Report ಬರೋಕೆ ಮುನ್ನ ಸೋಂಕಿತನ ಮೃತದೇಹ ಹಸ್ತಾಂತರ, ಜನರಿಗೆ ಶುರುವಾಯ್ತು ಢವಢವ, ಎಲ್ಲಿ?
ಚಾಮರಾಜನಗರ: ಆರೋಗ್ಯ ಅಧಿಕಾರಿಗಳ ಮಹಾ ಎಡವಟ್ಟಿನಿಂದ ಜಿಲ್ಲೆಯ ಯಳಂದೂರು ಪಟ್ಟಣದ ನಿವಾಸಿಗಳಲ್ಲಿ ಇದೀಗ ಆತಂಕ ಮನೆಮಾಡಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಸೋಂಕಿತನೊಬ್ಬನನ್ನ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ನಡುವೆ, ಮೃತನ ಕೊವಿಡ್ ಪರೀಕ್ಷಾ ವರದಿ ಬರೋಕೆ ಮುನ್ನ ಅಧಿಕಾರಿಗಳು ಕುಟುಂಬಸ್ಥರಿಗೆ ಮೃತದೇಹವನ್ನ ಹಸ್ತಾಂತರಿಸಿದ್ದಾರೆ. ಇದೀಗ, ಆತನ ಲ್ಯಾಬ್ ರಿಪೋರ್ಟ್ನಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಈ ನಡುವೆ, ಮೃತನ ಅಂತ್ಯಕ್ರಿಯೆಯಲ್ಲಿ ಪಟ್ಟಣದ ನೂರಾರು ಜನರು ಹಾಗೂ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಭಾಗಿಯಾಗಿದ್ರು. […]
Follow us on
ಚಾಮರಾಜನಗರ: ಆರೋಗ್ಯ ಅಧಿಕಾರಿಗಳ ಮಹಾ ಎಡವಟ್ಟಿನಿಂದ ಜಿಲ್ಲೆಯ ಯಳಂದೂರು ಪಟ್ಟಣದ ನಿವಾಸಿಗಳಲ್ಲಿ ಇದೀಗ ಆತಂಕ ಮನೆಮಾಡಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಸೋಂಕಿತನೊಬ್ಬನನ್ನ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ನಡುವೆ, ಮೃತನ ಕೊವಿಡ್ ಪರೀಕ್ಷಾ ವರದಿ ಬರೋಕೆ ಮುನ್ನ ಅಧಿಕಾರಿಗಳು ಕುಟುಂಬಸ್ಥರಿಗೆ ಮೃತದೇಹವನ್ನ ಹಸ್ತಾಂತರಿಸಿದ್ದಾರೆ.
ಇದೀಗ, ಆತನ ಲ್ಯಾಬ್ ರಿಪೋರ್ಟ್ನಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಈ ನಡುವೆ, ಮೃತನ ಅಂತ್ಯಕ್ರಿಯೆಯಲ್ಲಿ ಪಟ್ಟಣದ ನೂರಾರು ಜನರು ಹಾಗೂ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಭಾಗಿಯಾಗಿದ್ರು. ಇದರಿಂದ, ಯಳಂದೂರು ಪಟ್ಟಣದಲ್ಲಿ ಆತಂಕ ಮನೆಮಾಡಿದೆ.