AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

4G ಟೆಲಿಕಾಂ ತರಂಗಾಂತರ ರೂ. 77,814.80 ಕೋಟಿಗೆ ಹರಾಜು; ರಿಲಯನ್ಸ್ ಜಿಯೋ ರೂ. 57,122 ಕೋಟಿ ಬಿಡ್

4G ಸ್ಪೆಕ್ಟ್ರಂ ಹರಾಜಿನಲ್ಲಿ ಸರ್ಕಾರವು 77,814.80 ಕೋಟಿ ರೂಪಾಯಿ ಸಂಗ್ರಹಿಸಿದೆ. ಅತಿ ಹೆಚ್ಚಿನ ಪ್ರಮಾಣದ ಬಿಡ್ ಮಾಡಿರುವುದು ರಿಲಯನ್ಸ್ ಜಿಯೋ ಹಾಗೂ ಮೊತ್ತ 57,122 ಕೋಟಿ ರೂಪಾಯಿ.

4G ಟೆಲಿಕಾಂ ತರಂಗಾಂತರ ರೂ. 77,814.80 ಕೋಟಿಗೆ ಹರಾಜು; ರಿಲಯನ್ಸ್ ಜಿಯೋ ರೂ. 57,122 ಕೋಟಿ ಬಿಡ್
ಜಿಯೋ 888 ರೂ. ಪ್ಲ್ಯಾನ್: ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ 888 ರೂ. ಪ್ರಿಪೇಯ್ಡ್ ರೀಚಾರ್ಜ್ ಆಯ್ಕೆ ನೀಡಿದ್ದು, ಇದರ ವಾಲಿಡಿಟಿ 84 ದಿನಗಳು. ಈ ಪ್ಲ್ಯಾನ್​ನಲ್ಲೂ ಅನಿಯಮಿತ ಕರೆ ಹಾಗೂ ಪ್ರತಿ ದಿನ 2GB ಡೇಟಾ ಸಿಗಲಿದೆ. ಇನ್ನು ಬೋನಸ್ ಆಗಿ 5 ಜಿಬಿ 4 ಜಿ ಡೇಟಾವನ್ನು ಕೂಡ ನೀಡಲಿದೆ. ಅದರೊಂದಿಗೆ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್ ಪ್ರವೇಶ ಪಡೆಯಬಹುದು.
Srinivas Mata
| Edited By: |

Updated on: Mar 03, 2021 | 5:24 PM

Share

4G ಟೆಲಿಕಾಂ ತರಂಗಾಂತರ (ಸ್ಪೆಕ್ಟ್ರಮ್) 2021ರ ಹರಾಜು ಪ್ರಕ್ರಿಯೆ ಮಾರ್ಚ್ 2ನೇ ತಾರೀಕಿನಂದು ಮುಕ್ತಾಯ ಆಗಿದೆ. ಇದಕ್ಕಾಗಿ ಸರ್ಕಾರವು ರೂ. 77,814.80 ಕೋಟಿಯ ಬಿಡ್ ಪಡೆದುಕೊಂಡಿದೆ. 77,146 ಕೋಟಿ ರೂಪಾಯಿ ಮೌಲ್ಯದ ಬಿಡ್ ಮೊದಲ ದಿನವೇ ಸಂಗ್ರಹ ಆಗಿತ್ತು. ಎರಡನೇ ದಿನದಂದು ರೂ.668.20 ಕೋಟಿಯ ಬಿಡ್ ಬಂತು. ಎರಡೂ ದಿನದ್ದು ಒಟ್ಟು ಸೇರಿ ರೂ. 77,814.80 ಕೋಟಿ ಬಂದಿದೆ. ರಿಲಯನ್ಸ್ ಜಿಯೋದಿಂದ ಅತಿ ದೊಡ್ಡ ಪ್ರಮಾಣದ ಖರೀದಿ ಮಾಡಲಾಗಿದೆ. ಒಟ್ಟಾರೆ 488.35 MHz ಸ್ಪೆಕ್ಟ್ರಂ ಅನ್ನು ರೂ. 57,122.05 ಕೋಟಿಗೆ ಖರೀದಿ ಮಾಡಿದೆ. ಆ ನಂತರ ಭಾರ್ತಿ ಏರ್​ಟೆಲ್ 355.45 MHz ಸ್ಪೆಕ್ಟ್ರಂ ಅನ್ನು ರೂ. 18,698.75 ಕೋಟಿಗೆ ಹಾಗೂ ವೊಡಾಫೋನ್ ಐಡಿಯಾ 11.80 MHz ಸ್ಪೆಕ್ಟ್ರಂ ಅನ್ನು ರೂ. 1993.40 ಕೋಟಿಗೆ ಖರೀದಿಸಿವೆ ಎಂದು ದೂರಸಂಪರ್ಕ ಕಾರ್ಯದರ್ಶಿ ಅನ್ಶುಲ್ ಪ್ರಕಾಶ್ ಹೇಳಿದ್ದಾರೆ.

2300 MHz ಬ್ಯಾಂಡ್​​ಗೆ ಅತಿ ಹೆಚ್ಚಿನ ಬೇಡಿಕೆ ಅನ್ಶುಲ್ ಪ್ರಕಾಶ್ ಹೇಳಿದಂತೆ, 2308.80 MHz ಸ್ಪೆಕ್ಟ್ರಂ ಹರಾಜಿಗೆ ಇಡಲಾಗಿತ್ತು. ಸರ್ಕಾರದಿಂದ 855.60 MHz ಸ್ಪೆಕ್ಟ್ರಂಗೆ ಬಿಡ್ ಬಂದಿದೆ. 2300 MHz ಬ್ಯಾಂಡ್ ಅತಿ ಹೆಚ್ಚು ಬೇಡಿಕೆ ಪಡೆದಿದ್ದು, ಶೇ 89.29ರಷ್ಟು ಸ್ಪೆಕ್ಟ್ರಂ ಮಾರಾಟವಾಯಿತು. 2300 MHz ಬ್ಯಾಂಡ್ ಅಡಿಯಲ್ಲೇ 560 MHz ಸ್ಪೆಕ್ಟ್ರಂ ಕೂಡ ಹರಾಜಿಗೆ ಇಡಲಾಗಿತ್ತು ಎಂದು ಸಂಬಂಧಪಟ್ಟ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

800 MHz ಬ್ಯಾಂಡ್​ನಲ್ಲಿ ಲಭ್ಯವಿರುವ ಶೇ 65ರಷ್ಟು ಸ್ಪೆಕ್ಟ್ರಂ ಮಾರಾಟವಾಗಿದೆ. 1800 MHz ಬ್ಯಾಂಡ್ ಶೇ 43ರಷ್ಟು, 900 MHz ಬ್ಯಾಂಡ್ ಶೇಕಡಾ 39ರಷ್ಟು, 2100 MHz ಬ್ಯಾಂಡ್​​ನಲ್ಲಿ ಶೇ 9ರಷ್ಟು ಸ್ಪೆಕ್ಟ್ರಂ ಮಾರಾಟವಾಗಿದೆ. ಒಟ್ಟಾರೆ ಸ್ಪೆಕ್ಟ್ರಂ ಮಾರಾಟದಿಂದ ಕನಿಷ್ಠ 3.92 ಲಕ್ಷ ಕೋಟಿ ರೂಪಾಯಿ ಸಂಗ್ರಹ ಆಗಬಹುದು ಎಂದು ದೂರಸಂಪರ್ಕ ಇಲಾಖೆಯು (DoT) ಗುರಿ ಹಾಕಿಕೊಂಡಿದೆ. ಈ ವರ್ಷ ಏರ್​​ಟೆಲ್, ವೊಡಾಫೋನ್ ಐಡಿಯಾ ಹಾಗೂ ರಿಲಯನ್ಸ್ ಜಿಯೋ ಮಾತ್ರ ಬಿಡಿಂಗ್​ನಲ್ಲಿ ಪಾಲ್ಗೊಂಡಿದ್ದವು.

700 MHz ಸ್ಪೆಕ್ಟ್ರಂ ಮೂಲ ಬೆಲೆ 2 ಲಕ್ಷ ಕೋಟಿ ರೂಪಾಯಿ ಹತ್ತಿರ: ಕಳೆದ ಬಾರಿ ಸ್ಪೆಕ್ಟ್ರಂ 2016ರಲ್ಲಿ ಮಾರಾಟ ಆಗಿತ್ತು. ಈ ಬಾರಿ ದೂರಸಂಪರ್ಕ ಇಲಾಖೆಯು 700 MHz, 800 MHz, 900 MHz, 1800 MHz, 2100 MHz, 2300 MHz ಮತ್ತು 2500 MHz ಬ್ಯಾಂಡ್​ನ 2308 ಯೂನಿಟ್ ಸ್ಪೆಕ್ಟ್ರಂ ಅನ್ನು ಹರಾಜಿಗಿಟ್ಟಿತ್ತು. 800 MHz, 900 MHz, 1800 MHz, 2100 MHz ರೇಡಿಯೋ ತರಂಗಾತರಗಳಿಗೆ ಬಿಡ್​​ಗಳು ಬಂದವು. 700 MHz, 2500 MHz ಬ್ಯಾಂಡ್ ಮಾರಾಟ ಆಗದೆ ಉಳಿದವು. 700 MHz ಸ್ಪೆಕ್ಟ್ರಂ ಮೂಲ ಬೆಲೆ 2 ಲಕ್ಷ ಕೋಟಿ ರೂಪಾಯಿಗೆ ಹತ್ತಿರ ಇದ್ದುದರಿಂದ ಯಾರೂ ಅದರ ಖರೀದಿಗೆ ಮುಂದಾಗಲಿಲ್ಲ.

700 MHz ಬ್ಯಾಂಡ್ ಮಾರಾಟವಾಗದೆ ಉಳಿದುಕೊಂಡಿದೆ. ಇದನ್ನು 5G ಹರಾಜಿಗೆ ಬಳಸಿಕೊಳ್ಳಬಹುದು. ಹೊಸದಾಗಿ ರೆಫರೆನ್ಸ್​ಗೆ 700 MHz ಮತ್ತು 2500 MHz ಮತ್ತೆ ಭಾರತೀಯ ದೂರಸಂಪರ್ಕ ಪ್ರಾಧಿಕಾರಕ್ಕೆ (TRAI) ಕಳುಹಿಸಲಾಗುವುದು ಎಂದು ದೂರಸಂಪರ್ಕ ಕಾರ್ಯದರ್ಶಿ ಹೇಳಿದ್ದಾರೆ. ಮುಂದುವರಿದು, ಜಿಯೋದಿಂದ 800 MHz, 1800 MHz ಮತ್ತು 2300 MHz ಬ್ಯಾಂಡ್ ಖರೀದಿಸಲಾಗಿದೆ. ವೊಡಾಫೋನ್ ಐಡಿಯಾ 900 ಮತ್ತು 1800 MHz ಬ್ಯಾಂಡ್​ಗಳಿಗೆ ಮಾತ್ರ ಬಿಡ್ ಮಾಡಿದೆ. ಇನ್ನು ಭಾರ್ತಿ ಏರ್​ಟೆಲ್ ನಿಂದ 5 ಬ್ಯಾಂಡ್​ಗಳಾದ 800 MHz, 900 MHz, 1800 MHz, 2100 MHz ಮತ್ತು 2300 Mhzಗೆ ಬಿಡ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

20 ವರ್ಷಗಳ ಅವಧಿಗೆ ಖರೀದಿ ಟೆಲಿಕಾಂ ಕಂಪೆನಿಗಳು ಖರೀದಿ ಮಾಡಿದ ಈ ಸ್ಪೆಕ್ಟ್ರಂಗಳು 20 ವರ್ಷಗಳ ಕಾಲಾವಧಿಯ ಮಾನ್ಯತೆ ಹೊಂದಿರುತ್ತವೆ. ಸರ್ಕಾರವು ಈ ಹರಾಜಿನಿಂದ ನಿರೀಕ್ಷೆ ಮಾಡಿದ್ದ ಆದಾಯಕ್ಕಿಂತ ಶೇ 50ರಷ್ಟು ಹೆಚ್ಚೇ ಹಣ ಬಂದಿದೆ. ಮುಂದಿನ ಏಳರಿಂದ ಹತ್ತು ದಿನದೊಳಗೆ ಹಣ ಪಾವತಿಗೆ ನೋಟಿಸ್ ನೀಡಲಾಗುತ್ತದೆ. ಅಲ್ಲಿಂದ 10 ದಿನದೊಳಗೆ ಆರಂಭದ ಕಂತನ್ನು ಪಾವತಿ ಮಾಡಬೇಕಾಗುತ್ತದೆ. 700 MHz, 800 MHz ಮತ್ತು 900 MHz ಬ್ಯಾಂಡ್​ಗಳನ್ನು ಖರೀದಿ ಮಾಡಿದವರು ಆರಂಭದಲ್ಲೇ ಶೇ 25ರಷ್ಟು ಮೊತ್ತ, ಉಳಿದ ಬ್ಯಾಂಡ್​​ಗಳಾದ 1800, 2100, 2300 ಮತ್ತು 2500 MHz ಬ್ಯಾಂಡ್ ಖರೀದಿ ಮಾಡಿದವರು ಶೇಕಡಾ 50ರಷ್ಟು ಹಣ ಆರಂಭದಲ್ಲೇ ನೀಡಬೇಕು. ಬಾಕಿ ಮೊತ್ತವನ್ನು 16 ವಾರ್ಷಿಕ ಕಂತುಗಳಲ್ಲಿ ಪಾವತಿಸಬೇಕು. ಮೊದಲಿಗೆ ಎರಡು ವರ್ಷ ಪಾವತಿಯಿಂದ ವಿನಾಯಿತಿ ಇರುತ್ತದೆ. ವೈರ್​ಲೆನ್ ಸೇವೆ ಆದಾಯ ಹೊರತುಪಡಿಸಿ ಸ್ಪೆಕ್ಟ್ರಂ ಬಳಕೆ ಶುಲ್ಕ (SUC) ಎಂದು ಈ ಹರಾಜಿನಲ್ಲಿ ಲೈಸೆನ್ಸ್​ನ ಶೇ 3ರ ದರದಲ್ಲಿ ಅಡ್ಜಸ್ಟಡ್ ಗ್ರಾಸ್ ರೆವೆನ್ಯೂ (ಎಜಿಆರ್) ಪಾವತಿಸಬೇಕಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Reliance Jioದಿಂದ ಗ್ರಾಹಕರಿಗೆ ಸಿಹಿ ಸುದ್ದಿ! ಜಿಯೋ ಪರಿಚಯಿಸಿದ ಮೂರು ವಿಶೇಷ ಆಫರ್​ಗಳಿವು

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ