ಭೀಮಾನದಿಯಲ್ಲಿ ಈಜಲು ಹೋಗಿ ನೀರುಪಾಲಾಗಿದ್ದ ನಾಲ್ವರ ಶವ ಪತ್ತೆ

  • Publish Date - 8:59 am, Mon, 7 September 20
ಭೀಮಾನದಿಯಲ್ಲಿ ಈಜಲು ಹೋಗಿ ನೀರುಪಾಲಾಗಿದ್ದ ನಾಲ್ವರ ಶವ ಪತ್ತೆ

ಯಾದಗಿರಿ: ಭೀಮಾನದಿಯಲ್ಲಿ ಈಜಲು ಹೋಗಿ ನೀರುಪಾಲಾಗಿದ್ದ ನಾಲ್ವರ ಶವಗಳು ಪತ್ತೆಯಾಗಿವೆ. ನಿನ್ನೆ ವಡಗೇರ ತಾಲೂಕಿನ ಗುರಸಣಗಿ ಬಳಿಯ ಭೀಮಾನದಿಯಲ್ಲಿ ಈಜಲು ಹೋಗಿ ನಾಲ್ವರು ಯುವಕರು ನೀರುಪಾಲಾಗಿದ್ದರು. ಇಂದು ಅವರ ಮೃತ ದೇಹಗಳು ಸಿಕ್ಕಿವೆ. ಯಾದಗಿರಿ ನಗರದ ಅಜೀಜ್ ಕಾಲೋನಿಯ ನಿವಾಸಿಗಳಾದ ಅಯಾನ್, ಅಮಾನ್, ರೆಹಾನ್, ಇರ್ಫಾನ್ ಶವಗಳು ಸಿಕ್ಕಿವೆ.

ಇಂದು ಬೆಳಿಗ್ಗೆಯಿಂದಲೇ ಅಗ್ನಿ ಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿ ನದಿ ನೀರಿನಲ್ಲಿ ತೇಲಿ ಬಂದ ನಾಲ್ಕು ಮಂದಿಯ ಮೃತ ದೇಹ ಪತ್ತೆ ಮಾಡಿದ್ದಾರೆ. ಶವಗಳನ್ನು ನೋಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಭೀಮಾ ನದಿಯಲ್ಲಿ ಈಜಲು ಹೋದ ನಾಲ್ಕು ಯುವಕರು ನೀರುಪಾಲು

Click on your DTH Provider to Add TV9 Kannada