಲದೇ ನಡೆಸಲಾಗುತ್ತಿದೆ. ಅದೂ ಕೂಡ ರಸ್ತೆ, ಗ್ರಾಮಗಳು ಅಕ್ಕಪಕ್ಕದಲ್ಲಿ ಫಲವತ್ತಾದ ಜಮೀನಿನಲ್ಲಿ ಅಕ್ರಮ ದಂಧೆ ನಡೆಯುತ್ತಿದ್ದೂ ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾತ್ರ ಸುಮ್ಮನೆ ಕುಳಿತಿದೆ ಅನ್ನೊ ಆರೋಪವನ್ನ ಬೀದರ್ ಜನರು ಮಾಡ್ತಿದ್ದಾರೆ.
ಇದನ್ನ ತಡೆಯಬೇಕಾದ ಪೊಲೀಸ್ ಇಲಾಖೆಯಾಗಲಿ, ಗಣಿ ಮತ್ತು ಭೂ ವಿಜ್ಜಾನ ಇಲಾಖೆಯಾಗಲಿ ಪರಿಸರವಾದಿಗಳು ಕೂಡಾ ಕಂಡು ಕಾಣದಂತೆ ಕುಳಿತುಬಿಟ್ಟಿದ್ದಾರೆ. ಇಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಸುಂದರ ಪರಿಸರ ಹಾಳಾಗುತ್ತಿದ್ದು ಇದರ ಬಗ್ಗೆ ಮಾತ್ರ ಯಾರೊಬ್ಬರೂ ತುಟಿ ಪಿಟಕ್ ಅನ್ನುತ್ತಿಲ್ಲ. ದೊಡ್ಡ ದೊಡ್ಡ ಗಾತ್ರದ ಮಶೀನ್ ಗಳನ್ನ ಬಳಸಿ ಕಲ್ಲು ಕೊರೆಯುವುದರಿಂದ ರೈತರು ಬೆಳೆದ ಬೆಳೆಗಳ ಮೇಲೆ ಧೂಳು ಬೀಳುತ್ತಿದೆ.
ಸರಿಯಾದ ಬೆಳೆ ಬೆಳೆಯಲಾಗದೆ ರೈತರು ಕೂಡಾ ಕಂಗಾಲಾಗಿದ್ದಾರೆ. ಈ ವಿಚಾರವನ್ನ ಜನಪ್ರತಿನಿಧಿಗಳು ಅಧಿಕಾರಿಗಳ ಗಮನಕ್ಕೆ ತಂದರು ಕೂಡಾ ಅವರು ರೈತರ ಸಮಸ್ಯೆಗೆ ಸೊಪ್ಪು ಹಾಕದಿರುವುದರಿಂದ ರೈತರನ್ನ ಅಸಹಾಯಕರನ್ನಾಗಿ ಮಾಡುತ್ತಿದೆ. ಇನ್ನು ಇಂತಹ ದಂಧೆ ಮಾಡುವ ಕಂಪನಿಗಳು ಪರಿಸರ ಉಳುವಿಗಾಗಿ ಗಿಡಗಳನ್ನ ನಡೆಬೇಕೆಂದು ಸಹ ಕಾನೂನಿನಲ್ಲಿದೆ. ಆದ್ರೆ ಸರಕಾರ ನಿಯಮಗಳನ್ನ ರಾಜಕಾರಣಿಗಳೇ ಉಲ್ಲಂಘಿಸಿ ಈ ದಂಧೆ ಮಾಡುತ್ತಿದ್ದಾರೆಂದು ಜನರ ಆರೋಪಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ರಾಜಾರೋಷವಾಗಿ ಅಕ್ರಮ ಗಣಿಕಾರಿಕೆ ನಡೆಯುತ್ತಿದ್ದರೂ ಅಕ್ರಮ ಎಸಗುವವರಿಗೆ ದಂಡ ಕಟ್ಟಿ ಮತ್ತೆ ಗಣಿಗಳು ಆರಂಭವಾಗುವಂತೆ ಗಣಿ ಮತ್ತು ಭೂ ವಿಜ್ಜಾನ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆಯೇ ಹೊರತು ಅಕ್ರಮ ಗಣಿಗಳನ್ನ ಬಂದ್ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆಂದು ಇಲ್ಲಿನ ಜನರು ಅಧಿಕಾರಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸರಕಾರ ಈಗಲೇ ಎಚ್ಚೆತ್ತು ಕ್ರಮಕೈಗೊಳ್ಳದಿದ್ದರೆ ಬಳ್ಳಾರಿ ಜಿಲ್ಲೆಗಾದ ಪರಿಸ್ಥಿತಿ ಬೀದರ್ ಜಿಲ್ಲೆಗೆ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಕೂಡಲೇ ಗಣಿ ಮತ್ತು ಭೂ ವಿಜ್ಜಾನ ಇಲಾಖೆಯ ಅಧಿಕಾರಗಳು ಈಗಾಗಲೇ ಅಕ್ರಮ ಗಣಿಗಾರಿಕೆ ಕ್ವಾರಿಗಳನ್ನ ಗುರುತಿಸಿ ಅವುಗಳನ್ನ ಬಂದ್ ಮಾಡಿ, ಪರಿಸರ ನಾಶವಾಗುವುದನ್ನ ತಡೆಗಟ್ಟಬೇಕಾಗಿದೆ.
Published On - 4:56 pm, Fri, 5 June 20