ಕೊರೊನಾ ಜಾಗೃತಿ ಮೂಡಿಸಲು ಬಂದ ಖಾಕಿ ಮೇಲೆಯೇ ಹಲ್ಲೆ!

|

Updated on: Apr 16, 2020 | 8:46 AM

ಹಾವೇರಿ: ಭಯಾನಕ ಕೊರೊನಾ ವೈರೆಸ್ ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಇದರ ವಿರುದ್ಧದ ಹೋರಾಟ್ಟಕ್ಕೆ ದೇಶ ಲಾಕ್​ಡೌನ್ ಮಾಡಲಾಗಿದೆ. ಆದರೆ ನಮ್ಮ ಜನ ಇದ್ಯಾವುದಕ್ಕೂ ಕ್ಯಾರೆ ಅಂತಿಲ್ಲ. ಹೀಗಾಗಿ ಜಾಗೃತಿ ಮೂಡಿಸಲು ಬಂದಿದ್ದ ಅಧಿಕಾರಿಗಳು ಹಾಗೂ ಪೊಲೀಸರ ಮೇಲೆಯೇ ಹಲ್ಲೆ ನಡೆದಿರುವ ಘಟನೆ ಸವಣೂರು ತಾಲೂಕಿನ ತೆಗ್ಗೀಹಳ್ಳಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಲು ಬಂದಾಗ ಮನೆ ಹೊರಗೆ ಕೂತಿದ್ದವರಿಗೆ ಗುಂಪಾಗಿ ಕುಳಿತುಕೊಳ್ಳಬೇಡಿ ಅಂದಿದ್ದಕ್ಕೆ ಚಮನ್ ಸಾಬ ಕಣವಿ ಅನ್ನೋರ ಕುಟುಂಬ ಸೇರಿ […]

ಕೊರೊನಾ ಜಾಗೃತಿ ಮೂಡಿಸಲು ಬಂದ ಖಾಕಿ ಮೇಲೆಯೇ ಹಲ್ಲೆ!
Follow us on

ಹಾವೇರಿ: ಭಯಾನಕ ಕೊರೊನಾ ವೈರೆಸ್ ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಇದರ ವಿರುದ್ಧದ ಹೋರಾಟ್ಟಕ್ಕೆ ದೇಶ ಲಾಕ್​ಡೌನ್ ಮಾಡಲಾಗಿದೆ. ಆದರೆ ನಮ್ಮ ಜನ ಇದ್ಯಾವುದಕ್ಕೂ ಕ್ಯಾರೆ ಅಂತಿಲ್ಲ. ಹೀಗಾಗಿ ಜಾಗೃತಿ ಮೂಡಿಸಲು ಬಂದಿದ್ದ ಅಧಿಕಾರಿಗಳು ಹಾಗೂ ಪೊಲೀಸರ ಮೇಲೆಯೇ ಹಲ್ಲೆ ನಡೆದಿರುವ ಘಟನೆ ಸವಣೂರು ತಾಲೂಕಿನ ತೆಗ್ಗೀಹಳ್ಳಿ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಲು ಬಂದಾಗ ಮನೆ ಹೊರಗೆ ಕೂತಿದ್ದವರಿಗೆ ಗುಂಪಾಗಿ ಕುಳಿತುಕೊಳ್ಳಬೇಡಿ ಅಂದಿದ್ದಕ್ಕೆ ಚಮನ್ ಸಾಬ ಕಣವಿ ಅನ್ನೋರ ಕುಟುಂಬ ಸೇರಿ 8 ಮಂದಿಯ ಗ್ಯಾಂಗ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಸವಣೂರು ತಾಲೂಕು ಪಂಚಾಯ್ತಿ ಇಒ ಮುನಿಯಪ್ಪ, ಸಿಪಿಐ ಶಶಿಧರ ಹಾಗೂ ಆರು ಜನ ಪೊಲೀಸರ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ನಡೆಸಿದ 8 ಮಂದಿಯ ಗ್ಯಾಂಗ್​ನಲ್ಲಿ ಪ್ರಕರಣದ ಸಂಬಂಧ 7 ಮಂದಿಯನ್ನ ವಶಕ್ಕೆ ಪಡೆಯಲಾಗಿದೆ.