ಬೇಸಿಗೆಯ ಸುಡು ಬಿಸಿಲಿನಲ್ಲಿ ಸರ್ಕಲ್​ನಲ್ಲೇ ನಿಂತು ಉಪಾಹಾರ ಸೇವಿಸಿದ ಪೇದೆ, ಎಲ್ಲಿ?

ಬೇಸಿಗೆಯ ಸುಡು ಬಿಸಿಲಿನಲ್ಲಿ ಸರ್ಕಲ್​ನಲ್ಲೇ ನಿಂತು ಉಪಾಹಾರ ಸೇವಿಸಿದ ಪೇದೆ, ಎಲ್ಲಿ?

ಗದಗ: ಮಾಹಾಮಾರಿ ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಹಿನ್ನೆಲೆ ಗದಗ ಶಹರದಲ್ಲಿ ಸುಡು ಬಿಸಿಲಿನಲ್ಲೇ ಸರ್ಕಲ್ ನಲ್ಲಿ ನಿಂತು ಪೊಲೀಸ್ ಪೇದೆ ಯೊಬ್ಬರು ಉಪಾಹಾರ ಸೇವನೆ ಮಾಡಿದ ಮನಕಲುಕುವ ದೃಶ್ಯಕ್ಕೆ ಕಂಡುಬಂದಿದೆ. ಕೊರೊನಾ ವೈರಸ್ ಜೊತೆ ‌ಜನರೇನೋ ಚೆಲ್ಲಾಟವಾಡುತ್ತಾ, ಲಾಕ್ ಡೌನ್ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಆದ್ರೆ ಇಂತಹ ಜನ್ರ ರಕ್ಷಣೆಗೆ ನಿಂತಿರುವ ಮತ್ತು ಬುದ್ಧಿವಾದ ಹೇಳಲು ಪೊಲೀಸರು ಬೇಸಿಗೆಯ ರಣ ಬಿಸಿಲಿನಲ್ಲಿ ಡ್ಯೂಟಿ ಮಾಡುತ್ತಿದ್ದಾರೆ. ಉಪಹಾರ ಸೇವಿಸುತ್ತಲ್ಲೇ ಜನ್ರಿಗೆ ವಿನಾಕಾರಣ ಅಡ್ಡಾಡಬೇಡಿ ಅಂತ ಮನವಿ […]

sadhu srinath

|

Apr 16, 2020 | 11:26 AM

ಗದಗ: ಮಾಹಾಮಾರಿ ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಹಿನ್ನೆಲೆ ಗದಗ ಶಹರದಲ್ಲಿ ಸುಡು ಬಿಸಿಲಿನಲ್ಲೇ ಸರ್ಕಲ್ ನಲ್ಲಿ ನಿಂತು ಪೊಲೀಸ್ ಪೇದೆ ಯೊಬ್ಬರು ಉಪಾಹಾರ ಸೇವನೆ ಮಾಡಿದ ಮನಕಲುಕುವ ದೃಶ್ಯಕ್ಕೆ ಕಂಡುಬಂದಿದೆ.

ಕೊರೊನಾ ವೈರಸ್ ಜೊತೆ ‌ಜನರೇನೋ ಚೆಲ್ಲಾಟವಾಡುತ್ತಾ, ಲಾಕ್ ಡೌನ್ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಆದ್ರೆ ಇಂತಹ ಜನ್ರ ರಕ್ಷಣೆಗೆ ನಿಂತಿರುವ ಮತ್ತು ಬುದ್ಧಿವಾದ ಹೇಳಲು ಪೊಲೀಸರು ಬೇಸಿಗೆಯ ರಣ ಬಿಸಿಲಿನಲ್ಲಿ ಡ್ಯೂಟಿ ಮಾಡುತ್ತಿದ್ದಾರೆ.

ಉಪಹಾರ ಸೇವಿಸುತ್ತಲ್ಲೇ ಜನ್ರಿಗೆ ವಿನಾಕಾರಣ ಅಡ್ಡಾಡಬೇಡಿ ಅಂತ ಮನವಿ ಮಾಡುವ ಕೈಂಕರ್ಯದಲ್ಲಿ ತೊಡಗಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ‌ಪೇದೆ ವೀರೇಶ್‌ ಮಣ್ಣೂರ ಅವರು ಟಿಪ್ಪು ಸುಲ್ತಾನ್ ಸರ್ಕಲ್ ನಲ್ಲಿ ಡ್ಯೂಟಿ ಮಾಡುತ್ತಿದ್ದಾರೆ.

ಪೇದೆ ವೀರೇಶ್‌ ಮಣ್ಣೂರ ಅವರು ತಮ್ಮ ಇಡೀ ಕುಟುಂಬವನ್ನು ಬಿಟ್ಟು ಕೊರೊನಾ ವೈರಸ್ ಭಯದಲ್ಲೂ ಸೇವೆಯಲ್ಲಿದ್ದಾರೆ. ಮಧ್ಯೆ ಹಸಿವು ನೀಗಿಸಿಕೊಳ್ಳಲು ಸರ್ಕಿನಲ್ಲಿ ನಿಂತುಕೊಂಡೇ ಡ್ಯೂಟಿ ಮಾಡುತ್ತಲೇ ಉಪಾಹಾರ ಸೇವನೆ ಮಾಡಿದ್ದಾರೆ. ಆದ್ರೆ ಜನ್ರಿಗೆ ಮಾತ್ರ ತಮ್ಮ ಬಗ್ಗೆಯೂ ಕಾಳಜಿ ಇಲ್ಲ ಅವರವರ ಕುಟುಂಬದ ಬಗ್ಗೆಯೂ ಕಾಳಜಿ ನಾಸ್ತಿ ಎಂಬಂತಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada