ಕೊರೊನಾ ನಡುವೆಯೂ ಹೆಚ್ಚಾಯ್ತು ಕಳ್ಳಬಟ್ಟಿ ತಯಾರಿಕೆ, ಪೊಲೀಸರಿಂದ 70 ಬಿಂದಿಗೆ ನಾಶ
ವಿಜಯಪುರ: ಕೊರೊನಾ ವಿರುದ್ಧದ ಹೋರಾಟಕ್ಕೆ ಇಡೀ ದೇಶ ಲಾಕ್ಡೌನ್ ಮಾಡಲಾಗಿದೆ. ಈ ನಡುವೆ ಬಾರ್ಗಳು ಮುಚ್ಚಿದ್ದು, ಮದ್ಯಪ್ರಿಯರು ನರಳಾಡುತ್ತಿದ್ದಾರೆ. ಬಾರ್ನಲ್ಲಿ ಕಳ್ಳತನ, ಕುಡುಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ವರದಿಗಳು ಬರುತ್ತಿವೆ. ಇದೇ ಸಂದರ್ಭ ಬಳಸಿಕೊಂಡು ಕೆಲ ಕಿಡಿಗೇಡಿಗಳು ಅಕ್ರಮ ಕಳ್ಳಬಟ್ಟಿ ತಯಾರಿಕೆ ಮಾಡ್ತಿದ್ದಾರೆ. ಈ ನಿಟ್ಟಿನಲ್ಲಿ ಅಕ್ರಮ ಕಳ್ಳಬಟ್ಟಿ ತಯಾರಿಕಾ ಅಡ್ಡೆ ಮೇಲೆ ಮುದ್ದೇಬಿಹಾಳ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮುದ್ದೇಬಿಹಾಳ ತಾಲೂಕಿನ ಕೊಪ್ಪ, ಕಾಳಗಿ, ನೇಬಗೇರಿ, ಕೋಳೂರ ತಾಂಡಾಗಳ ಮೇಲೆ ದಾಳಿ ನಡೆಸಿದ್ದು ಸುಮಾರು 70 […]
ವಿಜಯಪುರ: ಕೊರೊನಾ ವಿರುದ್ಧದ ಹೋರಾಟಕ್ಕೆ ಇಡೀ ದೇಶ ಲಾಕ್ಡೌನ್ ಮಾಡಲಾಗಿದೆ. ಈ ನಡುವೆ ಬಾರ್ಗಳು ಮುಚ್ಚಿದ್ದು, ಮದ್ಯಪ್ರಿಯರು ನರಳಾಡುತ್ತಿದ್ದಾರೆ. ಬಾರ್ನಲ್ಲಿ ಕಳ್ಳತನ, ಕುಡುಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ವರದಿಗಳು ಬರುತ್ತಿವೆ.
ಇದೇ ಸಂದರ್ಭ ಬಳಸಿಕೊಂಡು ಕೆಲ ಕಿಡಿಗೇಡಿಗಳು ಅಕ್ರಮ ಕಳ್ಳಬಟ್ಟಿ ತಯಾರಿಕೆ ಮಾಡ್ತಿದ್ದಾರೆ. ಈ ನಿಟ್ಟಿನಲ್ಲಿ ಅಕ್ರಮ ಕಳ್ಳಬಟ್ಟಿ ತಯಾರಿಕಾ ಅಡ್ಡೆ ಮೇಲೆ ಮುದ್ದೇಬಿಹಾಳ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮುದ್ದೇಬಿಹಾಳ ತಾಲೂಕಿನ ಕೊಪ್ಪ, ಕಾಳಗಿ, ನೇಬಗೇರಿ, ಕೋಳೂರ ತಾಂಡಾಗಳ ಮೇಲೆ ದಾಳಿ ನಡೆಸಿದ್ದು ಸುಮಾರು 70 ಬಿಂದಿಗೆಗಳಷ್ಟು ಕಳ್ಳಬಟ್ಟಿಯನ್ನು ಒಡೆದು ಸುಟ್ಟು ಹಾಕಿ ಧ್ವಂಸ ಮಾಡಿದ್ದಾರೆ.
Published On - 12:25 pm, Thu, 16 April 20