ಮುಂದುವರೆದ ನಿರ್ಲಕ್ಷ್ಯ: ಐದಾರು ಆಸ್ಪತ್ರೆ ಸುತ್ತಿದರೂ ಸಿಗಲಿಲ್ಲ ಚಿಕಿತ್ಸೆ, ವೃದ್ಧ ಸಾವು
ಬೆಂಗಳೂರು: ರಾಜಧಾನಿ ಸಮಸ್ಯೆಗಳ ಆಗರವಾಗಿದೆ. ಕಿಲ್ಲರ್ ಕೊರೊನಾ ನಡುವೆಯೂ ಖಾಸಗಿ ಆಸ್ಪತ್ರೆಗಳು ಬೇಜವಬ್ದಾರಿತನದಿಂದ ವರ್ತಿಸುತ್ತಿವೆ. ಇಂದು ಕೂಡ ಬೆಂಗಳೂರಲ್ಲಿ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮತ್ತೊಬ್ಬರ ಬಲಿಯಾಗಿದೆ? ಸರ್ಕಾರ ಎಷ್ಟೇ ಚಾಟಿ ಬೀಸಿದರೂ ಖಾಸಗಿ ಆಸ್ಪತ್ರೆಗಳು ಮಾತ್ರ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಯಾಕಂದ್ರೆ ಇಂದು ಕೂಡ ವೈದ್ಯರ ನಿರ್ಲಕ್ಷ್ಯಕ್ಕೆ ಒಬ್ಬ ವೃದ್ಧ ಬಲಿಯಾಗಿದ್ದಾರೆ. ಆರ್.ಟಿ.ನಗರ ನಿವಾಸಿ ಬಾಲಕೃಷ್ಣ ಎಂಬ ವೃದ್ಧ ಇಂದು ಬೆಳ್ಳಗ್ಗೆ ತೀವ್ರ ಉಸಿರಾಟ ತೊಂದರೆ ಹಾಗೂ ಲೋ ಬಿಪಿಯಿಂದ ಬಳಲುತ್ತಿದ್ದರು. ಆ್ಯಂಬುಲೆನ್ಸ್‌ಗೆ ಸಂಬಂಧಿಕರು ಕರೆ ಮಾಡಿದರೂ ಆ್ಯಂಬುಲೆನ್ಸ್ […]

ಬೆಂಗಳೂರು: ರಾಜಧಾನಿ ಸಮಸ್ಯೆಗಳ ಆಗರವಾಗಿದೆ. ಕಿಲ್ಲರ್ ಕೊರೊನಾ ನಡುವೆಯೂ ಖಾಸಗಿ ಆಸ್ಪತ್ರೆಗಳು ಬೇಜವಬ್ದಾರಿತನದಿಂದ ವರ್ತಿಸುತ್ತಿವೆ. ಇಂದು ಕೂಡ ಬೆಂಗಳೂರಲ್ಲಿ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮತ್ತೊಬ್ಬರ ಬಲಿಯಾಗಿದೆ?
ಸರ್ಕಾರ ಎಷ್ಟೇ ಚಾಟಿ ಬೀಸಿದರೂ ಖಾಸಗಿ ಆಸ್ಪತ್ರೆಗಳು ಮಾತ್ರ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಯಾಕಂದ್ರೆ ಇಂದು ಕೂಡ ವೈದ್ಯರ ನಿರ್ಲಕ್ಷ್ಯಕ್ಕೆ ಒಬ್ಬ ವೃದ್ಧ ಬಲಿಯಾಗಿದ್ದಾರೆ. ಆರ್.ಟಿ.ನಗರ ನಿವಾಸಿ ಬಾಲಕೃಷ್ಣ ಎಂಬ ವೃದ್ಧ ಇಂದು ಬೆಳ್ಳಗ್ಗೆ ತೀವ್ರ ಉಸಿರಾಟ ತೊಂದರೆ ಹಾಗೂ ಲೋ ಬಿಪಿಯಿಂದ ಬಳಲುತ್ತಿದ್ದರು.
ಆ್ಯಂಬುಲೆನ್ಸ್‌ಗೆ ಸಂಬಂಧಿಕರು ಕರೆ ಮಾಡಿದರೂ ಆ್ಯಂಬುಲೆನ್ಸ್ ಬಂದಿಲ್ಲ. ಹೀಗಾಗಿ ಕ್ಯಾಬ್ ಮಾಡಿಕೊಂಡು ನಾಲ್ಕೈದು ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಅದ್ರೆ ಎಲ್ಲೂ ಅವರಿಗೆ ಬೆಡ್ ಸಿಕಿಲ್ಲ. ಬೆಡ್ ಇಲ್ಲ ಎಂದು ವಾಪಸ್ ಕಳಿಸಿದ್ದಾರೆ. ಕೊನೆಗೆ ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ವೃದ್ಧ ಕೊನೆಯುಸಿರೆಳೆದಿದ್ರು.
Published On - 1:00 pm, Sun, 2 August 20




