ಎರಡು ದಿನ ಕರೆಂಟ್ ಕಟ್ ಮಾಡಿದ ಕಪ್ಪೆ!
ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಕರೆಂಟ್ ಹೋಗೋದು ಸಾಮಾನ್ಯ. ಹಲವು ಬಾರಿ ವಿದ್ಯುತ್ ದುರಸ್ತಿಯಿಂದ ಗಂಟೆಗಟ್ಟಲೆ ಗ್ರಾಮಗಳು ಕಾರ್ಗತ್ತಲಿನಲ್ಲಿ ಮುಳುಗುವುದು ಕೊಡಗು ಜಿಲ್ಲೆಯಲ್ಲಿ ಸಹಜ. ಜಿಲ್ಲೆಯ ಜನರೂ ಕೂಡ ಕತ್ತಲ ನಡುವೆ ಬದುಕು ಸಾಗಿಸಲು ಕಲಿತಿದ್ದಾರೆ. ಚೆಸ್ಕಾಂ ಸಿಬ್ಬಂದಿಗಳು ಕೂಡ ಹಗಲಿರುಳು ಶ್ರಮಿಸಿ ಸೇವೆ ನೀಡುತ್ತಿರುತ್ತಾರೆ. ಇದೆರಲ್ಲೇ ಅಂಥಾ ವಿಶೇಷ ಅಂತೇನೂ ಇಲ್ಲ. ಆದರೆ ಬಲು ಅಪರೂಪದ ಘಟನೆಯೊಂದು ಜಿಲ್ಲೆಯಲ್ಲಿ ಮೊನ್ನೆ ಸಂಭವಿಸಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಸಮೀಪದ ಬಲ್ಯಮಂಡೂರು ಗ್ರಾಮದ ಸುತ್ತಮುತ್ತ ಕಳೆದೆರಡು […]
ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಕರೆಂಟ್ ಹೋಗೋದು ಸಾಮಾನ್ಯ. ಹಲವು ಬಾರಿ ವಿದ್ಯುತ್ ದುರಸ್ತಿಯಿಂದ ಗಂಟೆಗಟ್ಟಲೆ ಗ್ರಾಮಗಳು ಕಾರ್ಗತ್ತಲಿನಲ್ಲಿ ಮುಳುಗುವುದು ಕೊಡಗು ಜಿಲ್ಲೆಯಲ್ಲಿ ಸಹಜ. ಜಿಲ್ಲೆಯ ಜನರೂ ಕೂಡ ಕತ್ತಲ ನಡುವೆ ಬದುಕು ಸಾಗಿಸಲು ಕಲಿತಿದ್ದಾರೆ. ಚೆಸ್ಕಾಂ ಸಿಬ್ಬಂದಿಗಳು ಕೂಡ ಹಗಲಿರುಳು ಶ್ರಮಿಸಿ ಸೇವೆ ನೀಡುತ್ತಿರುತ್ತಾರೆ. ಇದೆರಲ್ಲೇ ಅಂಥಾ ವಿಶೇಷ ಅಂತೇನೂ ಇಲ್ಲ.
ಆದರೆ ಬಲು ಅಪರೂಪದ ಘಟನೆಯೊಂದು ಜಿಲ್ಲೆಯಲ್ಲಿ ಮೊನ್ನೆ ಸಂಭವಿಸಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಸಮೀಪದ ಬಲ್ಯಮಂಡೂರು ಗ್ರಾಮದ ಸುತ್ತಮುತ್ತ ಕಳೆದೆರಡು ದಿನಗಳಿಂದ ವಿದ್ಯುತ್ ಪೂರೈಕೆ ಇಲ್ಲದೆ ಜನರು ಪರದಾಡುತ್ತಿದ್ದರು. ಅಸಲಿಗೆ ಗಾಳಿ-ಮಳೆಯೂ ಇಲ್ಲ. ಇಂಥಾ ಸಂದರ್ಭದಲ್ಲಿ ಪವರ್ ಕಟ್ ಆಗಲು ಕಾರಣವೇನು ಎಂದು ಜನ ಯೋಚಿಸತೊಡಗಿದರು. ಸ್ಥಳೀಯ ಚೆಸ್ಕಾಂ ಸಿಬ್ಬಂದಿ ಸಹ ಹರಸಾಹಸ ಪಡುವಂತಾಗಿತ್ತು.
ಎಷ್ಟೇ ತಲೆ ಕೆಡಿಸಿಕೊಂಡರು ಲೈನ್ ಮೆನ್ ಗಳಿಗೆ ಸಮಸ್ಯೆಯ ಮೂಲ ಹುಡುಕಲು ಸಾಧ್ಯವಾಗಲಿಲ್ಲ. ಎರಡು ದಿನದ ಬಳಿಕ ನಿರಂತರ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ವಿದ್ಯುತ್ ಸಮಸ್ಯೆಗೆ ಕೊನೆಗೂ ಕಾರಣ ತಿಳಿಯಲು ಯಶಸ್ವಿಯಾದರು. ಅಷ್ಟಕ್ಕೂ ಇಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದಕ್ಕೆ ಕಾರಣವಾಗಿದ್ದು ಅದೊಂದು ಕಪ್ಪೆ!
ಎಸ್.. ಪೊನ್ನಂಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎರಡು ದಿನ ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಗಿದ್ದು ವಿದ್ಯುತ್ ತಂತಿಯಲ್ಲಿ ಸತ್ತಿದ್ದ ಕಪ್ಪೆ ಎಂದರೆ ನೀವು ನಂಬಲೇಬೇಕು. ಕರೆಂಟ್ ಕಂಬವೇರಿ 11 ಕೆ.ವಿ ತಂತಿಗೆ ತಾಗಿ ಸತ್ತ ಕಪ್ಪೆಯಿಂದ ಆ ಲೈನೇ ಟ್ರಿಪ್ಪ್ ಆಗಿತ್ತು. ಸತ್ತು ವಿದ್ಯುತ್ ತಂತಿಗೆ ಅಂಟಿಕೊಂಡ ಕಪ್ಪೆಯನ್ನು ತೆಗೆಯುವ ತನಕ ಎಷ್ಟೇ ಬಾರಿ ಚಾರ್ಜ್ ಮಾಡಿದರೂ ಟ್ರಿಪ್ಪ್ ಆಗ್ತಿತ್ತೇ ಹೊರತು ಕರೆಂಟ್, ಆ ಮಾರ್ಗಕ್ಕೆ ಚಾರ್ಜ್ ಆಗುತ್ತಿರಲಿಲ್ಲ.
ಲೈನ್ ಮ್ಯಾನ್ ಆ ಚಿಕ್ಕ ಕಪ್ಪೆಯನ್ನು ಹುಡುಕಿ ತೆಗೆದು ಚಾರ್ಜ್ ಮಾಡಿದ ಬಳಿಕವಷ್ಟೇ ವಿದ್ಯುತ್ ಸಂಪರ್ಕ ಸಫಲವಾಯಿತು. ಕೊನೆಗೂ ಅಲ್ಲಿನ ಲೈನ್ ಮೆನ್ ಹಾಗೂ ಸ್ಥಳೀಯರು ಕಪ್ಪೆಯಿಂದ ಪರದಾಡಿದ ಬಳಿಕ ನಿಟ್ಟುಸಿರು ಬಿಡುವಂತಾಯಿತು. ಒಟ್ನಲ್ಲಿ, ಒಂದು ಸಣ್ಣ ಕಪ್ಪೆಯಿಂದ ಎರಡು ದಿನ ಹಲವು ಗ್ರಾಮಗಳ ಜನ್ರು ಕತ್ತಲಲ್ಲಿ ಕಾಲ ಕಳೆದದ್ದು ಮಾತ್ರ ವಿಪರ್ಯಾಸ! -ಸುರೇಶ್ ಬಿ