
ಕೊಪ್ಪಳ: ಜಿಲ್ಲೆಯಾದ್ಯಂತ ಸುರಿದ ಮಳೆಗೆ ಒಣಗಿ ಹೋಗಿದ್ದ ಗಿಡಗಳು ಹಚ್ಚ ಹಸಿರಾಗಿ ಮೈತುಂಬಿ ನಿಂತಿವೆ. ಬತ್ತಿ ಹೋಗಿದ್ದ ಕೆರೆಗಳು ತುಂಬಿ ಹರಿಯುತ್ತಿವೆ. ಅದರಲ್ಲೂ ಸತತ ಎರಡ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಲಕ್ಷ್ಮಿದೇವಿ ಕೆರೆ ತುಂಬಿ ಹರಿಯುತ್ತಿದೆ. ಈ ದೃಶ್ಯ ನೋಡುಗರಿಗೆ ಭೂಮಿಯ ಮೇಲೆ ಸ್ವರ್ಗವೇ ನೋಡಿದಷ್ಟು ಖುಷಿ ತಂದಿದೆ.
ಕೊಪ್ಪಳ ಜಿಲ್ಲೆ ಕನಕಗಿರಿಯ ಕನಕಾಚಲಪತಿ ದೇವಸ್ಥಾನದ ಬಳಿ ಇರುವ ಲಕ್ಷ್ಮೀದೇವಿ ಕೆರೆ ಹಲವಾರು ವರ್ಷಗಳಿಂದ ಬತ್ತಿಹೋಗಿತ್ತು. ಆದರೆ ಈಗ ವರ್ಷಧಾರೆಯ ಆರ್ಭಟಕ್ಕೆ ಕರೆ ಉಕ್ಕಿ ಹರಿಯುತ್ತಿದೆ. ಮೈಕೊರೆಯುವ ಚಳಿಯಲ್ಲಿ, ಹಸಿರು ಪ್ರಕೃತಿ ನಡುವೆ ಮಳೆಯನ್ನು ಲೆಕ್ಕಿಸದೆ ರಮ್ಯ ಮನೋಹರವಾಗಿ, ತುಂಬಿದ ಕೆರೆ ನೋಡಲು ಜನ ಮುಗಿಬಿದ್ದಿದ್ದಾರೆ.
ಜೊತೆಗೆ ಕೆರೆಯಲ್ಲಿ ಹರಿದುಬರುತ್ತಿರುವ ಮೀನುಗಳು ಹಿಡಿಯಲು ನಾ ಮುಂದು ತಾ ಮುಂದು ಎಂದು ಗಾಳ ಹಾಕುತ್ತಿದ್ದಾರೆ. ಪರಿಸರದ ಮಡಿಲಿನಲ್ಲಿ ಬಿಸಿ ಬಿಸಿ ಫಿಶ್ ಫ್ರೈ ಮಾಡಿ ಸವಿಯುತ್ತಿದ್ದಾರೆ. ಬಹಳ ವರ್ಷಗಳ ಬಳಿಕ ಕೆರೆ ತುಂಬಿದ್ದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.