FY20 ಮೂರನೇ ತ್ರೈಮಾಸಿಕದಲ್ಲಿ GDP ಮತ್ತೆ ಹಳಿಗೆ: DBS ವರದಿ

ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್​ನಿಂದ ಡಿಸೆಂಬರ್ ತ್ರೈಮಾಸಿಕದ ಜಿಡಿಪಿಯ ಅಂಕಿ-ಅಂಶವನ್ನು ಕೇಂದ್ರ ಸರ್ಕಾರವು ಶುಕ್ರವಾರ (ಫೆ.26) ಬಿಡುಗಡೆ ಮಾಡಲಿದೆ. ಜಿಡಿಪಿ ಶೇ 1.3 ಸಕಾರಾತ್ಮಕ ಬೆಳವಣಿಗೆ ದಾಖಲಿಸಬಹುದು ಎಂದು ಡಿಬಿಎಸ್ ಬ್ಯಾಂಕ್ ವರದಿಯಲ್ಲಿ ತಿಳಿಸಿದೆ.

FY20 ಮೂರನೇ ತ್ರೈಮಾಸಿಕದಲ್ಲಿ GDP ಮತ್ತೆ ಹಳಿಗೆ: DBS ವರದಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 06, 2022 | 7:45 PM

ದೆಹಲಿ: 2020- 21ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್​ನಿಂದ ಡಿಸೆಂಬರ್) ಭಾರತದ ಜಿಡಿಪಿ (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) 1.3 ಪರ್ಸೆಂಟ್ ಸಕಾರಾತ್ಮಕ ಬೆಳವಣಿಗೆ ದಾಖಲಿಸಬಹುದು. ಅದಕ್ಕೂ ಮುಂಚಿನ ಎರಡು ತ್ರೈಮಾಸಿಕದಲ್ಲಿ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಬೆಳವಣಿಗೆ ದರ ಕುಗ್ಗಿತ್ತು. ಕೊರೊನಾ ಪ್ರಕರಣಗಳು ಕಡಿಮೆ ಆಗುತ್ತಾ ಬಂದಿದ್ದು ಮತ್ತು ಸಾರ್ವಜನಿಕ ವೆಚ್ಚದಲ್ಲಿ ಹೆಚ್ಚಳದಿಂದಾಗಿ ಮೂರನೇ ತ್ರೈಮಾಸಿಕದಲ್ಲಿ ಬೆಳವಣಿಗೆ ದಾಖಲಾಗಲಿದೆ ಎಂದು ವರದಿ ಆಗಿದೆ. ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್​ನಿಂದ ಡಿಸೆಂಬರ್ ತ್ರೈಮಾಸಿಕದ ಜಿಡಿಪಿಯ ಅಂಕಿ- ಅಂಶವನ್ನು ಕೇಂದ್ರ ಸರ್ಕಾರವು ಶುಕ್ರವಾರ (ಫೆ.26) ಬಿಡುಗಡೆ ಮಾಡಲಿದೆ.

ಜಿಡಿಪಿ ಮತ್ತೆ ಹಳಿಗೆ ಮರಳಬಹುದು 2020ನೇ ಇಸವಿಯ ಕೊನೆ ತ್ರೈಮಾಸಿಕದಲ್ಲಿ ಜಿಡಿಪಿ ಮತ್ತೆ ಹಳಿಗೆ ಮರಳಬಹುದು ಎಂದು ಅಂದಾಜಿಸಲಾಗಿದೆ. ಡಿಬಿಎಸ್ ಬ್ಯಾಂಕ್ ವರದಿಯಲ್ಲಿ ಹೇಳಿರುವ ಪ್ರಕಾರ, ಪೂರ್ತಿ ವರ್ಷದ ಬೆಳವಣಿಗೆ ನಿಜವಾದ ಲೆಕ್ಕಾಚಾರದಲ್ಲಿ

ಮೈನಸ್ 6.8 ಪರ್ಸೆಂಟ್ ಆಗಬಹುದು ಡಿಬಿಎಸ್ ಸಮೂಹದ ಸಂಶೋಧಕಿ, ಅರ್ಥಶಾಸ್ತ್ರಜ್ಞೆ ರಾಧಿಕಾ ರಾವ್ ಮಾತನಾಡಿ, ಕೋವಿಡ್- 19 ಸನ್ನಿವೇಶದಲ್ಲಿ ಚುರುಕಿನ ಚೇತರಿಕೆ ಕಂಡುಬಂದಿರುವುದು ಹಾಗೂ ಸಾರ್ವಜನಿಕ ವೆಚ್ಚದಲ್ಲಿನ ಹೆಚ್ಚಳ ಈ ಎರಡೂ ಅಂಶ ಸೇರಿ ಡಿಸೆಂಬರ್ 2020ರ ತ್ರೈಮಾಸಿಕಕ್ಕೆ ಶುಭ ಸೂಚನೆಯಾಗಿದೆ ಎಂದಿದ್ದಾರೆ. ಜೂನ್​ಗೆ ಕೊನೆಯಾದ ಮೊದಲ ತ್ರೈಮಾಸಿಕದಲ್ಲಿ 24 ಪರ್ಸೆಂಟ್ ಹಾಗೂ ಸೆಪ್ಟೆಂಬರ್​ಗೆ ಕೊನೆಯಾದ ಎರಡನೇ ತ್ರೈಮಾಸಿಕದಲ್ಲಿ 7.5 ಪರ್ಸೆಂಟ್ ಜಿಡಿಪಿ ನಕಾರಾತ್ಮಕ ಪ್ರಗತಿ ದಾಖಲಿಸಿತ್ತು.

ಹಬ್ಬದ ಸೀಸಸ್​ನಲ್ಲಿ ಬೇಡಿಕೆ ಕುದುರಿತು ಬಳಕೆ ಪ್ರಮಾಣ ಹೆಚ್ಚಿದ್ದು ಮತ್ತು ಪೂರ್ಣ ಪ್ರಮಾಣದ ಸಾಮರ್ಥ್ಯದ ಬಳಕೆ ಮಾಡಿಕೊಂಡಿದ್ದರ ಜತೆಜತೆಗೆ ವಿವಿಧ ವಲಯದ ಚಟುವಟಿಕೆಯಲ್ಲಿ ಹೆಚ್ಚಿದ್ದರಿಂದ ದೇಶೀಯ ಮಾರುಕಟ್ಟೆಯಲ್ಲಿ ಹಬ್ಬದ ಸೀಸಸ್​ನಲ್ಲಿ ಬೇಡಿಕೆ ಕುದುರಿತು ಎಂದು ಡಿಬಿಎಸ್ ಸಂಶೋಧನೆ ತಿಳಿಸಿದೆ.

ಆರ್ಥಿಕ ಸಮೀಕ್ಷೆ 2020- 21ರ ಅಂದಾಜಿನಂತೆ, ಏಪ್ರಿಲ್ 1ರಿಂದ ಆರಂಭವಾಗುವ ಆರ್ಥಿಕ ವರ್ಷದಲ್ಲಿ 11 ಪರ್ಸೆಂಟ್ ದರದಲ್ಲಿ ಆರ್ಥಿಕತೆ ಬೆಳವಣಿಗೆ ಸಾಧಿಸಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು 10.5 ಪರ್ಸೆಂಟ್ ಬೆಳವಣಿಗೆ ದರ ಅಂದಾಜಿಸಿತ್ತು. ಇನ್ನು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) 2021ರಲ್ಲಿ 11.5 ಪರ್ಸೆಂಟ್ ಬೆಳವಣಿಗೆ ದರದ ಅಂದಾಜು ಮಾಡಿತ್ತು.

‘ನಿಜವಾದ ಜಿಡಿಪಿ ಬೆಳವಣಿಗೆ ದರ ಮೂರನೇ ತ್ರೈಮಾಸಿಕದಲ್ಲಿ 1.3 ಪರ್ಸೆಂಟ್ ಬೆಳವಣಿಗೆ ಸಾಧಿಸಲಿದೆ. ಕಳೆದ ತ್ರೈಮಾಸಿಕದಲ್ಲಿ (-) 7.5 ಪರ್ಸೆಂಟ್ ಇತ್ತು’ ಎಂದು ಡಿಬಿಎಸ್ ರೀಸರ್ಚ್ ತಿಳಿಸಿದೆ.

ಕೃಷಿ ಉತ್ಪಾದಕತೆಯು ಬೆಳವಣಿಗೆಗೆ ಸಹಕಾರಿ ಕೃಷಿ ಉತ್ಪಾದಕತೆಯು ಬೆಳವಣಿಗೆಗೆ ಸಹಕಾರಿ ಆಗಲಿದೆ. ಅದಕ್ಕೆ ಉತ್ಪಾದನಾ ವಲಯದ ಸ್ಥಿರತೆ ಮತ್ತು ಸೇವಾ ವಲಯಗಳ ಪೈಕಿ ಹಣಕಾಸು, ಸಾರ್ವಜನಿಕ ಆಡಳಿತವು ಪ್ರಯಾಣ, ವಿಮಾನ ಯಾನ ಮತ್ತು ಪ್ರವಾಸೋದ್ಯಮಕ್ಕಿಂತ ಉತ್ತಮವಾಗಿರಲಿದೆ ಎಂದು ಹೇಳಿದೆ.

ಡಿಬಿಎಸ್ ಪ್ರಕಾರ, ಹಣದುಬ್ಬರ ದರವನ್ನು ನಿಗದಿತ ಗುರಿಯಾದ 4 ಪರ್ಸೆಂಟ್ ಹಾಗೂ ಗರಿಷ್ಠ ಮಟ್ಟವಾದ 6 ಪರ್ಸೆಂಟ್ ನೊಳಗೆ ಇರಿಸಲು ಹಣಕಾಸು ನೀತಿ ದರ ಘೋಷಣೆ ವೇಳೆ ಇಳಿಕೆಗೆ ಅವಕಾಶ ಇರುವಂತೆಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದುವರಿಯಲಿದೆ. ಈ ವರ್ಷ ರೆಪೋ ದರದಲ್ಲಿ ಆರ್ ಬಿಐ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ ಎಂದು ಡಿಬಿಎಸ್ ಅಭಿಪ್ರಾಯ ಪಟ್ಟಿರುವುದಾಗಿ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: Budget 2021 | ಮಂಡನೆಯಾಯ್ತು Economic Survey: ಕೃಷಿಯ ಭರವಸೆ, ಶೇ 11ರ ಜಿಡಿಪಿ ಪ್ರಗತಿ ನಿರೀಕ್ಷೆ

ಇದನ್ನೂ ಓದಿ: ಜಿಡಿಪಿ ಮಹಾ ಕುಸಿತಕ್ಕೆ ಅಡ್ಡ ಕಸುಬಿ ಆರ್ಥಿಕ ನಿರ್ವಹಣೆ ಕಾರಣ: ಮೋದಿ ವಿರುದ್ಧ ಸಿದ್ದು ಗುಡುಗು

Published On - 10:16 pm, Tue, 23 February 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್