ಏಸ್ಕಾರ್ಟ್‌ನ ನಾಲ್ವರಿಗೆ ಸೋಂಕು, H.D.ರೇವಣ್ಣಗೆ ಹೆಚ್ಚಾಯ್ತು ಆತಂಕ
ಹಾಸನ: ಮಾಜಿ ಸಚಿವ ಹೆಚ್.ಡಿ ರೇವಣ್ಣಗೂ ಕೊರೊನಾ ಭೀತಿ ಶುರುವಾಗಿದೆ. ಏಕೆಂದ್ರೆ ರೇವಣ್ಣ ಬೆಂಗಾವಲು ವಾಹನದಲ್ಲಿ ಕೆಲಸ ಮಾಡುತ್ತಿರೋ ನಾಲ್ವರು ಪೊಲೀಸರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿರೋ ಮೂವರೂ ಹಾಗು ಹಾಸನದಲ್ಲಿರೋ ಓರ್ವ ಸಿಬ್ಬಂದಿಗೆ ಸೇರಿ ನಾಲ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಹೆಚ್.ಡಿ ರೇವಣ್ಣರಿಗೆ ಕೊರೊನಾ ಆತಂಕ ಹೆಚ್ಚಾಗಿದೆ. ಸದ್ಯ ಹೆಚ್.ಡಿ.ರೇವಣ್ಣ ಬೆಂಗಳೂರಿನಲ್ಲಿದ್ದಾರೆ. ಇಬ್ಬರು ರೇವಣ್ಣ ಆಪ್ತ ಸಹಾಯಕರು ಸೇರಿ ಒಟ್ಟು ಒಂಬತ್ತು ಜನರ ಸ್ಯಾಂಪಲ್ ಪಡೆದು ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಈ ಪೈಕಿ […]
ಹಾಸನ: ಮಾಜಿ ಸಚಿವ ಹೆಚ್.ಡಿ ರೇವಣ್ಣಗೂ ಕೊರೊನಾ ಭೀತಿ ಶುರುವಾಗಿದೆ. ಏಕೆಂದ್ರೆ ರೇವಣ್ಣ ಬೆಂಗಾವಲು ವಾಹನದಲ್ಲಿ ಕೆಲಸ ಮಾಡುತ್ತಿರೋ ನಾಲ್ವರು ಪೊಲೀಸರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬೆಂಗಳೂರಿನಲ್ಲಿರೋ ಮೂವರೂ ಹಾಗು ಹಾಸನದಲ್ಲಿರೋ ಓರ್ವ ಸಿಬ್ಬಂದಿಗೆ ಸೇರಿ ನಾಲ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಹೆಚ್.ಡಿ ರೇವಣ್ಣರಿಗೆ ಕೊರೊನಾ ಆತಂಕ ಹೆಚ್ಚಾಗಿದೆ. ಸದ್ಯ ಹೆಚ್.ಡಿ.ರೇವಣ್ಣ ಬೆಂಗಳೂರಿನಲ್ಲಿದ್ದಾರೆ. ಇಬ್ಬರು ರೇವಣ್ಣ ಆಪ್ತ ಸಹಾಯಕರು ಸೇರಿ ಒಟ್ಟು ಒಂಬತ್ತು ಜನರ ಸ್ಯಾಂಪಲ್ ಪಡೆದು ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಈ ಪೈಕಿ ನಾಲ್ವರ ವರದಿ ಪಾಸಿಟಿವ್ ಬಂದಿದೆ. ಇಂದು ರೇವಣ್ಣರಿಗೂ ಕೊರೊನಾ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.