RR ನಗರ ಬೈಎಲೆಕ್ಷನ್: JDS ಅಭ್ಯರ್ಥಿ ಇವರೇ..

ಬೆಂಗಳೂರು: ರಾಜರಾಜೇಶ್ವರಿನಗರದ ಉಪಚುನಾವಣೆಗೆ ಹಾದಿ ಸುಗಮವಾದ ಬೆನ್ನಲ್ಲೇ JDS ತನ್ನ ಅಭ್ಯರ್ಥಿ ಹೆಸರನ್ನು ಸಹ ಸೂಚಿಸಿದೆ. ಅಭ್ಯರ್ಥಿಯ ಹೆಸರನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ನಮ್ಮ ಅಭ್ಯರ್ಥಿ ಜ್ಞಾನಭಾರತಿ ಕೃಷ್ಣಮೂರ್ತಿಗೆ ಬೆಂಬಲಿಸಬೇಕು. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ಕೃಷ್ಣಮೂರ್ತಿಗೆ ಟಿಕೆಟ್ ಕೊಟ್ಟಿದ್ದೇವೆ. ಜ್ಞಾನಭಾರತಿ ಕೃಷ್ಣಮೂರ್ತಿ ತಂದೆ ನಮ್ಮ ಪಕ್ಷಕ್ಕೆ ದುಡಿದವರು ಎಂದು ಕುಮಾರಸ್ವಾಮಿ ಹೇಳಿದರು. 2008ರ ಚುನಾವಣೆಯಲ್ಲಿ ಕೃಷ್ಣಮೂರ್ತಿ ತಂದೆ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಅಂತಾ ನಮ್ಮ ಪರ ಕೆಲಸ ಮಾಡಿದ್ದರು. ಆದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಇದರ […]

RR ನಗರ ಬೈಎಲೆಕ್ಷನ್: JDS ಅಭ್ಯರ್ಥಿ ಇವರೇ..

Updated on: Oct 13, 2020 | 3:33 PM

ಬೆಂಗಳೂರು: ರಾಜರಾಜೇಶ್ವರಿನಗರದ ಉಪಚುನಾವಣೆಗೆ ಹಾದಿ ಸುಗಮವಾದ ಬೆನ್ನಲ್ಲೇ JDS ತನ್ನ ಅಭ್ಯರ್ಥಿ ಹೆಸರನ್ನು ಸಹ ಸೂಚಿಸಿದೆ. ಅಭ್ಯರ್ಥಿಯ ಹೆಸರನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ನಮ್ಮ ಅಭ್ಯರ್ಥಿ ಜ್ಞಾನಭಾರತಿ ಕೃಷ್ಣಮೂರ್ತಿಗೆ ಬೆಂಬಲಿಸಬೇಕು. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ಕೃಷ್ಣಮೂರ್ತಿಗೆ ಟಿಕೆಟ್ ಕೊಟ್ಟಿದ್ದೇವೆ. ಜ್ಞಾನಭಾರತಿ ಕೃಷ್ಣಮೂರ್ತಿ ತಂದೆ ನಮ್ಮ ಪಕ್ಷಕ್ಕೆ ದುಡಿದವರು ಎಂದು ಕುಮಾರಸ್ವಾಮಿ ಹೇಳಿದರು. 2008ರ ಚುನಾವಣೆಯಲ್ಲಿ ಕೃಷ್ಣಮೂರ್ತಿ ತಂದೆ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಅಂತಾ ನಮ್ಮ ಪರ ಕೆಲಸ ಮಾಡಿದ್ದರು. ಆದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಇದರ ಶಾಕ್​ನಿಂದ ಅವರು ಹೃದಯಾಘಾತದಿಂದ ಮೃತರಾದರು. ಅವ್ರು ನಮ್ಮ ನಿಷ್ಠಾವಂತ ಕಾರ್ಯಕರ್ತ. ಅ ಕುಟುಂಬದ ಬಗ್ಗೆ ನನಗೆ ಅನುಕಂಪ ಇದೆ ಎಂದು ಕುಮಾರಸ್ವಾಮಿ ಹೇಳಿದರು.

ನಾಳೆ ನಮ್ಮ ಅಭ್ಯರ್ಥಿ ಕೃಷ್ಣಮೂರ್ತಿ ನಾಮಪತ್ರ ಸಲ್ಲಿಸ್ತಾರೆ. ಜ್ಞಾನಭಾರತಿ ಕೃಷ್ಣಮೂರ್ತಿ ನಮ್ಮ ಪಕ್ಷದ ಕಾರ್ಯಕರ್ತ. ಸ್ವಂತ ದುಡಿಮೆಯಿಂದ ಕೃಷ್ಣಮೂರ್ತಿ ಬೆಳೆದು ಬಂದಿದ್ದಾರೆ. ಹೀಗಾಗಿ, ಅವರಿಗೆ ಟಿಕೆಟ್ ಕೊಡುತ್ತಿದ್ದೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

‘ಸ್ನೇಹವೇ ಬೇರೆ ಚುನಾವಣೆ ಬೇರೆ’
ನಾನು ಸಿನಿಮಾ ರಂಗದಿಂದ ಬಂದವನು. ಮುನಿರತ್ನ ಕೂಡ ಸಿನಿಮಾ ಕ್ಷೇತ್ರದವರು. ಹೀಗಾಗಿ, ನನ್ನ ಹಾಗೂ ಮುನಿರತ್ನ ಮಧ್ಯೆ ಸ್ನೇಹ ಇದೆ. ಆದರೆ ಸ್ನೇಹವೇ ಬೇರೆ ಚುನಾವಣೆ ಬೇರೆ. ಚುನಾವಣೆ ಸಂದರ್ಭದಲ್ಲಿ ಅದು ಅನ್ವಯಿಸಲ್ಲ. ಚುನಾವಣೆ ವೇಳೆ ಕೆಲವರು ಅಪ‌ಪ್ರಚಾರ ಮಾಡುತ್ತಾರೆ. ಹೀಗಾಗಿ, ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

Published On - 3:19 pm, Tue, 13 October 20